ಜೇವರ್ಗಿ: ದಲಿತ ಸೇನೆ ರಾಜ್ಯಾಧ್ಯಾಕ್ಷರಾದ ಶ್ರೀ ಹಣಮಂತ ಯಳಸಂಗಿ ಅವರ ಆದೇಶದ ಮೇರೆಗೆ ಇಂದು ಜೇವರ್ಗಿಯ ಐಬಿ ಯಲ್ಲಿ ಕರೆದ ದಲಿತ ಸೇನೆ ತಾಲೂಕು ಸಮಿತಿ ಸಭೆ ಜರುಗಿತು.ರಾಜ್ಯದಲ್ಲಿ ನಡೆಯುತ್ತಿರುವ ಪ್ರಸಕ್ತ ವಿಧ್ಯಾಮಾನಗಳ ಬಗ್ಗೆ ಚರ್ಚೆ ಮಾಡಲಾಯಿತು.
ಸಭೆಯಲ್ಲಿ ರಾಜ್ಯದಲ್ಲಿ ದಲಿತ,ಹಿಂದುಳಿದ,ಅಲ್ಪಸಂಖ್ಯಾರ ಆಶಾಧಾಯಕ ಸಂಘಟನೆಯಾಗಿ ದಲಿತ ಸೇನೆ ಮುನ್ನುಗ್ಗುತ್ತಿದೆ,ಈ ಸಂಘಟನೆಗೆ ಕಾರ್ಯಕರ್ತರೇ ಜೀವಾಳು,ಇನ್ನು ಮುಂದೆ ಪ್ರತಿಯೊಂದು ಹಳ್ಳಿಯಲ್ಲಿ ಸಂಚರಿಸಿ ಸಂಘಟನೆ ಬಲಿಷ್ಠ ಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವ್ರತ್ತರಾಗುವಂತೆ ಕರೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ದಲಿತ ಸೇನೆ ಜೇವರ್ಗಿಯ ಕೆಲವು ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ದಲಿತ ಸೇನೆ ತಾಲೂಕು ಉಪಾಧ್ಯಕ್ಷರಾಗಿ,ಖಮರ್ ಪೀರಾಸಾಬ್,ಯುವ ಘಟಕದ ಉಪಾಧ್ಯಕ್ಷರಾಗಿ ಪ್ರಜ್ವಲ ಜೇರಟಗಿ, ವಿದ್ಯಾರ್ಥಿ ಘಟಕದ ಪ್ರಧಾನ ಕಾರ್ಯದರ್ಶಿ ಅಕ್ಷರ ಪಟೇಲ್ ಅವರನ್ನು ಆಯ್ಕೆ ಮಾಡಿ ಸಕ್ರೀಯವಾಗಿ ತೊಡಗುವಂತೆ ಕರೆ ನೀಡಲಾಯಿತು.
ದಲಿತ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಗೋಲಾ ,ದಲಿತ ಸೇನೆ ತಾಲೂಕು ಅಧ್ಯಕ್ಷರಾದ ಶಿವಶರಣು,ಮಂದೇವಾಲ,ಉಪಾಧ್ಯಕ್ಷರಾದ ಜಗದೀಶ್ ನಡಗಟ್ಟಿ, ಶಹಾಹುಸೇನ್ ,ಪ್ರಧಾನ ಕಾರ್ಯದರ್ಶಿ ಭಾಗೇಶ್ ಸರನಾಳ,ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಪ್ರಕಾಶ್ ಕಾಂಬಳೆ ಮಾರಡಗಿ,ಪರಶುರಾಮ ಹೊಸಮನಿ,ಇನ್ನು ಅನೇಕ ದಲಿತ ಸೇನೆ ಪದಾಧಿಕಾರಿಗಳು, ಕಾರ್ಯಕರ್ತರು, ಭಾಗವಹಿದ್ದರು.