ಬಲಿಷ್ಠ ರಾಷ್ಟ್ರ ಕಟ್ಟಲು ಗುಣಮಟ್ಟದ ಶಿಕ್ಷಣ ಅಗತ್ಯ; ಸರಡಗಿ ಶ್ರೀಗಳು

0
21

ಕಲಬುರಗಿ; ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ಬಲಿಷ್ಠ ರಾಷ್ಟ್ರ ಕಟ್ಟಲು ಸಹಕಾರಿಗುತ್ತದೆ ಎಂದು ಶ್ರೀನಿವಾಸ ಸರಡಗಿ ಪೂಜ್ಯರಾದ ಡಾ. ರೇವಣಸಿದ್ದ ಶಿವಾಚಾರ್ಯರು ಹೇಳಿದರು.

ನಗರದ ತಾಜ ಸುಲ್ತಾನಪುರ ರಸ್ತೆಯಲ್ಲಿರುವ ಕಲ್ಪವೃಕ್ಷ ಶಿಕ್ಷಣ ಸಂಸ್ಥೆಯ ತರಗತಿಯ ಕೊಠಡಿಗಳ ಲೋಕಾರ್ಪಣೆ ಹಾಗೂ ದಿ. ಬಸವರಾಜ ಶಹಾಪೂರಕರ ಸಾಂಸ್ಕೃತಿಕ ವೇದಿಕೆ ಉದ್ಘಾಟಿಸಿ ಆಶೀರ್ವಚನ ನೀಡುತ್ತಾ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಮನಸ್ಸು ಬಿಳಿ ಹಾಳೆಯಂತೆ ಇರುತ್ತದೆ. ತಾವು ಹಾಳೆಯ ಮೇಲೆ ಏನು ಬರೆಯುತ್ತಿರಿ ಅದನ್ನು ಮೂಡುತ್ತದೆ ಅದೇ ರೀತಿ ಶಿಕ್ಷಕರು ಪಾಲಕರು ಸೇರಿ ಒಳ್ಳೆಯ ಸಂಕಲ್ಪದೊಂದಿಗೆ ಮಕ್ಕಳನ್ನು ಬೆಳೆಸಿ ಗುಣಮಟ್ಟದ ಶಿಕ್ಷಣ ನೀಡಿದರೆ ಭಾವಿ ಭವಿಷ್ಯದ ಕುಡಿಗಳಾಗುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.

Contact Your\'s Advertisement; 9902492681

ಸಂಸ್ಥೆಯ ಅಧ್ಯಕ್ಷರಾದ ರವಿಕುಮಾರ ಶಹಾಪೂರಕರ ಮಾತನಾಡುತ್ತಾ ಬಳಸಿಕೊಂಡವರನ್ನು ಮರೆತು ಬಿಡು ಆದರೆ ಬೆಳೆಸಿದವರನ್ನು ಮಾತ್ರ ಯಾವತ್ತು ಮರೆಯಬೇಡ ಎನ್ನುವ ಹಾಗೆ ತಾಯಿ -ತಂದೆಯ ಜೊತೆಗೆ ಪಾಲಕರು ಸಹಿತ ನನ್ನನ್ನು ಆಶೀರ್ವದಿಸಿ ಶಿಕ್ಷಣ ಸಂಸ್ಥೆ ಬೆಳೆಯುವುದಕ್ಕೆ ಸಹಕಾರ ನೀಡಿದ್ದೀರಿ. ಇಂತಹ ಸ್ಪರ್ಧಾತ್ಮಕ ಸಮಯದಲ್ಲಿಯೂ ನನ್ನನ್ನು ಕೈಹಿಡಿದು ಬೆಳೆಸಿದ್ದೀರಿ ಅದಕ್ಕಾಗಿಯೇ ನಾವು ಗುಣಮಟ್ಟದ ಶಿಕ್ಷಣ ಕೊಡುವುದಕ್ಕೆ ಪ್ರಯತ್ನಿಸುತ್ತಿದ್ದೇವೆ. ತಮ್ಮ ಸಲಹೆ ಸಹಕಾರ ಹೀಗೆ ಮುಂದುವರೆಯಲೆಂದು ವಿನಂತಿಸಿಕೊಳ್ಳುತ್ತಿದ್ದೇನೆ.

ಮುಖ್ಯ ಅತಿಥಿಗಳಾಗಿ ಜನಪರ ಹೋರಾಟಗಾರ ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ, ತಾಜ ಸುಲ್ತಾನಪುರ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಸಂಜು ಕುಮಾರ ಜವರಕರ, ನಾಗಿಂದ್ರಯ್ಯ ಸ್ವಾಮಿ ಮಠ, ಸುನಿಲ ಮದನಕರ,ಗುರು ಹಾಂವಾ, ಜಗನ್ನಾಥ ಬಡಿಗೇರ ಅಖP, ಶರಣು ಹಂಗರಗಿ, ಶಶಿಕುಮಾರ ಶಹಾಪೂರಕರ, ಲಕ್ಷ್ಮಣ ಜಾಧವ ಆಗಮಿಸಿದರು. ಕಾರ್ಯಕ್ರಮದಲ್ಲಿ ರೇವಣಸಿದ್ದಯ್ಯ ಹೊಸಮಠ,ರೇವಣಸಿದ್ದ ಕಾಲಿಮರ, ಗುಂಡಪ್ಪ ಮಡಿವಾಳ, ಶಿಕ್ಷಕರಾದ ಅರ್ಚನಾ ಶಹಾಪೂರಕರ,ವಸುಮತಿ ತಳವಾರ,ವೈಶಾಲಿ ರಾಂಬಾಣ, ಸಪ್ನಾ ಆಖಿ, ಶಶಿಕಲಾ ಕುಂಬಾರ, ಪೂಜಾ ಚವ್ಹಾಣ,ಭಾಗ್ಯ ಸುತಾರ, ಪ್ರಿಯಾಂಕ ಹೊಸಮಠ,ವಿಜಯಲಕ್ಷ್ಮಿ ಚಿಳ್ಳ ಸೇರಿದಂತೆ ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಅನೇಕ ಜನ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಜೂನಿಯರ್ ರಾಜಕುಮಾರ ಎಂದೆ ಪ್ರಖ್ಯಾತಿ ಪಡೆದ ಹೇಮಂತ ಮಾಲಗತ್ತಿ ಅವರು ಅದ್ಭುತ ನಟನೆಯ ಮೂಲಕ ಜನರನ್ನು ರಂಜಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here