ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಸೂಕ್ತ: ಡಾ. ರಹೀಮ್

0
20

ಶಹಾಬಾದ: ಜೀವನದಲ್ಲಿ ಯಾವಾಗ ಯಾವ ರೋಗಗಳು ಬರುತ್ತವೆ ಎಂಬುದು ಯಾರಿಗೂ ಗೊತ್ತಿಲ್ಲ.ಆದ್ದರಿಂದ ಕಡ್ಡಾಯವಾಗಿ ಪ್ರತಿಯೊಬ್ಬರೂ ಆರೋಗ್ಯ ತಪಾಸಣೆ ಮಾಡುವುದು ಸೂಕ್ತ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಬ್ದುಲ್ ರಹೀಮ್ ಹೇಳಿದರು.

ಅವರು ಎಐಡಿವೈಓ ಸಂಘಟನೆಯ 59ನೇ ಸಂಸ್ಥಾಪನಾ ದಿನದ ಅಂಗವಾಗಿ ಜಿಲ್ಲಾ ಸಮಿತಿ ವತಿಯಿಂದ ಹನುಮಾನ ನಗರದ ಬಾಲಕರ ವಸತಿ ನಿಲಯದಲ್ಲಿ ಹಮ್ಮಿಕೊಂಡ ಉಚಿತ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ನಮ್ಮ ಭಾಗದಲ್ಲಿ ಅತಿ ಹೆಚ್ಚು ಕಾರ್ಮಿಕರು, ಬಡವರು ಮತ್ತು ಸ್ಲಮ್ ಏರಿಯಾಗಳು ಇರುವುದರಿಂದ, ಇಲ್ಲಿ ಅನೇಕ ಜನರು ಆರೋಗ್ಯದ ಸಮಸ್ಯೆಯನ್ನು ಎದುರಿಸುತ್ತಾರೆ, ಪ್ರತಿಯೊಬ್ಬರು ತಮ್ಮ ಆರೋಗ್ಯ ತಪಾಸಣೆ ಕಡ್ಡಾಯವಾಗಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಎಐಡಿವೈಓ ರಾಜ್ಯ ಉಪಾಧ್ಯಕ್ಷರಾದ ಚನ್ನಬಸವ ಜಾನೇಕಲ ಮಾತನಾಡಿ, ಯುವಜನರಲ್ಲಿ ನೀತಿ, ನೈತಿಕತೆ ಮತ್ತು ಮೌಲ್ಯಗಳನ್ನು ಬೆಳೆಸುವುದರ ಜೊತೆಗೆ ಗ್ರಾಮೀಣ ಕ್ರೀಡೆ, ವೈದ್ಯಕೀಯ ಶಿಬಿರ, ಕಣ್ಣಿನ ತಪಾಸಣೆ ಶಿಬಿರ, ಉಚಿತ ದಂತ ಶಿಬಿರಗಳನ್ನು ಸಂಘಟನೆಯಿಂದ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಸಂಘಟನೆಯ 59ನೇ ಸಂಸ್ಥಾಪನ ದಿನದ ಅಂಗವಾಗಿ ಈ ಉಚಿತ ವೈದ್ಯಕೀಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಶಿಬಿರದಲ್ಲಿ ಸುಮಾರು 230 ರೋಗಿಗಳ ತಪಾಸಣೆ ಮಾಡಿ ಔಷಧಿಗಳನ್ನು ವಿತರಿಸಲಾಯಿತು, ಜನರಲ್ ಸರ್ಜರಿ ಹಾಗೂ ಕಣ್ಣಿನ ಶಸ್ತ್ರಚಿಕಿತ್ಸೆ ಹಾಗೂ ಇತರೆ ಆರೋಗ್ಯ ಸಮಸ್ಯೆ ಇರುವ ಸುಮಾರು 25 ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ಸೂಚಿಸಿ ಗುರುತಿನ ಚೀಟಿಯನ್ನು ವಿತರಿಸಲಾಗಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಜಗನ್ನಾಥ.ಎಸ್.ಹೆಚ್ ತಿಳಿಸಿದರು.

ಕಾರ್ಯಕ್ರಮದ ಅತಿಥಿಗಳಾದ ವೈದ್ಯರಾದ ಡಾ. ಶಂಕರ ರಾಠೋಡ, ಮೆಡಿಕಲ್ ಸರ್ವಿಸ್ ಸೆಂಟರ ನ ಜಿಲ್ಲಾಧ್ಯಕ್ಷೆ ಡಾ. ಸೀಮಾ ದೇಶಪಾಂಡೆ ಮಾತನಾಡಿದರು.

ವಸತಿ ನಿಲಯದ ಮೇಲ್ವಿಚಾರಕ ರಮೇಶ ನಂದಿಕೂರ, ಕಲಬುರಗಿ ಜೇಮ್ಸ್ ಆಸ್ಪತ್ರೆಯ ವೈದ್ಯರಾದ ಡಾ. ಗಾಯಿತ್ರಿ ರಾಥೋಡ, ಡಾ. ಶಶಿಕಲಾ, ಡಾ.ಪ್ರಸಾದ, ಡಾ. ಜುಬೇರಿಯ, ಡಾ ಸಂಜೀವ ನವಲೆ, ಡಾ. ಕಿಮೋ ಓರೆ, ಡಾ. ವೈಷ್ಣವಿ ಗಾಯಕ್ವಾಡ, ಡಾ. ಸುಲ್ತಾನ್, ಡಾ.ರಿತೇಶ್ ರುಮ್ಮನಗೂಡ, ಡಾ. ಅರವಿಂದ್ ಪಾಟೀಲ ಸೇರಿದಂತೆ ವೈದ್ಯರ ತಂಡ ರೋಗಿಗಳನ್ನು ತಪಾಸಣೆ ಮಾಡಿದರು.

ಈ ಸಂದರ್ಭದಲ್ಲಿ ಕರವೇ ಯಲ್ಲಾಲಿಂಗ ಹಯ್ಯಾಳಕರ್, ಸಿದ್ದು ಚೌದ್ರಿ, ರಾಜೇಂದ್ರ ಆತನೂರ, ಈಶ್ವರ. ಕೆ, ಪುಟ್ಟರಾಜ ಲಿಂಗಶೆಟ್ಟಿ, ರಘು ಪವಾರ, ರಮೇಶ್ ದೇವಕರ. ಕಿರಣ್ ಮಾನೆ, ಹನುಮಂತು, ಪವನ ಮಾನೆ, ದೇವರಾಜ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here