ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರ ಅರ್ಜಿ ಸ್ವೀಕಾರ

0
10

ಸಾರ್ವಜನಿಕರ ಕೆಲಸಗಳಿಗೆ ವಿಳಂಬ ಮಾಡುವುದು ಸರಿಯಲ್ಲ: ಡಿವೈಎಸ್ಪಿ ಹಣಮಂತ್ರಾಯ

ಸುರಪುರ: ಸಾರ್ವಜನಿಕರು ತಮ್ಮ ಯಾವುದೇ ಕೆಲಸಗಳಿಗೆ ಕಚೇರಿಗೆ ಬಂದರೆ ವಿಳಂಬ ನೀತಿ ಅನುಸರಿಸದೆ ಆದಷ್ಟು ಬೇಗನೆ ಕೆಲಸ ಮಾಡಿಕೊಡುವಂತೆ ವಿವಿಧ ಇಲಾಖೆ ಅಧಿಕಾರಿ,ಸಿಬ್ಬಂದಿಗಳಿಗೆ ಯಾದಗಿರಿ ಲೋಕಾಯುಕ್ತ ಡಿವೈಎಸ್ಪಿ ಹಣಮಂತ್ರಾಯ ಸೂಚಿಸಿದರು.

ನಗರದ ತಹಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕರ ಕುಂದು ಕೊರತೆಗಳ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಒಂದು ಅರ್ಜಿ ಕೊಟ್ಟರೆ ಅದಕ್ಕೆ ತಿಂಗಳಾನುಗಟ್ಟಲೆ ಜನರನ್ನು ಕಚೇರಿಗೆ ಅಲೆಸಿದರು,ಅವರು ಇಲಾಖೆಗಳ ಕೆಲಸದ ಬಗ್ಗೆ ಅಪನಂಬಿಕೆ ಹೊಂದುತ್ತಾರೆ.ಅಲ್ಲದೆ ಯಾವುದೇ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇರುವುದು ಸಾರ್ವಜನಿಕರ ಕೆಲಸ ಮಾಡಲು ಎನ್ನುವುದನ್ನು ಮರೆಯಬಾರದು,ಕಾನೂನು ಬದ್ಧವಾಗಿರುವ ಅರ್ಜಿಯಾಗಿದ್ದರೆ ಹೆಚ್ಚು ಸತಾಯಿಸದೆ ಕೆಲಸ ಮಾಡಿಕೊಡಿ,ಒಂದು ವೇಳೆ ಕಾನೂನು ಬಾಹಿರವಾದ ಅರ್ಜಿಯಾಗಿದ್ದರೆ ಅದು ಆಗುವುದಿಲ್ಲ ಎಂದು ನೇರವಾಗಿ ತಿಳಿಸಿ ಹಿಂಬರಹ ಕೊಡಿ,ಅದು ಬಿಟ್ಟು ತಿಂಗಳುಗಟ್ಟಲೆ ಅಲೆಸಿದರೆ ಅವರು ಕೆಲಸ ಕಾರ್ಯ ಬಿಟ್ಟು ಕೇವಲ ಕಚೇರಿಗೆ ಅಲೆಯಬೇಕಾಗುತ್ತದೆ ಎಂದು ತಿಳಿಸಿದರು.

Contact Your\'s Advertisement; 9902492681

ಅಲ್ಲದೆ ಇದೇ ಸಂದರ್ಭದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಯೊಂದು ಅನೇಕ ತಿಂಗಳುಗಳಿಂದ ಬಾಕಿ ಉಳಿಸಿದ್ದಕ್ಕಾಗಿ ಬೇಸರಗೊಂಡು ಎಲ್ಲಾ ಕಂದಾಯ ಇಲಾಖೆಯ ಸಿಬ್ಬಂದಿಗಳಿಗೆ ಕರೆದು ಖಡಕ್ ಎಚ್ಚರಿಕೆ ನೀಡಿ,ಇನ್ನು ಒಂದು ತಿಂಗಳೊಳಗೆ ಎಲ್ಲಾ ಅರ್ಜಿಗಳ ವಿಲೇವಾರಿ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಲೋಕಾಯುಕ್ತ ಸಿಪಿಐ ಹಣಮಂತ.ಬಿ.ಸಣಮನಿ ಹಾಗೂ ಸುರಪುರ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್ ಮಾತನಾಡಿದರು.ಒಟ್ಟು 6 ಅರ್ಜಿಗಳು ಸಲ್ಲಿಕೆಯಾಗಿದ್ದು,ಎಲ್ಲಾ ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿಗೊಳಿಸಿದರು.

ಈ ಸಂದರ್ಭದಲ್ಲಿ ಗ್ರೇಡ-2 ತಹಸಿಲ್ದಾರ್ ಮಲ್ಲಯ್ಯ ದಂಡು ಉಪಸ್ಥಿತರಿದ್ದರು.ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here