ಪರಿಚಲನೆ ಅಭಿನಂದನಾ ಗ್ರಂಥ ಲೋಕಾರ್ಪಣೆ

0
3

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಜರುಗುತ್ತಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ನಾಗೇಂದ್ರ ಮಸೂತಿ ಅವರ ಕುರಿತು ರಚಿತ “ಪರಿಚಲನೆ” ಅಭಿನಂದನಾ ಗ್ರಂಥವನ್ನು ಹೈದರಾಬಾದ ನಗರದ ಉಸ್ಮಾನಿಯಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಪೆÇ್ರ. ಲಿಂಗಣ್ಣ ಗೋನಾಳ ಅವರು ಲೋಕಾರ್ಪಣೆ ಮಾಡಿದರು.

ಗ್ರಂಥ ಬಿಡುಗಡೆಗೊಳಿಸಿ ಡಾ. ಮಸೂತಿಯವರ ವೃತಿ ಜೀವನ ಮತ್ತು ಸಾಹಿತ್ಯಿಕ ಜೀವನದ ಕುರಿತು ಮಾತನಾಡಿದರು.
ಮುಂದುವರೆದು ಮಸೂತಿಯವರು ಈ ಭಾಗದ ಪ್ರಮುಖ ಸಾಹಿತಿಗಳು ಎಂದು ನುಡಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ನಿವೃತ ಪ್ರಾಧ್ಯಾಪಕರಾದ ಪೆÇ್ರ. ವಿ.ಜಿ. ಪೂಜಾರ ಅವರು ಪರಿಚಲನೆ ಗ್ರಂಥ ಮತ್ತು ಮಸೂತಿ ಅವರ ವೃತ್ತಿ ಬದುಕಿನ ಕುರಿತು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಜೇಂದ್ರ ಕೊಂಡಾ ಅವರು ವಹಿಸಿಕೊಂಡು ಮಸೂತಿ ಅವರ ಶೈಕ್ಷಣಿಕ ಬದುಕಿನ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಪೆÇ್ರ. ಕಲ್ಯಾಣರಾವ ಪಾಟೀಲ ಡಾ. ಶಿವಾಜಿ ಮೇತ್ರೆ, ಡಾ. ಪುಷ್ಪಾವತಿ, ಡಾ. ಸಾರಿಕಾ ದೇವಿ ಕಾಳಗಿ ಅವರು ವೇದಿಕೆಯಲ್ಲಿ ಇದ್ದರು.

ಕಾರ್ಯಕ್ರಮವನ್ನು ಡಾ. ಶಿವಗಂಗಾ ಬಿಲಗುಂದಿ ಅವರು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಶಿಕ್ಷಕರು, ಪ್ರತಿನಿಧಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here