ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎಚ್ ಎಸ್. ಜಂಗೆ ಅವರು ಜಪಾನ್ ರಾಜ್ಯಧಾನಿ ಟೋಕಿಯೊದ ಕೊಗಾನೆ ಕ್ಯಾಂಪಸ್ ಅಲ್ಲಿ ಜುಲೈ 5 ರಿಂದ 8 ರವರೆಗೆ ನಾಲ್ಕು ದಿನಗಳ ಕಾಲ ನಡೆಯುವ “ಸೆಕೆಂಡ್ ಇಂಟರ್ನ್ಯಾಷನಲ್ ಅಲೈನ್ಸ್ ಫಾರ್ ಹೆಲ್ಥ್ ಫೀಸಿಕಲ್ ಎಜುಕೇಷನ್ ಡಾನ್ಸ್ ಅಂಡ್ ಸ್ಪೋರ್ಟ್ಸ್ ವರ್ಲ್ಡ್ ಕಾಂಗ್ರೆಸ್”
ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ಪ್ರಬಂಧವನ್ನು ಮಂಡಿಸಲುಡಾ. ಎಚ್ ಎಸ್ ಜಂಗೆ ಅವರು ಭಾಗವಹಿಸಲಿದ್ದಾರೆ. ಈ ಸಮ್ಮೇಳನವು ನಾಲ್ಕು ದಿನಗಳ ಕಾಲ ನಡೆಯಲಿದೆ.
ಜಗತ್ತಿನ ಹಲವು ಕ್ರೀಡಾ ವಿಷಯ ತಜ್ಞರು ತಮ್ಮ ಪ್ರಬಂಧನೆ ಮಂಡನೆ ಮಾಡುತ್ತಿದ್ದಾರೆ ಎಂದು ಕೊಗಾನೆ ವಿಶ್ವವಿದ್ಯಾಲಯದ ಸಮ್ಮೇಳನ ಆಯೋಜಕರು ತಿಳಿಸಿದ್ದಾರೆ.