ರೋಗಿಗಳ ಆತ್ಮವಿಶ್ವಾಸ ಹೆಚ್ಚಿಸಲು ರೋಗಿಗಳೊಂದಿಗೆ ವೈದ್ಯರು ಹೆಚ್ಚು ಮಾತಾಡಬೇಕು: ಡಾ. ಫಾರುಕ್ ಮನ್ನೂರ

0
101

ಕಲಬುರಗಿ: ರೋಗಿಗಳೊಂದಿಗೆ ವೈದ್ಯರು ಹೆಚ್ಚುಹೊತ್ತು ಮಾತನಾಡಿದಷ್ಟು ಆತ್ಮವಿಶ್ವಾಸ ರೋಗಿಗಳಲ್ಲಿ ಬೆಳೆಯುತ್ತದೆ ಜತೆಗೆ ಕಾಯಿಲೆಯ ಬಗ್ಗೆ ವೈದ್ಯರಿಗೂ ಸ್ಪಷ್ಠತೆ ಸಿಗುತ್ತದೆ. ಇದರಿಂದಾಗಿ ಅಗತ್ಯ ಚಿಕಿತ್ಸೆಯನ್ನು ಅಂತ್ಯಂತ ಪರಿಣಾಮಕಾರಿಯಾಗಿ ನೀಡಲು ಸಹಾಯವಾಗುತ್ತದೆ. ಹೀಗಾಗಿ, ವೈದ್ಯರು ಸಾಧ್ಯವಾದಷ್ಟು ವಿವರವಾಗಿ ರೋಗಿಗಳೊಂದಿಗೆ ಸಂವಹನ ನಡೆಸಬೇಕು ಎಂದು ಮನ್ನೂರ ಮಲ್ಟಿಸ್ಪೇಷಾಲಿಟೊ ಆಸ್ಪತ್ರೆಯ ಮುಖ್ಯಸ್ಥ ಡಾ. ಫಾರುಕ್ ಮನ್ನೂರ ಹೇಳಿದರು.

ನಗರದ ರಿಂಗ ರಸ್ತೆಯಲ್ಲಿರುವ ಮನ್ನೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ ನಿಮಿತ್ಯ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂದು ಎಲ್ಲ ಬಗೆಯ ಕಾಯಿಲೆ ಹಾಗೂ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಹೆಚ್ಚಿನ ಜನರು ಅರಿತಿದ್ದಾರೆ. ಎಲ್ಲವನ್ನೂ ಪ್ರಶ್ನಿಸುವುದು ಹಾಗೂ ತಿಳಿಯಲು ಬಯಸುತ್ತಾರೆ. ಗ್ರಾಮೀಣ ಪ್ರದೇಶದ ಜನರು ತಾವು ಅನುಭವಿಸುತ್ತಿರುವ ಸಂಕಟ ಮಾತ್ರ ತಿಳಿಸಿ, ರೋಗ ನಿರ್ಣಯ ಚಿಕಿತ್ಸೆ ಹೀಗೆ ಎಲ್ಲವೂ ವೈದ್ಯರ ಸೂಚನೆಯಂತೆಯೇ ಪಾಲಿಸಲು ಮುಂದಾಗುತ್ತಾರೆ. ಅವರಿಗೂ ಸಹ ಸಂಪೂರ್ಣ ಮಾಹಿತಿ ನೀಡಿ, ಆತ್ಮವಿಶ್ವಾಸ ಮೂಡಿಸಬೇಕು ಹಾಗೂ ಚಿಕಿತ್ಸೆಯ ಆಯ್ಕೆಗಳನ್ನು ಅವರಿಗೇ ನೀಡಬೇಕು. ಹೆಚ್ಚಿನ ಸಂಖ್ಯೆಯ ರೋಗಿಗಳಿಗೆ ಚಿಕಿತ್ಸೆ ನೀಡುವ ಭರದಲ್ಲಿ ರೋಗಿಗಳೊಂದಿಗೆ ಸರಿಯಾಗಿ ಮಾತನಾಡದೇ ಕಾಯಿಲೆ-ಚಿಕಿತ್ಸೆ ನಿರ್ಧರಿಸುವುದು ಸಮಂಜಸವಲ್ಲ. ವೃತ್ತಿಯಲ್ಲಿ ಸೇವೆ ಹೆಚ್ಚಾದಾಗಲೇ ಯಶಸ್ಸುಗಳಿಸಲು ಸಾಧ್ಯ ಎಂದು ಹೇಳಿದರು.

Contact Your\'s Advertisement; 9902492681

ಡಾಮ ಮುಜಮ್ಮಿಲ್, ಡಾ ಸತೀಶ್, ಡಾ. ಶ್ರೀಕಾಂತ್, ಡಾ. ಫೈಜುಲ್ ಸೇರಿದಂತೆ ಆಸ್ಪತ್ರೆ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here