ಸುರಪುರ: ಇವತ್ತಿನ ದಿನಮಾನಗಳಲ್ಲಿ ಗರ್ಭೀಣಿ ಸ್ತ್ರೀಯರಲ್ಲಿ ಮತ್ತು ಮಕ್ಕಳಲ್ಲಿ ಪೌಷ್ಠಿಕತೆ ಕೊರತೆ ಹೆಚ್ಚಾಗಿದ್ದು ಇದನ್ನು ಹೋಗಲಾಡಿಸಲು ಕೇಂದ್ರಸರ್ಕಾರ ಪೋಷಣ ಯೋಜನೆಯನ್ನು ರೋಪಿಸಿದೆ ಈ ಯೋಜನೆ ಸಫಲಗೋಳಿಸುವ ಜವಾಬ್ದರಿಯು ಅಂಗನವಾಡಿ ಕಾರ್ಯಕರ್ತರ ಮೇಲಿದೆ ಎಂದು ಶಾಸಕ ನರಸಿಂಹ ನಾಯಕ(ರಾಜುಗೌಡ) ಹೇಳಿದರು.
ನಗರದ ವೀರಶೈವ ಕಲ್ಯಾನ ಮಂಟಪದ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಪೌಷ್ಠಕ ಕರ್ನಾಟಕ ಜನಾಂದೋಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳು ದೇವರ ಸಮಾನ ಮಕ್ಕಳಿಗೆ ಅತಂಹ ಮಕ್ಕಳು ಇಂದು ಅಪೌಷ್ಠಿಕತೆಯಿಂದರುವುದು ತುಂಬಾ ನೋವಿನ ಸಂಗತಿ ಇತಂಹ ಅಪೌಷ್ಠಿಕತೆಯನ್ನು ಹೋಗಲಾಡಿಸಿ ಅವರನ್ನು ವಿದ್ಯಾವಂತರನ್ನಾಗಿಸಿ ದೇಶದ ಪೃಗತಿಯಲ್ಲಿ ತೊಡಗಿಸಿಕೊಳ್ಳಲು ಅಂಗನವಾಡಿ ಕಾರ್ಯಕರ್ತರ ಶ್ರಮ ಹೆಚ್ಚಾಗಿದೆ ಆದ್ದರಿಂದ ಈ ಕಾರ್ಯಕ್ರಮ ಸಂಪೂರ್ಣ ಲಾಭವನ್ನು ಗರ್ಭಿಣಿಸ್ತ್ರಿಯರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯತ ಅಧ್ಯಕ್ಷ ರಾಜಶೇಖರಗೌಡ ವಜ್ಜಲ ಮಾತನಾಡಿ ಇಂದಿನ ಮಕ್ಕಳಲ್ಲಿ ಅಪೌಷ್ಠಿಕತೆ ಹೆಚ್ಚಾಗಿ ಕಂಡುಬಮದು ಅವರ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಮಾರಕವಾಗಿದೆ ಇದನ್ನು ಹೋಗಲಾಡಿಸಲು ಸರ್ಕಾರ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮವು ಸಫಲತೆ ಹೊಂದಬೇಕಾದರೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರು ಪ್ರತಿ ಮನೆ ಮನೆಗೂ ತೆರಳಿ ಗರ್ಭೀಣಿಸ್ತ್ರಿಯರನ್ನು ಗುರುತಿಸಿ ಅವರಗಿ ಪೌಷ್ಠಿಕ ಅಹಾರ ಮತು ಆರೋಗ್ಯದ ಬಗ್ಗೆ ಅವರಿಗೆ ಅರಿವುಮೋಡಿಸುವುದರಿಂದ ಅಪೌಷ್ಠಕತೆಯನ್ನು ಹೊಗಲಾಡಿಸಬಹುದು ಎಂದು ತಿಳಿಸಿದರು.
ನಂತರ ಗರ್ಭೀಣಿ ಸ್ತ್ರಿಯರಿಗೆ ಸಿಮಂತ ಕಾರ್ಯಕ್ರಮ ಮತ್ತು ಮಕ್ಕಳಿಗೆ ಹಾಲುನೀಡುವುದು ಮತ್ತು ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಭಾಗ್ಯ ಲಕ್ಷ್ಮೀ ಬಾಂಡ ವಿತರಿಸುವ ಕಾರ್ಯಕ್ರಮಗಳು ಜರುಗಿದವು.
ತಾಲೂಕು ಪಂಚಾಯತ ಅಧ್ಯಕ್ಷೆ ಶಾರದಾ ಬೀಮಣ್ಣ ಬೇವಿನಾಳ, ಎಪಿಎಮ್‌ಸಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ, ಎಪಿಎಮ್ ಸಿ ಸದಸ್ಯ ದುರ್ಗಪ್ಪ ಗೋಗಿಕೇರಾ, ನಗರಸಭಾ ಸದಸ್ಯ ಮಹ್ಮದ ಗೌಸ್, ಮುಖಂಡರಾದ ಸುರೇಶ ಸಜ್ಜನ್, ಬೀಮಣ್ಣ ಬೇವಿನಾಳ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನಾ ಓಲೆಕಾರ, ಶಿಶುಅಭಿವೃದ್ಧಿ ಅಧಿಕಾರಿ ಲಾಲಸಾಬ, ಮೀನಾಕ್ಷಿ ಪಾಟೀಲ, ಮೌನೇಶ ಕುಂಬಾರ ಸೇರಿದಂತೆ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರು ಸೇರಿದಂತೆ ಇನ್ನಿತರರಿದ್ದರು