ಕಲಬುರಗಿ: ಸ್ಥಳೀಯ ಕೆಬಿಎನ್ ವಿವಿಯ ಕೆಬಿಎನ್ ಆಸ್ಪತ್ರೆಯಲ್ಲಿ ವೈದ್ಯರ ದಿನವನ್ನು ಆಚರಿಸಲಾಯಿತು.
ರೇಡಿಯೋ ಡಿಗ್ನೋಸಿಸ ವಿಭಾಗದ ಮಾಜಿ ಮುಖಸ್ಥ ಡಾ. ಎಸ್ ಸಿ ದೇಸಾಯಿ ಸರ ಇವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಡಾ ಸಿದ್ದೇಶ ಸಿರವಾರ ಇವರು ವೈದ್ಯರ ದಿನದ ಮಹತ್ವ ತಿಳಿ ಹೇಳಿದರು. ಅಲ್ಲದೇ ಪತ್ರಿಕಾ ದಿನಾಚರಣೆಯ ಶುಭಾಶಯಗಳನ್ನು ಹೇಳಿ ಪತ್ರಿಕೋದ್ಯಮ ಸಮಾಜವನ್ನು ತಿದ್ದುತ್ತದೆ ಎಂದರು.
ಡಾ.ಸದಾಶಿವ ಜಿಡಗೇಕರ ಮತ್ತು ಡಾ.ಅರುಣಕುಮಾರ ಜಿ.ಕುಲಕರ್ಣಿ ವೈದ್ಯರಿಗೆ ಅವರು ನೀಡಿದ ಕೊಡುಗೆಯನ್ನು ಸನ್ಮಾನಿಸಲಾಯಿತು
ಜಗತ್ತಿನಲ್ಲಿ ವೈದ್ಯರ ಪಾತ್ರ ಬಹುಮುಖ್ಯ. ವೈದ್ಯರು ದೇವರ ಸ್ವರೂಪ ಎಂದರೆ ತಪ್ಪಾಗಲಾರದು. ಕೋವಿಡ್ ಸಮಯದಲ್ಲಿ ವೈದ್ಯರೇ ಭುವಿಯನ್ನು ಕಾಪಾಡಿದರು ಎಂದು ಅವಿರತ ಸೇವೆ ನೆನೆಸಲಾಯಿತು.ಡಾ. ಬಿ. ಸಿ ರೊಯ್ ಅವರ ಕೊಡುಗೆಗಳನ್ನು ಸ್ಮರಿಸಲಾಯಿತು. ಡಾ.ಸಾಗರ್ ಬಿ ಸ್ವಾಗತಿಸಿ ನಿರೂಪಿಸಿದರು. ಡಾ. ಪಿ ಎಸ್ ಶಂಕರ್ ಸರ್ ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಸೂಪರಿಂಟೆಂಡೆಂಟ ಡಾ.ಸಿದ್ದಲಿಂಗ ಚೆಂಟ್ಗಿ, ಡಾ ಸಿದ್ರಾಮ್, ಡಾ. ಗುರುಪ್ರಸಾದ್, ಡಾ. ಮೊಯಿನುದ್ದೀನ್, ಡಾ. ದೇವನಿ, ಡಾ. ರಾಧಿಕಾ ಮತ್ತು ಡಾ ಚಂದ್ರಕಲಾ, ಡಾ ಸಚಿನ್ ಶಾ ಡಾ ಮೊಯಿನುದ್ದೀನ, ಡಾ ಸುಜಾತಾ, ಡಾ ಸಂಗ್ರಾಮ್ ಬಿರಾದಾರ, ಡಾ ಪ್ರಾಣೇಶ, ಡಾ ರೂಪಾ ಮತ್ತು ಇತರ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು 70 ವಿದ್ಯಾರ್ಥಿಗಳು ಹಾಜರಿದ್ದರು.
ಈ ಸಂದರ್ಭದಲ್ಲಿ ವೈದ್ಯಕೀಯ ಅಧಿಕ್ಷಕಾರದ ಡಾ ಸಿದ್ಧಲಿಂಗ ಚೆಂಗಟಿ, ಸಿ ಈ ಓ ಹಾಗೂ ಸಹಾಯಕ ಕುಲಸಚಿವೆ ಡಾ. ರಾಧಿಕಾ ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಬೈಟ್ ನೀಡಿದರು.