ಶಹಾಬಾದ :ಎಲ್ಲರಿಗೂ ಸರಕಾರಿ ನೌಕರಿ ಬೇಕು.ಆದರೆ ಸರಕಾರಿ ಶಾಲೆಯಲ್ಲಿ ನಿಮ್ಮ ಮಕ್ಕಳು ಓದುವುದು ಬೇಡ ಎಂದರೆ ಹೇಗೆ ? ಮೊದಲು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸಿ ಎಂದು ಭಂಕೂರ ಗ್ರಾಪಂ ಅಧ್ಯಕ್ಷ ಶರಣಬಸಪ್ಪ ಧನ್ನಾ ಹೇಳಿದರು.
ಅವರು ಮಂಗಳವಾರ ಭಂಕೂರ ಗ್ರಾಮದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ಹಮ್ಮಿಕೊಂಡಿದ್ದ
ಶಾಲಾ ದಾಖಲಾತಿ ಆಂದೋಲನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಆರು ವರ್ಷದ ಮೇಲ್ಪಟ್ಟ ಹೆಣ್ಣಿರಲಿ, ಗಂಡಿರಲಿ ತಪ್ಪದೇ ಸರ್ಕಾರಿ ಶಾಲೆಯಲ್ಲಿ ಮಕ್ಕಳನ್ನು ನೋಂದಾಯಿಸಿ ಮಕ್ಕಳ ಶಿಕ್ಷಣ ಕಲಿಕೆಗೆ ಪಾಲಕರು ಸಹಕರಿಸಬೇಕು.ಶಾಲಾ ಮಕ್ಕಳಿಗಾಗಿ ಉಚಿತ ಸಮವಸ್ತ್ರ, ಹಾಲು, ಪುಸ್ತಕ, ಬಿಸಿಯೂಟ, ಶೂಭಾಗ್ಯ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು ಎಂದರು.
ಶಾಲಾ ಮುಖ್ಯಗುರುಗಳಾದ ಕನಪ್ಪ ಮ್ಯಾಗೇರಿ ಮಾತನಾಡಿ, ರಜೆ ಕಳೆದಿರುವ ಮಕ್ಕಳು ಶಾಲಾ ಆರಂಭದ ದಿನಗಳಲ್ಲಿ ಶಾಲೆಗೆ ಬರುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ನಾವು ಎತ್ತಿನಗಾಡಿ ಮೆರವಣಿಗೆ ಮಾಡುವ ಮೂಲಕ ಗ್ರಾಮದಲ್ಲಿ ದಾಖಲಾತಿ ಆಂದೋಲನ ಮತ್ತು ಶಾಲೆಗೆ ಮಕ್ಕಳನ್ನು ಕಳುಹಿಸಿ ಎಂದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೆವೆ.ಆರರಿಂದ ಹದಿನಾಲ್ಕು ವರ್ಷದ ಮಕ್ಕಳು ಶಾಲೆಯಲ್ಲಿರಬೇಕು.ತಾವುದೇ ರತೀಯ ದುಡಿಮೆಗೆ ಕಳುಹಿಸಬಾರದು.ಅದು ಕಾನೂನು ಅಪರಾಧ ಕೂಡವಾಗುತ್ತದೆ.ಆಡುವ ವಯಸ್ಸಿಯಲ್ಲಿ ಆಡಬೇಕು.ಓದುವ ವಯಸ್ಸಿನಲ್ಲಿ ಓದಬೇಕು.ಆಡುತ್ತ ಕಲಿಯಬೇಕಾಗಿರುವ ಮಕ್ಕಳನ್ನು ಕೆಲಸಕ್ಕೆ ಹಾಕುವುದು ಅಮಾನುಷವಾದುದು.ಸಾರ್ವಜನಿಕರು ಈ ರೀತಿಯಲ್ಲಿ ದುಡಿಯುತ್ತಿರುವ ಮಕ್ಕಳನ್ನು ಕಂಡಾಗ ಅವರ ಪೋಷಕರ ಮನವೊಲಿಸಿ ಶಾಲೆಗೆ ಕಳುಹಿಸಬೇಕು.ಸಮುದಾಯದ ಸಹಕಾರವಿದ್ದರೇ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ ಎಂದರು.
ಈ ಸಂದರ್ಭದಲ್ಲಿ ಸಹಶಿಕ್ಷಕರಾದ ತಾರಕೇಶ್ವರಿ ಮೈನಾಳ, ಮಾರ್ಥ ವೈದ್ಯ , ವಿಜಯಕುಮಾರಿ ದೊಡ್ಡಮನಿ, ಕಲಾವತಿ ನೆಲೋಗಿ, ರಾಜೇಶ್ವರಿ ಕೋಣಿನ್, ಅನುಸೂಯಾ ಕುದುರೆ, ಬಸಮ್ಮ ಮಣೂರ, ಮಹಾದೇವಿ ತಳವಾರ, ದೀಪಿಕಾ ಮೇತ್ರೆ, ಸೇರಿದಂತೆ ಶಾಲಾ ಮಕ್ಕಳು ಹಾಜರಿದ್ದರು.