ಆಧ್ಯಾತ್ಮಿಕತೆ ಅಳವಡಿಕೆಯಿಂದ ಅರ್ಥಪೂರ್ಣ ಜೀವನ ಸಾಧ್ಯ

0
202

ಕಲಬುರಗಿ: ಮಾನವ ತನಗಾಗಿ, ತನ್ನ ಕುಟುಂಬಕ್ಕಾಗಿ ಬದುಕು ಸಾಗಿಸುವ ಸ್ವಾರ್ಥ ಜೀವನಕ್ಕೆ ಮಹತ್ವವಿಲ್ಲ. ಸಮಾಜದಲ್ಲಿರುವ ಅಸಹಾಯಕರಿಗೆ ಸಹಾಯಹಸ್ತ ಚಾಚಬೇಕು. ದೇವರು ಸರ್ವವ್ಯಾಪಿಯಾಗಿದ್ದು, ಆತನಿಗೆ ನಿಸ್ವಾರ್ಥ ಭಕ್ತಿ, ಶೃದ್ಧೆ ಅಗತ್ಯ. ಗುರು-ಲಿಂಗ-ಜಂಗಮಕ್ಕೆ ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು. ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಬರುವÀ ಕಷ್ಟಗಳನ್ನು ಧೈರ್ಯದಿಂದ ಎದುರಿಸುವ ಶಕ್ತಿ ದೊರೆಯುವುದರ ಜೊತೆ ಮಾನಸಿಕ ನೆಮ್ಮದಿ ದೊರೆಯುತ್ತದೆ ಎಂದು ಚಿನ್ಮಯಗಿರಿ ಮಹಾಂತೇಶ್ವರ ಮಠದ ಪೂಜ್ಯ ಸಿದ್ದರಾಮ ಶಿವಾಚಾರ್ಯರು ಹೇಳಿದರು.

ತಾಲೂಕಿನÀ ತಾಡ ತೆಗನೂರ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿಯ ದ್ವಿತೀಯ ಜಾತ್ರಾ ಮಹೋತ್ಸವದ ಪ್ರಯುಕ್ತ ಶುಕ್ರವಾರ ಜರುಗಿದ ಐದು ದಿನಗಳ ಪ್ರವಚನ ಮಹಾಮಂಗಲ, ಧರ್ಮ ಸಭೆ ಮತ್ತು ಮುತ್ತೈದಿಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡುತ್ತಿದ್ದರು.

Contact Your\'s Advertisement; 9902492681

ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಚಿನ್ಮಯಗಿರಿ ಮಹಾಂತೇಶ್ವರ ಮಠದ ಕಿರಿಯ ಶ್ರೀಗಳಾದ ಪೂಜ್ಯ ವೀರಮಹಾಂತ ಶಿವಾಚಾರ್ಯರು, ಅಜ್ಞಾನದ ಕತ್ತಲೆಗೆ ಜ್ಞಾನದ ದೀಪವನ್ನು ನೀಡುವವರೇ ಗುರುವಾಗಿದ್ದಾರೆ. ದೇವರು ಮತ್ತು ಗುರುವಿನ ಮೇಲೆ ಅಪ್ಪಟ ಭಕ್ತಿಯಿರಬೇಕು. ಆಡಂಭರದ ಭಕ್ತಿಗಿಂತಗಿಂದ ನೈಜ ಭಕ್ತಿ ಅಗತ್ಯ. ಬದುಕು ನಂಬಿಕೆಯ ಮೇಲೆ ನಿಂತಿದೆ. ಪರಸ್ಪರ ಅದನ್ನು ಉಳಿಸಿಕೊಂಡು ಹೋಗುವುದು ಅವಶ್ಯಕವಾಗಿದೆ. ಬಸವಾದಿ ಶರಣರ ಕೊಡುಗೆ ಅನನ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶರಣ ಸಿರಸಗಿಯ ಪೂಜ್ಯ ರುದ್ರಮುನಿ ಶಿವಾಚಾರ್ಯ, ತಾಡ ತೆಗನೂರಿನ ಶ್ರೀ ಬೀರಲಿಂಗೇಶ್ವರ ಮಠದ ಪೂಜ್ಯ ಮಲ್ಲಯ್ಯ ಮುತ್ತ್ಯಾ, ಕಡಣಿಯ ಪೂಜ್ಯ ಗುಂಡಯ್ಯ ಮುತ್ತ್ಯಾ, ಪುರಾಣಿಕ ಶ್ರೀ ಯೋಗಿರಾಜ ಶಾಸ್ತ್ರೀ ಖಾನಾಪೂರ, ಉಪನ್ಯಾಸಕ ಎಚ್.ಬಿ.ಪಾಟೀಲ, ಝಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ದೇವೇಂದ್ರಪ್ಪ ಗಣಮುಖಿ, ಗ್ರಾಪಂ ಸದಸ್ಯ ಧನರಾಜ ಕೋರಿ ವೇದಿಕೆ ಮೇಲಿದ್ದರು.

ಮುಖರಾದ ಗುರುನಾಥ ಹೂಗಾರ, ಕರಬಸಪ್ಪ ಕುಡಕಿ, ಶಿವಲಿಂಗಪ್ಪ ಕಿರಣಗಿ, ಶರಣಗೌಡ ಪಾಟೀಲ, ಶ್ರೀಧರ ಹೂಗಾರ, ಶಿವಬಸಪ್ಪ ಹಂಗರಗಿ, ಭೀಮಾಶಂಕರ ಸರಡಗಿ, ಬಂಡಪ್ಪ ಶಿರವಾಳ, ಮಲ್ಲಿಕಾರ್ಜುನ ಶಿರವಾಳ, ಸಂತೋಷ ನರೋಣಿ, ಶರಣಬಸಪ್ಪ ಪರಶಿವಪ್ಪಗೋಳ್, ಶರಣು ಸಾಹು, ಶಿವಶರಣಪ್ಪ ಶಿರವಾಳ ಸೇರಿದಂತೆ ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

ಶ್ರೀ ಮಹಾಲಕ್ಷ್ಮೀ ದೇವಿಗೆ ಬೆಳೆಗ್ಗೆ ವಿಶೇಷ ಪೂಜೆ, ಜಲಾಭಿಷೇಖ ಸಲ್ಲಿಸಲಾಯಿತು. ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಿಂದಗಿಯ ಸಂತೋಷಕುಮಾರ ಹರಸೂರಮಠ ಅವರಿಂದ ಗಾಯನ, ಯೋಗಿರಾಜ ಮಠ ಕಡಣಿ ತಬಲಾ ಹಾಗೂ ಸುರೇಶ ಆಳಂದ ಅವರು ಪ್ಯಾಡ್ ವಾದನದ ಸಾಥ ನೀಡಿದರು. ಶಿಕ್ಷಕ ಶರಣಬಸಪ್ಪ ನರೋಣಿ ನಿರೂಪಿಸಿ, ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here