ಕಲಬುರಗಿ ಲೋಕಸಭೆಗೆ ಪ್ರಪ್ರಥಮ ಬಾರಿಗೆ ಸ್ಪರ್ಧಿಸಿ ಆಯ್ಕೆಯಾದ ರಾಧಾಕೃಷ್ಣ ದೊಡ್ಡಮನಿ ಅವರು ಇಂದು (ಶುಕ್ರವಾರ) ನಗರದ ಲಾಲಗೇರಿ ಕ್ರಾಸ್ ಹತ್ತಿರದ ರೆಡ್ಡಿ ಇನ್ಸ್ಟಿಟ್ಯೂಟ್ ಕಿಯೋನಿಕ್ಸ್ ಪ್ರಾö್ಯಂಚೇಸಿಗೆ ಭೇಟಿ ನೀಡಿದಾಗ ಸಂಸ್ಥೆಯ ನಿರ್ದೇಶಕ ಶಾಂತಕುಮಾರ ರೆಡ್ಡಿ ಪೇಠಶಿರೂರ ಅವರು ಸನ್ಮಾನಿಸಿ, ಅಭಿನಂದಿಸಿದರು.
ಈ ಸಂದರ್ಭದಲ್ಲಿ ಇನ್ನೋರ್ವ ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ ಅವರು ಕೂಡ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರನ್ನು ಕೂಡ ಸನ್ಮಾನಿಸಿ ಗೌರವಿಸಲಾಯಿತು.
ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಂಪ್ರಭು ಪಾಟೀಲ್ ನೆಲೋಗಿ, ಮನೀಷ ಪತ್ರಿಕೆಯ ಸಂಪಾದಕ ರಾಜು ದೇಶಮುಖ, ಮಾಜಿ ಮಹಾಪೌರರಾದ ಬಾಬು ವಂಟಿ, ಕಾಂಗ್ರೆಸ್ ಮುಖಂಡರಾದ ಪ್ರಭು ಕಲಬುರಗಿ, ಮಂಜುನಾಥ ಅಣಕಲ್ ಸೇರಿದಂತೆ ಇನ್ನು ಹಲವಾರು ಕಾಂಗ್ರೆಸ್ ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ರೆಡ್ಡಿ ಇನ್ಸ್ಟಿಟ್ಯೂಟ್ ಕಿಯೋನಿಕ್ಸ್ ಪ್ರಾö್ಯಂಚೇಸಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅವರು ಸಂಸ್ಥೆಯನ್ನು ನೋಡಿ ತುಂಬಾ ಖುಷಿಪಟ್ಟು, ಅಲ್ಲಿನ ಸಿಬ್ಬಂದಿಗಳೊAದಿಗೆ ಮಾತನಾಡಿ, ಅವರೊಂದಿಗೆ ಗ್ರೂಪ್ ಭಾವಚಿತ್ರ ತೆಗೆದುಕೊಂಡರು.