ಕೌಶಲ್ಯ ರೂಪಿಸುವ ಪಠ್ಯೇತರ ಚಟುವಟಿಕೆ

0
38

ಕಲಬುರಗಿ: ವಿದ್ಯಾರ್ಥಿಗಳಲ್ಲಿ ಕಲಿಕಾಸಕ್ತಿ ಬೆಳೆಸಲು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ಇದರಿಂದ ಮಕ್ಕಳಲ್ಲಿ ಕ್ರಿಯಾಶೀಲತೆ ಬೆಳೆಯುತ್ತದೆ ಎಂದು ಅಪ್ಪಾಜಿ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ರಾಜಕುಮಾರ ಉದನೂರ ಹೇಳಿದರು.

ಉದನೂರದ ಅಪ್ಪಾಜಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೆಜಿ ವಿದ್ಯಾರ್ಥಿಗಳಿಗೆ ಶುಕ್ರವಾರ ಏರ್ಪಡಿಸಿದ್ದ ಹಳದಿ ದಿನಾಚರಣೆಯಲ್ಲಿ ಮಾತನಾಡಿ, ಶಿಕ್ಷಕರು, ಪಾಲಕರು ಇಂತಹ ಕ್ರಿಯಾಶೀಲ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು. ಆಗ ವಿದ್ಯಾರ್ಥಿಗಳಲ್ಲಿ ಮೌಲ್ಯಗಳು, ಕೌಶಲ ಸಹಜವಾಗಿ ಬೆಳೆಯುತ್ತದೆ ಎಂದು ಸಲಹೆ ನೀಡಿದರು.

Contact Your\'s Advertisement; 9902492681

ಹಳದಿಮಯ: ಹಳದಿ ದಿನಾಚರಣೆ ನಿಮಿತ್ತ ಇಡೀ ಶಾಲೆಯ ವಾತಾವರಣವೇ ಹಳದಿಮಯವಾಗಿತ್ತು. ವಿದ್ಯಾರ್ಥಿಗಳು ಹಳದಿ ಬಟ್ಟೆ, ಶ್ಯೂಸ್ ಧರಿಸಿ, ಊಟದಲ್ಲೂ ಹಳದಿ ಬಣ್ಣದ ಆಹಾರ ಪದಾರ್ಥಗಳನ್ನು ತಂದು ಸೇವನೆ ಮಾಡಿದರು. ಶಾಲೆಯ ಶಿಕ್ಷಕಿಯರು ಸಹ ಹಳದಿ ಬಟ್ಟೆ ಧರಿಸಿ, ಗಮನ ಸೆಳೆದರು. ಹಳದಿ ಬಣ್ಣದ ಮಕ್ಕಳಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಲು ಹಳದಿ ದಿನ ಆಚರಿಸಲಾಗುತ್ತದೆ.

ಶಿಕ್ಷಕ ಅಭಿಲಾಷ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿಯರಾದ ಉಷಾ, ಶಾಂತಾ, ಲತಾ, ಸುವರ್ಣ, ರಾಜೇಶ್ವರಿ, ಶಿP್ಷÀಕ ರಾಹುಲ್ ಇತರರಿದ್ದರು. ಶಿಕ್ಷಕ ಗೊ¯್ಲÁಳಪ್ಪ ಸ್ವಾಗತಿಸಿದರು. ಶಿP್ಷÀಕಿ ಭಾಗ್ಯಶ್ರೀ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here