ಕಲಬುರಗಿ:ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಕಲಬುರಗಿ ಇದರ ನೌಕರರ ಒಕ್ಕೂಟ ರಚನೆಯನ್ನು ಶರಣಬಸಪ್ಪ ಬಾಸಗಿ ಅವರ ಅಧ್ಯಕ್ಷತೆಯಲ್ಲಿ ಮಾಡಲಾಯಿತು.
ಜಿಲ್ಲಾ ಬ್ಯಾಂಕಿನ ನೌಕರರ ಒಕ್ಕೂಟದ ಅಧ್ಯಕ್ಷರಾಗಿ ಸಂತೋಷ್ಕುಮಾರ ಕರಹರಿ, ಉಪಾಧ್ಯಕ್ಷರಾಗಿ ಮಂಜುನಾಥ್ ರೆಡ್ಡಿ ಪಾಟೀಲ್, ಪ್ರಧಾನ ಕಾರ್ಯದರ್ಶಿಯಾಗಿ ಯಲ್ಲಪ್ಪ ಎಂ ಮುರಡಿ, ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಶರಣಬಸಪ್ಪ ಬಾಸಗಿ, ಖಜಾಂಚಿಯಾಗಿ ಶ್ರೀಮತಿ ಅನುರಾಧ ಬಿ ಅಂಬಲಗಿ, ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶಿವರಾಜ್ ಮಠಪತಿ, ಸದಾಶಿವ ಮುಧೋಳ್, ಕ್ಷೀರಲಿಂಗಯ್ಯ ಹಿರೇಮಠ, ಶ್ರೀಮತಿ ನೀಲಮ್ಮ ಪಾಟೀಲ್, ರೇಷ್ಮಾ, ವಿಜಯಲಕ್ಷಿ,್ಮ ರಮೇಶ್ ಕೆಂಚಪ್ಪ, ಸಂಗಮೇಶ್ ಕಲ್ಶೆಟ್ಟಿ ಆಯ್ಕೆಯಾಗಿದ್ದಾರೆ.