ಸುರಪುರ: ರಾಜ್ಯದಲ್ಲಿ ನೂತನವಾಗಿ ಆರಂಭಗೊಂಡಿರುವ ಹೂಗಾರ ಅಭಿವೃಧ್ಧಿ ನಿಗಮಕ್ಕೆ ಸರಕಾರ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ಹೂಗಾರ ಮಹಾಸಭಾ ಸಂಘದ ತಾಲೂಕ ಘಟಕ ದಿಂದ ನಗರದ ತಹಸಿಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ತಾಲೂಕ ಅಧ್ಯಕ್ಷ ಮಹೇಶ ಹೂಗಾರ ಮಾತನಾಡಿ,ರಾಜ್ಯದಲ್ಲಿರುವ ಹೂವಾಡಿಗ,ಹೂಗಾರ,ಹೂಗಲ್,ಮಾಲಗಾರ್,ಮಾಲಿ,ಪೂಲ್ ಮಾಲಿ,ಪುಲಾರಿ,ಪೂಲಾರಿ,ಜೀರ್,ಸಮುದಾಯಗಳ ಸರ್ವತೋಮುಖ ಅಭಿವೃಧ್ಧಿಗಾಗಿ ಸರಕಾರ 2023 ರಲ್ಲಿ ಹೂಗಾರ ಅಭಿವೃಧ್ಧಿ ನಿಗಮ ಸ್ಥಾಪಿಸಿದೆ,ಆದರೆ ಅದಕ್ಕೆ ಇರುವರೆರಗೆ ಅನುದಾನವನ್ನು ಒದಗಿಸಿಲ್ಲ,ಹೆಸರಿಗೆ ನಿಗಮ ಸ್ಥಾಪಿಸಿದಂತಾಗಿದೆ.ಆದ್ದರಿಂದ ಮುಖ್ಯಮಂತ್ರಿಗಳು ಈಗ ಆರಂಭಗೊಂಡಿರುವ ವಿಧಾನಸಭಾ ಅಧಿವೇಶನದಲ್ಲಿ ಹೂಗಾರ ಅಭಿವೃಧ್ಧಿ ನಿಗಮಕ್ಕೆ ನೂರು ಕೋಟಿ ರೂಪಾಯಿಗಳ ಅನುದಾನವನ್ನು ನೀಡಬೇಕು ಹಾಗೂ ಹೂಗಾರ ಸಮಾನದವರನ್ನೆ ನಿಗಮದ ಅಧ್ಯಕ್ಷರನ್ನಾಗಿ ನೇಮಕಗೊಳಿಸಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ನಮ್ಮ ಬೇಡಿಕೆಗೆ ಸರಕಾರ ಸ್ಪಂಧಿಸದಿದ್ದಲ್ಲಿ ಇದೇ ಜುಲೈ 25 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ನಿರಂತರ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.
ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಗ್ರೇಡ-2 ತಹಸಿಲ್ದಾರ ಮಲ್ಲಯ್ಯ ದಂಡು ಅವರ ಮೂಲಕ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಹಣಮಂತ್ರಾಯ ಹೂಗಾರ,ಪ್ರಧಾನ ಕಾರ್ಯದರ್ಶಿ ಗಿರಿಧರ ಹೂಗಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.