ಸುರಪುರ: ನಗರದ ರುಕ್ಮಿಣಿ ಪಾಂಡುರಂಗ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಇದೇ ಜುಲೈ 16 ರಿಂದ 19ರ ವರೆಗೆ ಆಷಾಢ ಏಕಾದಶಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಹರೆ ವಿಠ್ಠ¯ ಸೇವಾ ಸಮಿತಿ ಪತ್ರಿಕಾ ಪ್ರಕಟಣೆ ನೀಡಿ, ಜುಲೈ 16 ರಂದು ಬೆ.8 ಗಂಟೆಗೆ ಧ್ವಜಾರೋಹಣ,17 ರಂದು ಬುಧವಾರ ಬೆ.ಶ್ರೀ ವೇಣುಗೋಪಾಲ ಮಹಿಳಾ ಭಜನಾ ಮಂಡಳಿ ಹಾಗೂ ಶ್ರೀ ಕಾತ್ಯಾಯಿನಿ ಮಹಿಳಾ ಭಜನಾ ಮಂಡಳಿ ಇವರಿಂದ ಗ್ರಾಮ ಪ್ರದಕ್ಷಿಣೆ,ನಂತರ ರುಕ್ಮಿಣಿ ಪಾಂಡುರಂಗ ದೇವರ ಪುಷ್ಪಾರ್ಚನೆ.ಸಂಜೆ ಮತ್ತೆ ಭಜನಾ ಕಾರ್ಯಕ್ರಮ ನಡೆಯಲಿದೆ.
ರಾತ್ರಿ ಹರೆ ವಿಠ್ಠಲ ಭಜನಾ ಮಂಡಳಿ,ಗುರುರಾಜ ಭಜನಾ ಮಂಡಳಿ ಹಾಗೂ ಶ್ರೀಮದ್ ಯೋಗೀಶ್ವರ ಯಾಜ್ಞವಲ್ಕ್ಯ ಭಜನಾ ಮಂಡಳಿ ಯಿಂದ ಭಜನೆ ಹಾಗೂ ರಾತ್ರಿ ಶ್ರೀ ಬಾಲಾಜಿ ಭಜನಾ ಮಂಡಲ್ ಸುರಪುರ ಇವರಿಂದ ಭಜನೆ ನಡೆಯಲಿದೆ.
ರಾತ್ರಿ 12 ಗಂಟೆಯಿಂದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಭಜನಾ ಮಂಡಳಿಯಿಂದ ಭಜನೆ,ನಂತರ ಹರಿವಾಣ ಸೇವಾ ಜರುಗಲಿದೆ.18 ರಂದು ಬೆ.6 ಗಂಟೆಗೆ ದೇವರ ಪೂಜೆ,ನೈವೇದ್ಯ ನಂತರ ತೀರ್ಥ ಪ್ರಸಾದ.19 ರಂದು ಬೆ.8 ಗಂಟೆಗೆ ಪಲ್ಲಕ್ಕಿ ಉತ್ಸವ,9 ಗಂಟೆಗೆ ಗೋಪಾಳ ಕಾವಲಿ ನಂತರ ಅವಭೃತ ಸ್ನಾನ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದ್ದಾರೆ.