ಕನ್ನಡ ಭಾಷಾ ಬೆಳವಣಿಗೆ ಕುಂಠಿತ: ಬಿಳಿಮಲೆ ಕಳವಳ

0
106

ಕಲಬುರಗಿ: ಕನ್ನಡ ಭಾಷೆ ತುಂಬಾ ಶ್ರೀಮಂತವಾಗಿದ್ದು, ಆದರೆ ಆಧುನಿಕ ಜೀವನ ಶೈಲಿ ಹಾಗೂ ಮಪರಭಾಷಾ ವ್ಯಾಮೋಹದಿಂದ ನಮ್ಮ ನಾಡಿನಲ್ಲಿಯೇ ಮಾತೃ ಭಾಷೆಯ ಬೆಳವಣಿಗೆ ಕುಂಠಿತಗೊಂಡಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಜಂಟಿ ಆಶ್ರಯದಲ್ಲಿ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಮಂಗಳವಾರ ಆಯೋಜಿಸಿದ ಕನ್ನಡ-ಕನ್ನಡಿಗ-ಕರ್ನಾಟಕ ಎಂಬ ವರ್ತಮಾನದ ಒಂದು ಚಿಂತನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನಲ್ಲಿಯೇ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದವರು ಕನ್ನಡಿಗರು. ಭಾಷೆಯ ಪರಂಪರೆ ಹಾಗೂ ಅದರ ಬೆಳವಣಿಗೆಗಾಗಿ ನಾಡಿನ ಸಾಹಿತಿಗಳು ಎಂದು ವಿಫಲರಾಗುತ್ತಿದ್ದೇವೆ.

Contact Your\'s Advertisement; 9902492681

ಇದಕ್ಕಾಗಿ ಬೀದರ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಯವರೆಗೂ ನಾಡು-ನುಡಿ ಕಟ್ಟುವ ಬೆಲೆಸುವ ದಿಸೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೊಸ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಕನ್ನಡದ ಅಕ್ಷರಗಳು ಬರೆಯದೇ ಬಾರದ ಜನರಿಗೆ ಅಕ್ಷರ ಕಲಿಸುವ ಯೋಜನೆ ಜಾರಿಗೆ ತರಲಾಗುತ್ತಿದೆ. ಇಂದು ನಾಡಿನ ಗಡಿ ಭಾಗದ ಕನ್ನಡ ಶಾಲೆಗಳು ಭಾಷಾ ಶಿಕ್ಷಕರಿಲ್ಲದೆ ಸೊರಗುತ್ತಿವೆ. ಈ ಕುರಿತು ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಅನ್ಯಭಾಷೆಗಳ ಪ್ರಭಾವ ಮತ್ತು ಇಂಗ್ಲೀಷ್ ವ್ಯಾಮೋಹ ಹೆಚ್ಚುತ್ತಿರುವ ಇಂದಿನ ದಿನಮಾನಗಳಲ್ಲಿ ನಮ್ಮ ಕನ್ನಡವನ್ನು ಉಳಿಸಿ ಬೆಳೆಸುವುದು ಬಹು ದೊಡ್ಡ ಸವಾಲಾಗಿದೆ. ಆದರೂ ಭಾಷೆಯ ಉಳಿವು ಮತ್ತು ಬೆಳವಣಿಗೆಗಾಗಿ ಪರಿಷತ್ತು ಸದಾ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಕನ್ನಡ ಭಾಷೆಯ ಇತಿಹಾಸ ಪರಂಪರೆ ಅಪಾರವಿದ್ದರೂ, 12ನೇ ಶತಮಾನದ ವಚನಕಾರರು ಕನ್ನಡ ಭಾಷೆಗೆ ವಿಶೇಷ ಗೌರವ, ಘನತೆ ತಂದುಕೊಟ್ಟಿದೆ ಎಂದು ಹೇಳಿದ ಅವರು, ಶಿಕ್ಷಕರು, ವಿದ್ಯಾರ್ಥಿಗಳಿಗಾಗಿ ಕನ್ನಡ ಕಟ್ಟುವ ಉದ್ದೇಶದಿಂದ ವಿಶೇಷ ಕಾರ್ಯಾಗಾರಗಳನ್ನು ಆಯೋಜಿಸುವ ಉದ್ದೇಶ ಪರಿಷತ್ತು ಹೊಂದಿದೆ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಸಿದ್ಧರಾಮ ಹೊನ್ಕಲ್, ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಡೀನ್ ಟಿ.ವಿ. ಶಿವಾನಂದನ್, ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ್ ಛಪ್ಪರಬಂದಿ, ಡೀನ್ ಡಾ. ಸುನಿತಾ ಪಾಟೀಲ, ಸಿದ್ಧಲಿಂಗ ಬಾಳಿ, ರಾಜೇಂದ್ರ ಮಾಡಬೂಳ, ವೀರಶೆಟ್ಟಿ ಗಾರಂಪಳ್ಳಿ ವೇದಿಕೆ ಮೇಲಿದ್ದರು.

ಕನ್ನಡಪರ ಸಂಘಟನೆಗಳ ಪ್ರಮುಖರಾದ ರವಿ ದೇಗಾಂವ, ಅಮೃತ ಪಾಟೀಲ, ಪುನೀತ್ ರಾಜ್ ಕವಡೆ, ಮಾನ್‍ಸಿಂಗ್ ಆರ್ ಚವ್ಹಾಣ, ದತ್ತು ಹಯ್ಯಾಳಕರ್, ಅಶೋಕ ಭೀಮಳ್ಳಿ, ಪೃಥ್ವಿರಾಜ್ ರಾಂಪೂರೆ, ಬಾಬು ಮದನಕರ್ ಅವರನ್ನು ಸತ್ಕರಿಸಲಾಯಿತು.

ಪ್ರಮುಖರಾದ ಎ ಕೆ ರಾಮೇಶ್ವರ, ಪ್ರೊ. ಎಸ್ ಎಲ್ ಪಾಟೀಲ, ಸುರೇಶ ಬಡಿಗೇರ, ಸಿ ಎಸ್ ಮಾಲಿಪಾಟೀಲ, ರವೀಂದ್ರಕುಮಾರ ಭಂಟನಳ್ಳಿ, ಶಕುಂತಲಾ ಪಾಟೀಲ, ಜ್ಯೋತಿ ಕೋಟನೂರ, ಗಣೇಶ ಚಿನ್ನಾಕಾರ, ಶಾಮಸುಂದರ ಕುಲಕರ್ಣಿ, ಎಸ್ ಕೆ ಬಿರಾದಾರ, ವೀರೇಂದ್ರಕುಮಾರ ಕೊಲ್ಲೂರ, ಬಾಬುರಾವ ಪಾಟೀಲ, ಜೆ.ಎಸ್. ವಿನೋದಕುಮಾರ, ಶಿವಲಿಂಗಪ್ಪ ಅಷ್ಟಗಿ, ಸಂದೀಪ ಭರಣಿ, ಜಗದೀಶ ಮರಪಳ್ಳಿ, ಸಂಜೀವ ಕುಲಕರ್ಣಿ, ನವಾಬ ಖಾನ್, ಶಿವಾನಂದ ಮಠಪತಿ, ಹಣಮಂತಪ್ರಭು, ರೇವಣಸಿದ್ದಪ್ಪ ಜೀವಣಗಿ, ಆನಂದ ಸಿದ್ಧಮಣಿ, ಶ್ರೀಕಾಂತ ಪಾಟೀಲ ತಿಳಗೂಳ, ಎಂ ಎನ್ ಸುಗಂಧಿ. ಮಂಜುನಾಥ ಕಂಬಾಳಿಮಠ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ನಮಗೆ ಭಾಷೆಯ ಬಗ್ಗೆ ಅಭ್ಯಂತರವಿಲ್ಲ. ನಾಮಫಲಕದಲ್ಲಿ ಕನ್ನಡ ಪ್ರಥಮವಾಗಿ ರಾರಾಜಿಸಬೇಕು. ಇಂಥ ಕನ್ನಡಪರ ಚಳವಳಿ ನಡೆಯಬೇಕಾಗಿದೆ. ಕನ್ನಡ ಸಾಹಿತ್ಯ ಜನ ಸಾಮಾನ್ಯರಿಗೆ ಓದುವ, ತಿಳಿಯುವಂತೆ ಇರಬೇಕು. ಇದಕ್ಕೆ ಪೂರಕವಾಗಿ ದಲಿತ ಬಮಡಾಯ ಸಾಹಿತ್ಯ ಹುಟ್ಟಿಕೊಂಡವು. – ಡಾ. ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here