ರೈತ, ಕೃಷಿ ಕಾರ್ಮಿಕರ ಬೇಡಿಕೆಗಳ ಪರವಾಗಿ ಕೇಂದ್ರ ಸರ್ಕಾರದ ಗಮನಸೆಳೆಯಲು ಖರ್ಗೆಯವರಿಗೆ ಕೋರಿಕೆ

0
84

ಕಲಬುರಗಿ: ರೈತ, ಕೃಷಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ ಪ್ರಮುಖರು ಶುಕ್ರವಾರ ರಾಜ್ಯಸಭಾ ಸದಸ್ಯ ಡಾ. ಮಲ್ಲಿಕಾರ್ಜುನ್ ಖರ್ಗೆಯವರ ಕಚೇರಿ ಮುಂದೆ ಪ್ರದರ್ಶನ ಮಾಡಿ, ಅವರಿಗೆ ಆಪ್ತ ಸಹಾಯಕರ ಮೂಲಕ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು.

ಎಲ್ಲ ಬೆಳೆಗಳಿಗೂ ಅ2+50ರಷ್ಟು ದರದಲ್ಲಿ ಕಾಯ್ದೆ ಪದ್ಧತಿ ಕನಿಷ್ಠ ಬೆಂಬಲ ಬೆಲೆ ಮತ್ತು ಸಂಪೂರ್ಣ ಉತ್ಪನ್ನದ ಸಂಗ್ರಹಣೆಯ ಖಾತರಿ ನೀಡುವಂತೆ, ರೈತರು ಮತ್ತು ಕೃಷಿ ಕಾರ್ಮಿಕರನ್ನು ಸಾಲದ ಶೂಲದಿಂದ ಆತ್ಮಹತ್ಯೆಗಳಿಂದ ಹಾಗೂ ಸಂಕಷ್ಟ ವಲಸೆಯಿಂದ ರಕ್ಷಿಸಲು ಸಮಗ್ರ ಸಾಲ ಮನ್ನಾ ಮಾಡುವಂತೆ, ವಿದ್ಯುತ್ ಶಕ್ತಿ ವಲಯದ ಖಾಸಗಿಕರಣ ಮತ್ತು ಪ್ರಿಪೇರ್ ಸ್ಮಾರ್ಟ್ ಮೀಟರ್ ಗಳ ಪ್ರಸ್ತಾಪ ಕೈಬಿಡುವಂತೆ, ರಸಗೊಬ್ಬರ ಬೀಜ ಕ್ರಿಮಿ ಕಳೆ ನಾಶಕಗಳು ವಿದ್ಯುತ್ ನೀರಾವರಿ ಯಂತ್ರೋಪಕರಣಗಳು ಬಿಡಿ ಭಾಗಗಳು ಹಾಗೂ ಟ್ರ್ಯಾಕ್ಟರ್ ಗಳಂತಹ ?ಷಿಗಳ ಮೇಲೆ ಜಿಎಸ್‍ಟಿ ಹಾಕಬಾರದು ಕೃಷಿ ಹೊಳಸುರಿಗಳಿಗೆ ಸಬ್ಸಿಡಿ ಪುನಃ ಜಾರಿ ಮಾಡುವಂತೆ, ಸರ್ಕಾರಿ ಯೋಜನೆಗಳ ಲಾಭವನ್ನು ಪಾಲು ಬೆಳೆಗಾರರು ಮತ್ತು ಗಿಣಿದಾರ ರೈತರಿಗೂ ವಿಸ್ತರಿಸುವಂತೆ ಅವರು ಒತ್ತಾಯಿಸಿದರು.

Contact Your\'s Advertisement; 9902492681

ಎಲ್ಲ ಕೃಷಿ ಮತ್ತು ಪಶು ಸಂಗೋಪನೆ ವ್ಯವಸ್ಥೆ ಗಳಿಗೂ ಸಾರ್ವಜನಿಕ ವಲಯದಲ್ಲಿ ಸಂಪೂರ್ಣ ವಿಮೆ ಸೌಲಭ್ಯ ಕಲ್ಪಿಸುವಂತೆ, ಕಾಪೆರ್Çರೇಟ್ ಪರವಾದ ಸ್ಕೀಮ್ ರದ್ದುಪಡಿಸುವಂತೆ, ಆಹಾರ ಉತ್ಪಾದಕರಾದ ರೈತರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ ಹಕ್ಕನ್ನು ಮಾನ್ಯ ಮಾಡುವಂತೆ ಹಾಗೂ 60 ವರ್ಷ ವಯಸ್ಸಿನ ನಂತರ ತಿಂಗಳಿಗೆ 10,000 ರೂ.ಗಳನ್ನು ನೀಡುವಂತೆ ಅವರು ಆಗ್ರಹಿಸಿದರು.

ಭೂಸ್ವಾಧೀನ ಪರಿಹಾರ ಮತ್ತು ಪುನರ್ವಸತಿ ಕಾಯ್ದೆ 2013ನ್ನು ಅದರಲ್ಲಿ ಎರಡು ವರ್ಷಕ್ಕೊಮ್ಮೆ ಸರ್ಕಲ್ ದರವನ್ನು ಪರಿಷ್ಕರಣೆ ಮಾಡುವುದನ್ನು ಕಡ್ಡಾಯಗೊಳಿಸಿ, ಕಾರ್ಯಗತಗೊಳಿಸುವಂತೆ, ಸಾರ್ವಜನಿಕ ಮತ್ತು ಖಾಸಗಿ ವಲಯದ ಯೋಜನೆಗಳ ಎರಡಕ್ಕಾಗಿಯೂ ಕಡಿಮೆ ಸರ್ಕಲ್ ದರದಲ್ಲಿ ಸ್ವಾಧೀನ ಪಡಿಸಿಕೊಂಡ ಎಲ್ಲ ಭೂಮಿಗೂ ಪರಿಹಾರ ನೀಡುವಂತೆ, ಪರಿಹಾರ ಮತ್ತು ಪುನರ್ವಸತಿಗಳನ್ನು ನೀಡದೆ ಯಾವುದಾದರೂ ಭೂ ಸ್ವಾಧೀನ ಮಾಡಕೂಡದು. ಮುಂಚಿತವಾಗಿ ಪುನರ್ವಸತಿ ಕಲ್ಪಿಸದೆ ಯಾವುದೇ ಸ್ಲಂ ಮತ್ತು ಅಂತಹ ವಸತಿ ಪ್ರದೇಶಗಳನ್ನು ನೆಲಸಮ ಮಾಡಬಾರದು ಬುಲ್ ಡೋಜರ್ ಆಡಳಿತ ಕೊನೆಗೋಳಿಸಬೇಕು ಪೂರ್ಣ ಪರಿಹಾರ ನೀಡದೆ ಯಾವುದೇ ಕೃಷಿ ಭೂಮಿಯ ಮೇಲೆ ಹೈ ವೋಲ್ಟೇಜ್ ವಿದ್ಯುತ್ ಮಾರ್ಗಗಳನ್ನು ಬಲವಂತವಾಗಿ ನಿರ್ಮಿಸದಿರುವಂತೆ ಅವರು ಒತ್ತಾಯಿಸಿದರು.

ಅರಣ್ಯ ಹಕ್ಕು ಕಾಯ್ದೆ ಮತ್ತು ಪಂಚಾಯಿತಿ (ಶೆಡ್ಯೂಲ್ಡ್ ಏರಿಯಾಗಳಿಗೆ ವಿಸ್ತರಣೆ) ಕಾಯ್ದೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವಂತೆ, ಕಾಡು ಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ರೂಪಿಸುವಂತೆ, ಮನುಷ್ಯ ಜೀವಾನಿಗೆ ಒಂದು ಕೋಟಿ ರೂ.ಗಳ ಹಾಗೂ ಬೆಳೆ ಮತ್ತು ಸಾಕುಪ್ರಾಣಿಗಳ ನಷ್ಟಕ್ಕೆ ಎರಡು ಕೋಟಿ ರೂ.ಗಳ ಪರಿಹಾರ ನೀಡುವಂತೆ, ಭಾರತವನ್ನೊಂದು ಪೆÇಲೀಸ್ ಪ್ರಭುತ್ವವಯನ್ನಾಗಿಸಿ ಭಿನ್ನಾಭಿಪ್ರಾಯವನ್ನು ಮತ್ತು ಜನತೆಯ ಪ್ರತಿಭಟನೆಗಳನ್ನು ಹತ್ತಿಕ್ಕಲ್ಲೆಂದ ಸಂಸತ್ತಿನಲ್ಲಿ ಯಾವುದೇ ಪ್ರಜಾತಾಂತ್ರಿಕ ಪ್ರಕ್ರಿಯೆಗೆ ಒಳಪಡಿಸದೆ ಸಿಪಿಸಿ ಮತ್ತು ಸಿಆರ್‍ಪಿಸಿ (ಭಾರತೀಯ ದಂಡ ಸಹಿತೆ ಮತ್ತು ಭಾರತೀಯ ದಂಡ ಪ್ರಕ್ರಿಯೆ ಸಹಿತೆ) ಕಾಯ್ದೆಗಳನ್ನು ಬದಲಾಯಿಸಿ ಜನತೆಯ ಮೇಲೆ ಹೇರಿರುವ 3 ಕ್ರಿಮಿನಲ್ ಕಾಯ್ದೆಗಳನ್ನು ರದ್ದು ಮಾಡುವಂತೆ ಅವರು ಆಗ್ರಹಿಸಿದರು.

736 ರೈತ ಹುತಾತ್ಮರ ಸ್ಮರಣೆಗಾಗಿ ಸಿಂಘು /ಟಿಕ್ರೀ ಗಡಿಯಲ್ಲಿ ಸೂಕ್ತವಾದ ಹುತಾತ್ಮ ಸ್ಮಾರಕವನ್ನು ನಿರ್ಮಿಸುವಂತೆ, ಲಕ್ಕಿಂಪುರ್ ಖೀರಿಯ ಹುತಾತ್ಮರನ್ನು ಒಳಗೊಂಡಂತೆ ಚಾರಿತ್ರಿಕ ರೈತ ಹೋರಾಟದ ಎಲ್ಲ ಹುತಾತ್ಮರ ಕುಟುಂಬಗಳಿಗೂ ಸೂಕ್ತವಾದ ಪರಿಹಾರವನ್ನು ನೀಡುವಂತೆ, ರೈತ ಹೋರಾಟದ ಸಂಬಂಧ ಹಾಕಲಾಗಿರುವ ಎಲ್ಲ ಪ್ರಕರಣಗಳನ್ನು ಹಿಂಪಡೆಯುವಂತೆ, ಕಾರ್ಮಿಕರು ರೈತರು ಮತ್ತು ಎಲ್ಲ ದುಡಿಯುವ ಜನತೆಯ ನಡುವೆ ಸಂಸತ್ತಿನ ತರ್ಕಸಮ್ಮತ ಮತ್ತು ಸಮಾನ ಹಂಚಿಕೆಗೆ ಬೇಕಾದ ಹಣಕಾಸಿನ ಸಂಪನ್ಮೂಲವನ್ನು ಕಂಡುಕೊಳ್ಳುವುದಕ್ಕಾಗಿ ಅತಿ ಶ್ರೀಮಂತರಿಗೆ ತೆರಿಗೆ ಹಾಕುವಂತೆ, ಕಾಪೆರ್Çರೇಟ್ ತೆರಿಗೆಯನ್ನು ಹೆಚ್ಚಿಸಬೇಕು ಸಂಸತ್ತಿನ ತೆರಿಗೆ ಮತ್ತು ಉತ್ತರಾಧಿಕಾರ ತೆರಿಗೆಯನ್ನು ಪುನಃ ಜಾರಿಗೆ ತರುವಂತೆ ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಪ್ರಮುಖರಾದ ಶರಣಬಸಪ್ಪ ಮಮಶೆಟ್ಟಿ, ಮೌಲಾ ಮುಲ್ಲಾ, ನಾಗೇಂದ್ರಪ್ಪ ಥಂಬೆ, ಅರ್ಜುನ್ ಗೊಬ್ಬೂರ್, ಮಹೇಶ್ ಎಸ್.ಬಿ., ಎಸ್.ಆರ್. ಕೊಲ್ಲೂರ್, ಭೀಮಶೆಟ್ಟಿ ಯಂಪಳ್ಳಿ, ಎಂ.ಬಿ. ಸಜ್ಜನ್, ಡಾ. ಪದ್ಮಿನಿ ಕಿರಣಗಿ, ಭೀಮಾಶಂಕರ್ ಮಾಡಿಯಾಳ್, ಡಾ. ಸಾಯಬಣ್ಣಾ ಗುಡುಬಾ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here