ದೇಶದಲ್ಲಿ ಹರಡುತ್ತಿರುವ ದ್ವೇಷ, ಅಸುಹೆ ಹಿಮ್ಮೆಟ್ಟಿಸುವುದು ಅಗತ್ಯ: ಸಲೀಮ್ ಇಂಜಿನಿಯರ್
ಕಲಬುರಗಿ: ದೇಶದ ವೈವಿಧ್ಯತೆಯನ್ನು ಕೆಲವು ದುಷ್ಟ ಶಕ್ತಿಗಳು ದ್ವೇಷ, ಅಸುಹೆಯ ಬಿತ್ತುವ ಮೂಲಕ ವಾತಾವರಣ ಕೆಡಿಸಲು ಮುಂದಾಗಿವೆ. ಅಂತಹ ದುಷ್ಟ ಶಕ್ತಿಗಳನ್ನು ಹಿಮ್ಮೆಟ್ಟಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಆಗಿದೆ. ದ್ವೇಷ ಮತ್ತು ಅಸುಹೆ ವಿನಾಶಕ್ಕೆ ದಾರಿ ಮಾಡಿಕೊಡುತ್ತವೆ. ದ್ವೇಷವನ್ನು ದ್ವೇಷದಿಂದ ಕಿತ್ತುಹಾಕಲು ಎಂದಿಗೂ ಸಾಧ್ಯವಿಲ್ಲ ಎಂದು ದಾವತ್ ಇಸ್ಲಾಮಿ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ ಸಲೀಮ್ ಇಂಜಿನಿಯರ್ ನವದೆಹಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಹಿದಾಯತ್ ಸೆಂಟರ್ ನಲ್ಲಿ ಆಯೋಜಿಸಿದ ಸದ್ಭಾವನಾ ಮಂಚ್ ಜಿಲ್ಲಾ ಘಟಕದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂವಿಧಾನದಲ್ಲಿ ಸ್ವಾತಂತ್ರ್ಯ, ಸಮಾನತೆ, ಸರ್ವರಿಗೂ ನ್ಯಾಯ ಮತ್ತು ಭಾತೃತ್ವ ಮೌಲ್ಯವನ್ನು ಎತ್ತಿಹಿಡಿಯಲು ಹೆಚ್ಚು ಒತ್ತುಕೊಟ್ಟಿದೆ, ನಮ್ಮನ್ನು ಆಳುವ ವರ್ಗಗಳು ಇದರ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಇಂದಿನ ದಿನಗಳಲ್ಲಿ ಕಾಣುಸಿಗುತ್ತದೆ. ಕೆಲವೊಂದು ಮಾಧ್ಯಮಗಳ ಮೂಲಕ ಧರ್ಮ ಮತ್ತು ಜಾತಿ ಹೆಸರಲ್ಲಿ ಪ್ರಜಾಪ್ರಭುತ್ವವನ್ನು ದುರ್ಬಲವಾಗಿಸುವ ಹುನ್ನಾರ ನಡೆಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು.
ಯಾವುದೇ ಧರ್ಮವು ದ್ವೇಷ ಹರಡುವಿಕೆಗೆ ಅಸ್ಪದ ನೀಡಲ್ಲ, ಇಂತಹವನ್ನು ಬೆಂಬಲಿಸುವುದು ಧಾರ್ಮ ಮತ್ತು ಸಂವಿಧಾನದ ವಿರುದ್ಧ ನಡೆಯಾಗಿದೆ. ಧರ್ಮ ಎಂಬುದು ಸಕಲರ ಲೇಸನ್ನು ಬಯಸುತ್ತದೆ. ಸ್ವಾತಂತ್ರ್ಯ, ಮಾನವೀಯ ಮೌಲ್ಯಗಳನ್ನು ಕಾಪಾಡಲು ಪ್ರೇರಣೆ ನೀಡುತ್ತವೆ. ಎಲ್ಲರನ್ನೂ ಜೊತೆಗೂಡಿಸುವುದನ್ನು ಕಲಿಸಿಕುಡುತ್ತದೆ ಎಂದರು.
ದ್ವೇಷವನ್ನು ದ್ವೇಷದಿಂದ ಕಿತ್ತುಹಾಕಲು ಎಂದಿಗೂ ಸಾಧ್ಯವಿಲ್ಲ, ಪ್ರೀತಿ ವಾತ್ಸಲ್ಯ ಮತ್ತು ವೈವಿಧ್ಯತೆಯಲ್ಲೂ ಎಕತೆಯೆಂಬ ಮನೋಭಾವದಿಂದ ಈ ಕೆಟ್ಟಬೆರುಗಳನ್ನು ತಳಹದಿಯಿಂದ ಹೊಗಲಾಡಿಸಬಹುದಾಗಿದ್ದು, ಸದ್ಭಾವನ ಮಂಚ್ ಸರ್ವಧರ್ಮಿಯರನ್ನು ಒಳಗೊಂಡಂತೆ ಸಂವಿಧಾನದ ಮೌಲ್ಯಗಳು ಮತ್ತು ಎಲ್ಲಾ ಧರ್ಮಗಳ ಆಶಯಗಳನ್ನು ಒಳಗೊಂಡು ಕೆಲಸ ಮಾಡಿಬೇಕೆಂಬ ಆಶಾಯ ಹೊಂದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಮಾತೆ ಇಸ್ಲಾಮಿ ಹಿಂದ್ ರಾಜ್ಯ ಅಧ್ಯಕ್ಷರಾದ ಮೊಹಮ್ಮದ್ ಸಾದ್ ಬೆಲಗಾಮಿ, ಆಳಂದ ಕರುಣೇಶ್ವರ ಮಠದ ಸ್ವಾಮಿಜಿ, ಷ.ಬ್ರ ಕೆಂಪ್ ಬಸವೇಶ್ವರ ಸ್ವಾಮಿಜಿ, ವಿಶ್ವಕರ್ಮ ಎಕದಂಡಗಿ ಮಠದ ದೊಡ್ಡೇಂದ್ರ ಸ್ವಾಮಿಗಳು, ಕ್ರಿಶ್ಚಿಯನ್ ಸಮುದಾಯದ ಫಾದರ್ ಸ್ಟ್ಯಾನಿ ಲೋಬೂ, ಮಲಿಖೇಡನ ಸೈಯದ್ ಶಾ ಮುಸ್ತಫಾ ಖಾದ್ರಿ ಸಾಹೇಬ್, ಉಮಾಕಾಂತ್ ನಿಗುಡಗಿ, ಪ್ರಭು ಖಾನಾಪುರೆ, ಮೇಹರಾಜ ಪಟೇಲ ತಾವರಗೇರಾ, ರಮೇಶ್ ಲಂಡನಕರ್ ಮಾತನಾಡಿ ತಮ್ಮ ವಿಚಾರಗಳನ್ನು ಮುಂದಿಟ್ಟರು.
ಸುಭಾಷ್ ಶಿಲವಂತ್, ಮಹೇಶ್ ರಾಠೋಡ್, ಪ್ರೊ, ಕಟ್ಟಿಮನಿ, ಸಂಧ್ಯರಾಜ್ ಸಾಯ್ಯಮುಲ್, ಪಲ್ಲ ರೆಡ್ಡಿ, ಲಕ್ಷ್ಮಿಕಾಂತ್ ಹುಬ್ಯ, ಜಾಕೀರ್ ಹುಸೇನ್ ಸಾಬ್, ನಿವೃತ್ತ ನೌಕರರಾದ ಅಬ್ದುಲ್ ಖದೀರ್ ಸೇರಿದಂತೆ ಹಲವಾರು ವೇದಿಕೆಯ ಮೇಲಿದ್ದರು.