ಕಲಬುರಗಿ: ಪರಿಸರ ರಕ್ಷಣೆಗಾಗಿ ಯುವಧ್ವನಿಯಿಂದ ನಮ್ಮ ನಡೆ ಭೀಮಾ ನದಿಕಡೆ ಜಾಥಾ

0
47
  • ಪ್ರಿಯಾಂಕ್ ಮಾವಿನಕರ್

ಕಲಬುರಗಿ: ಪರಿಸರ ರಕ್ಷಣೆಗಾಗಿ ಯುವಧ್ವನಿ “ನಮ್ಮ ನಡೆ ಭೀಮಾ ನದಿಯ ಕಡೆ” ಎಂಬ ಶೀರ್ಷಿಕೆಯಡಿಯಲ್ಲಿ ಯುವ ಮುನ್ನಡೆ ತಂಡ ಮತ್ತು ಸಂವಾದ ಯುವ ಸಂಪನ್ಮೂಲ ಕೇಂದ್ರ ಕಲಬುರಗಿ ಸಂಸ್ಥೆಯ ಸಹಯೋಗದಲ್ಲಿ ಇಂದು ಕಲಬುರಗಿ ಜಗತ್ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ, ನಂತರ ಡಿಸಿ ಕಛೇರಿಯವರೆಗೂ ಕಾಲ್ನಡಿಗೆಯ ಜಾಥಾದ ಮೂಲಕ ಜಿಲ್ಲಾ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.

ಕಲಬುರಗಿ ಜಿಲ್ಲೆಗೆ ಭೀಮಾ ನದಿಯೇ ಜೀವಜಲವಾಗಿದೆ ಆದರೆ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಗರೀಕರಣದಿಂದಾಗಿ ನದಿಯು ಪ್ರತಿ ವರ್ಷ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣವು ಕುಸಿಯುತ್ತಿದೆ ಯಾಕೆಂದರೆ ಕಲಬುರಗಿ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಗಿಡ ಮರಗಳ ಸಂಖ್ಯೆ ಕಡಿಮೆ ಇದ್ದ ಕಾರಣಕ್ಕಾಗಿ ಸಮಯಕ್ಕೆ ಸರಿಯಾಗಿ ಮಳೆಯಾಗದೆ ಬೇಸಿಗೆ ಕಾಲದಲ್ಲಿ ಕಲಬುರಗಿ ಜನರು ಮತ್ತು ಪ್ರಾಣಿ ಪಕ್ಷಿಗಳು ಹನಿ ನೀರಿಗೂ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

Contact Your\'s Advertisement; 9902492681

ಭೀಮಾ ನದಿಗೆ ಸಂಬಂಧಿಸಿದಂತೆ ಹೇಳುವುದಾದರೆ ಮರಳು ಗಣಿಗಾರಿಕೆ, ನದಿಗೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆಯುವುದು ಹಾಗೂ ನಗರ ಮತ್ತು ಗ್ರಾಮಗಳ ಚರಂಡಿ ನೀರನ್ನು ನದಿಗೆ ಬಿಡುವುದರಿಂದ ಭೀಮಾ ನದಿಯು ಸಂಪೂರ್ಣವಾಗಿ ಕಲುಷಿತವಾಗುತ್ತಿದೆ ಎಂದು ಯುವ ಮುನ್ನಡೆ ತಂಡದ ಅಸ್ಮೀತಾ ಕಳವಳವನ್ನು ವ್ಯಕ್ತಪಡಿಸಿದರು.

ಯುವ ಮುನ್ನಡೆ ತಂಡದ ರಾಜೇಶ್ರೀ ಮಾತಾನಾಡುತ್ತಾ ನದಿ ಎಂದರೆ ಬರಿ ನೀರಲ್ಲ‌ ಸಕಲ ಜೀವಗಳಿಗೂ ಪರಿಸರ ಒಂದು ಜೀವರಕ್ಷೆಯಾಗಿದೆ‌‌. ಹಾಗಾಗಿ ನದಿಯನ್ನು ಸಂರಕ್ಷಿಸುವ, ಕಾಳಜಿ ಮಾಡುವ ಮತ್ತು ಸುಸ್ಥಿರವಾಗಿ ಮತ್ತು ಸ್ವಚ್ಛವಾಗಿಟ್ಟುಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಂವಾದ ಯುವ ಸಂಪನ್ಮೂಲ ಕೇಂದ್ರ, ಯುವ ಮುನ್ನಡೆ ತಂಡ ಹಾಗೂ ಪರಿಸರವಾದಿಗಳು ಸೇರಿಕೊಂಡು ಭೀಮಾ ನದಿ ಉಳುವಿಗಾಗಿ ಮತ್ತು ಪರಿಸರ ಉಳಿಸುವ ಕಾಳಜಿಯಿಂದಾಗಿ ಪಾದಯಾತ್ರೆಯ ಮೂಲಕ ಪರಿಸರ / ಜಲಮಾಲಿನ್ಯ ತಡೆಯ ಅಭಿಯಾನವನ್ನು ಕೈಗೊಂಡಿದ್ದೇವೆ ಈ ಅಭಿಯಾನವನ್ನು ಯಶಸ್ವಿಗೊಳಿಸಲು ಕಲಬುರಗಿ ಜನರು ಕೈ ಜೋಡಿಸಬೇಕೆಂದು ತಿಳಿಸಿದರು.

ಸುರಿಯುವ ಮಳೆ ಹನಿಗಳ ಜೊತೆಗೆ ಯುವಜನರ ಜಗತ್ ಸರ್ಕಲ್‌ನಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೂ ಪರಿಸರ ಜಾಗೃತಿ ಹಾಡುಗಳನ್ನು ಹಾಡುತ್ತಾ ಪರಿಸರ ರಕ್ಷಣೆ ಘೋಷಣೆಗಳನ್ನು ಕೂಗಿತ್ತಾ ಜಿಲ್ಲಾ ಅಧಿಕಾರ ಕಛೇರಿಗೆ ಉತ್ಸಾಹದ ಹೆಜ್ಜೆಯನ್ನು ಹಾಕಿದರು.

ಪರಿಸರ ನ್ಯಾಯಕ್ಕಾಗಿ ಯುವಧ್ವನಿ ನಮ್ಮ ನಡೆ ಭೀಮಾ ನದಿಯ ಕೆಡ ಎಂಬ ಈ ಜಾಥಾದಲ್ಲಿ‌ ಅನುರಾಗ, ನೀತಾ, ನಿಖೀತಾ, ವಿಜಯ ಕುಮಾರ್, ಶಾಂತು, ತಾಯಮ್ಮ, ಭಾಗ್ಯಶ್ರೀ, ರಾಧೀಕಾ, ಬೀರಲಿಂಗ, ವಿಜಯ ಮತ್ತಿತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here