ಕಲಬುರಗಿ ಕೇಂದ್ರೀಯ ವಿವಿಯಲ್ಲಿ ಆರ್.ಎಸ್.ಎಸ್ ಸಭೆ: ಸ್ಥಳೀಯ ಮುಖಂಡರ ಆಕ್ರೋಶ: ಹೋರಾಟದ ಎಚ್ಚರಿಕೆ

0
105

ಕಲಬುರಗಿ: ಇಲ್ಲಿನ ಕಡಗಂಚಿ ಕೇಂದ್ರೀಯ ವಿಶ್ವವಿದ್ಯಾಲಯ ಈ ದೇಶದ 140 ಕೋಟಿ ಜನರ ಪ್ರಾತಿನಿಧಿಕ ಸಂಸ್ಥೆ ಹೊರತು ಸಂಘಿಗಳ ಕೇಶವ ಕೃಪಾ ಅಥವಾ ನಾಗಪೂರದ ಕಚೇರಿ ಅಲ್ಲ. ವಿವಿಯಲ್ಲಿ ಆರ್.ಎಸ್.ಎಸ್ ಪ್ರಾಯೋಜಿತ ಕಾರ್ಯಕ್ರಮಗಳು ಮರುಕಳಿಸಿದರೆ ಶೀಘ್ರವೇ ವಿವಿಯ ಮುಂದೆ ಮತ್ತೆ ಉಗ್ರವಾದ ಹೋರಾಟ ನಡೆಸುವುದಾಗಿ ಕೇಂದ್ರಿಯ ವಿಶ್ವವಿದ್ಯಾಲಯ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.

ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ ಪ್ರಾರಂಭವಾದ ದಿನದಿಂದಲೂ ಅಲ್ಲಿ ಸಂಘ ಪರಿವಾರದ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು, ಸ್ಥಳೀಯರ ವಿರೋಧ ನಡುವೆಯೂ ಕೇಂದ್ರದಲ್ಲಿ ಆರ್.ಎಸ್.ಎಸ್ ಸಂಚಾಲಿತ ಬಿಜೆಪಿ ಸರಕಾರ ಅಧಿಕಾರದಲ್ಲಿರುವುದರಿಂದ ಸಂಘಿಗಳಿಗೆ ತಮ್ಮ ಆಟಾಟೋಪ ಮೆರೆಯಲು ರಹದಾರಿ ತೆರೆದಂತೆ ಆಗಿದೆ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ದುರಿದೆ.

Contact Your\'s Advertisement; 9902492681

ವಿವಿಯಲ್ಲಿ ಉನ್ನತ ಮಟ್ಟದ ಶೈಕ್ಷಣಿಕ ಚಟುವಟಿಕೆಗಳು, ಜನೋಪಯೋಗಿ ಸಂಶೋಧನೆಗಳು, ವರ್ತಮಾನದ ತಲ್ಲಣಗಳನ್ನು ಕುರಿತು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ, ಕಾರ್ಯಾಗಾರಗಳು ನಡೆಯಬೇಕೆ ಹೊರತು ದೇಶ ವಿಭಜಕ, ವಿಧ್ವಂಸಕ ಕೃತ್ಯಗಳಲ್ಲ. ದೇಶದ ಉನ್ನತ ಶಿಕ್ಷಣ ಸಂಸ್ಥೆಯೊಂದು ಕೋಮುವಾದಿಗಳ ವಿಷಸುಳಿಯಲ್ಲಿ ಸಿಲುಕಿ ಗಬ್ಬೆದ್ದು ಹೋಗಿದ್ದನ್ನು ಜನತೆ ಶೈಕ್ಷಣಿಕ ಇಲಾಖೆಯ ಮಹಾ ದುರಂತವೆಂದೆ ಕಳವಳ ವ್ಯಕ್ತಪಡಿಸಿದ್ದಾರೆ.

ಅಲ್ಲಿನ ಅನೇಕ ಪ್ರಾಧ್ಯಾಪಕರು ಇಂಥದೊಂದು ದೇಶ ಕಂಟಕ ಸಂಸ್ಥೆಯೊಂದಿಗೆ ಗುರುತಿಸಿಕೊಂಡು ಸಂಘದ ಹಾಡು ಹಾಡಿದ್ದನ್ನು ನಾಚಿಕೆಗೇಡಿನ ಸಂಗತಿಯಾಗಿ ಪರಿಗಣಿಸಿ ಛೀ ಮಾರಿ ಹಾಕುವ ಕೃತ್ಯವಾಗಿದೆ. ವಿವಿಯಲ್ಲಿ ಸಂವಿಧಾನ ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಬಾರದೆಂದು ಆಗ್ರಹಿಸುತ್ತಲೆ ಬರುತ್ತಿದ್ದರೂ ಅಲ್ಲಿನ ಕುಲಪತಿಗಳಾದಿಯಾಗಿ ಎಲ್ಲ ಉನ್ನತ ದರ್ಜೆಯ ಅಧಿಕಾರಿಗಳು ಆರ್.ಎಸ್.ಎಸ್ ನ ಕೈಗೊಂಬೆ ಆಗಿ ಮೆರೆಯುತ್ತಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ವಿವಿಯ ವಿರುದ್ಧ ಬೃಹತ್ ಪ್ರತಿಭಟನೆ ನಡೆದು ಕೆಲವು ದಿನ ಸಂಘಿಗಳು ಕೋಮಾಕ್ಕೆ ತೆರಳಿದಂತೆ ನಟಿಸಿದ್ದರು. ಆದರೆ ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ತಮ್ಮ ಬಾಲ ಬಿಚ್ಚಿದ್ದಾರೆ. ಸ್ಥಳೀಯರು ಕೇಂದ್ರಿಯ ವಿವಿ ಬಗ್ಗೆ ಒಂದು ಎಚ್ಚರಿಕೆ ಕಣ್ಣು ಇಟ್ಟಿದ್ದಾರೆ ಎಂಬ ಅರಿವು ಸಂಘಿಗಳಿಗೆ ಇದ್ದಂತಿಲ್ಲ. ಇನ್ನು ಮುಂದೆ ರಾಜ್ಯವ್ಯಾಪಿ ಹೋರಾಟಕ್ಕೆ ಜನತೆ ಮುಂದಾಗಲಿದೆ ಎಂದು ಸಮಿತಿಯ ಡಿ. ಜಿ ಸಾಗರ, ಎಸ್ ಪಿ ಸುಳ್ಳದ, ನೀಲಾ. ಕೆ, ಡಾ. ಮೀನಾಕ್ಷಿ ಬಾಳಿ, ಡಾ. ಪ್ರಭು ಖಾನಾಪೂರೆ, ಪ್ರೊ. ಆರ್ ಕೆ ಹುಡಗಿ, ದತ್ತಾತ್ರಯ ಇಕ್ಕಳಕಿ, ಚಂದಮ್ಮಾ ಗೋಳಾ, ಸುಧಾಮ ಧನ್ನಿ, ಲವಿತ್ರ ವಸ್ತ್ರದ, ಸುಜಾತಾ ಕುಸನೂರ, ಕೋದಂಡರಾಮ, ಪಾಂಡುರಂಗ ಮಾವಿನಕರ್ ಎಚ್ಚರಿಕೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here