ರೈತರಿಂದ ಬೆಂಗಳೂರಿನ ಪ್ರೀಡಮ್ ಪಾರ್ಕನಲ್ಲಿ ಪ್ರತಿಭಟನೆ

0
50

ಕಲಬುರಗಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕಲಬುರಗಿ ಜಿಲ್ಲೆಯಿಂದ ಸಾವಿರಾರು ರೈತರು ಬೆಂಗಳೂರು ಪ್ರೀಡಮ್ ಪಾರ್ಕನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಸರಕಾರದ ಪ್ರತಿನಿಧಿಯಾಗಿ ರೈತರ ಬೇಡಿಕೆಯ ಅಹವಾಲವನ್ನು ಸ್ವೀಕರಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಪ್ರಶಾಂತಗೌಡ ಆರ್. ಮಾಲಿಪಾಟೀಲ ಮಾತನಾಡಿ ಭಾರತ ಕೃಷಿ ಪ್ರಧಾನವಾದ ದೇಶ ಅತಿಹೆಚ್ಚು ಶೇ 80% ಜನರು ಕೃಷಿಯನ್ನು ಅವಲಂಬಿಸಿ ತಮ್ಮ ಬದುಕನ್ನು ಕಟ್ಟಿಕೊಂಡಿರುತ್ತಾರೆ ದೇಶದ ಒಟ್ಟು ಜನಸಂಖ್ಯೆ 135 ಕೋಟಿ ಅದರಲ್ಲಿ 108 ಕೋಟಿ ಕೃಷಿಯಲ್ಲಿ ಅವಲಂಬಿತರಾಗಿರುತ್ತಾರೆ.

Contact Your\'s Advertisement; 9902492681

ಏಷ್ಯಾ ಖಂಡದಲ್ಲಿ ಸಮೃದ್ಧವಾದ ಕೃಷಿ ಸಂಪನ್ಮೂಲ ನಮ್ಮ ಭಾರತ ದೇಶದಲ್ಲಿ ನೂರಾರು ನದಿಗಳಿವೆ ಮತ್ತು ಫಲವತ್ತಾದ ಭೂಮಿಯು ಇದೆ ಆದರು ಭಾರತ ರೈತ ಬಡವ, ಕಾರಣ ರೈತರಿಗೆ ಅನುಕೂಲವಾಗುವಂತಹ ಯೋಜನೆಗಳು ಅಂದರೆ ನದಿ ನೀರಿನ ಸದ್ಬಳಿಕೆ ಇಲ್ಲ. ಆಳುವ ಸರ್ಕಾರಗಳು ರೈತನನ್ನು ಒಂದು ರೀತಿ ದ್ವಿತೀಯ ದರ್ಜೆ ಪ್ರಜೆಯಂತೆ ಮಲತಾಯಿ ಧೋರಣೆ ಅನುಸರಿಸಿಕೊಂಡು ಬಂದು ಆತನನ್ನು ಬಡತನದ ಕೂಪದಲ್ಲಿ ತಳ್ಳಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತವಿರೋಧಿ ಕಾನೂನು ಜಾರಿ ಮಾಡಿ ಗಾಯದ ಮೇಲೆ ಬರೆಯಳೆದಂತೆ ಸದ್ಯದ ಪರಿಸ್ಥಿತಿಯಿದೆ. ಆದ ಕಾರಣ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ದಿನಾಂಕ: 22-07- 2024ರ ಸೋಮವಾರದಂದು ಬೆಂಗಳೂರಿನಲ್ಲಿ ರೈತರ ಹಕ್ಕೊತ್ತಾಯದ ಮನವಿಪತ್ರವನ್ನು ಸಲ್ಲಿಸಲಾಯಿತು.

ದಿನಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನ ಹಕ್ಕೋತ್ತಾಯಗಳು ಸರ್ಕಾರವು ಮೂರು ಕೃಷಿ ಕಾಯ್ದೆಗಳನ್ನು ಈಗಾಗಲೇ ಹಿಂಪಡೆದಿದ್ದು, ಆದರೆ ಸರ್ಕಾರ ವತಿಯಿಂದ ಮೂರು ಕಾಯ್ದೆಗಳನ್ನು ಹಿಂಪಡೆದು ಹೊರಡಿಸುವುದು.ರೈತ ಬೆಳೆದ ಬೆಳೆಗಳಿಗೆ ಕಾನೂನಾತ್ಮಕ ದರ ನಿಗದಿಪಡಿಸುವುದು ಹಾಗೂ ಡಾ. ಸ್ವಾಮಿನಾಥನ್ ಜಾರಿಗೆಗೊಳಿಸುವುದು. ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದು. ಕೃಷ್ಣ ಆಲಮಟ್ಟಿ ಜಲಾಶಯದ ಎತ್ತರ 519 ರಿಂದ 524.256ಕ್ಕೆ ಕೂಡಲೇ ಎತ್ತರಿಸುವುದು. ಮಹಾದಾಯಿ ಯೋಜನೆ ಜಾರಿ ನವುಲಿ ಹತ್ತಿರ ಸಮಾನಾಂತರ ಜಲಾಶಯ ನಿರ್ಮಿಸುವುದು. ಬೆಣ್ಣೆ ಹಳ ಯೋಜನೆ ಜಾರಿ ಹಾಗೂ ಮೇಕೆದಾಟು ಯೋಜನೆ ಶೀಘ್ರ ಜಾರಿಗೊಳಿಸುವುದು.

ಬಗರ್‍ಹುಕುಂ ಸಾಗೂವಳಿದಾರರಿಗೆ ಪಟ್ಟಾ ನೀಡುವುದು. ರಾಜ್ಯದಲ್ಲಿ ಈಗಾಗಲೇ ಹಿಂದಿನ ಸರ್ಕಾರಗಳು ರೈತರ ವಿದ್ಯುತ್ ಪಂಪ್‍ಸೆಟ್‍ಗಳಿಗೆ ಪರಿಕರಗಳನ್ನು ಉಚಿತವಾಗಿ ನೀಡುತ್ತಿದ್ದರು. ತಮ್ಮ ಸರ್ಕಾರ Uಓಉಖಿ Sಛಿheem ನ್ನು ಮುಂದುವರೆಸುವುದು.ಹಿಂದಿನ ಸರ್ಕಾರ ವಿದ್ಯುತ್ ಟಿಸಿಗಳಿಗೆ 25000 ನಿಗದಿ ಮಾಡಿದ್ದು, ತಮ್ಮ ಸರ್ಕಾರ 250000 ರೂ. ನಿಗದಿ ಮಾಡಿದ್ದು, ಹೆಚ್ಚು ಮೊತ್ತವಾಗಿರುತ್ತದೆ. ತಕ್ಷಣ ಈ ಆದೇಶವನ್ನು ಹಿಂಪಡೆಯಲು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲೆಯಿಂದ ಪಂಚಯ್ಯ ಸ್ವಾಮಿ ಶರಣು ಬೊಮ್ಮನಳ್ಳಿ ಹರೀಶ್ ಜ್ಯೋತಿ ಹಿರೇಮಠ್ ಭಾರತಿ ಕವಿತಾ ಸೇರಿದಂತೆ ಪದಾಧಿಕಾರಿಗಳು ಎಲ್ಲಾ ತಾಲೂಕಿನ ಅಧ್ಯಕ್ಷರು ರೈತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here