ವಾಡಿ: ಮಳೆಗಾಲದಲ್ಲೂ ನೀರಿನ ಹಾಹಾಕಾರ

0
28

ವಾಡಿ: ಪಟ್ಟಣದಲ್ಲಿ ಕಳೆದ ಐದು ದಿನಗಳಿಂದ ನೀರಿಗಾಗಿ ಜನರು ಪರದಾಡುತ್ತಿದ್ದಾರೆ ಇದನ್ನು ಗಂಭೀರವಾಗಿ ಪರಿಗಣಿಸಿ ನೀರಿನ ಸಮಸ್ಯೆಯನ್ನು ಬಗೆಹರಿಸಿ ಎಂದು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

ಪಟ್ಟಣಕ್ಕೆ ನೀರು ಪೂರೈಕೆ ಆಗುತ್ತಿಲ್ಲ ಇದನ್ನು ಸ್ಥಳೀಯ ಪುರಸಭೆ ಮುಖ್ಯಾಧಿಕಾರಿಗಳಿಗೆ ಪ್ರಶ್ನಿಸಿದರೆ ಮೊದಲಿನಂತೆ ಮೋಟಾರ್ ದುರಸ್ತಿ ಉತ್ತರ ಹೇಳುತ್ತಾರೆ. ಇಂತಹ ಸಂಧರ್ಭದಲ್ಲಿ ಪ್ರತಿ ವಾರ್ಡ್ ಗಳಿಗೆ ಟ್ಯಾಂಕ್‌ ಗಳಿಂದ ನಿಂದ ನೀರು ಪೂರೈಸುವ ಕಾರ್ಯ ಕೂಡಾ ಸ್ಥಳೀಯ ಆಡಳಿತ ಮಾಡುತ್ತಿಲ್ಲ.ಇಂತಹ ಮಳೆಗಾಲದಲ್ಲಿಯೂ ನೀರಿಗಾಗಿ ಪರಿತಪಿಸುವಂತಾಗಿದೆ.

Contact Your\'s Advertisement; 9902492681

ಇಂತಹ ನೀರಿನ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸುಮಾರು ಸಲ ಗಮನಕ್ಕೆ ತಂದಿರುತ್ತೆವೆ,ಆದರೂ ಅವರು ಪಟ್ಟಣದ ನೀರಿನ ಪರದಾಟಕ್ಕೆ ಸ್ಪಂದಿಸದೇ ಇರುವುದು ಯಾಕೆ ಅಂತಹ ಗೊತ್ತಾಗುತ್ತಿಲ್ಲ. ಪಟ್ಟಣದ ಪಕ್ಕದಲ್ಲಿ ಎರಡೆರಡು ನದಿಗಳಿದ್ದರೂ ಜನರ ಗೊಳಾಟ ತಪ್ಪುತ್ತಿಲ್ಲ. ಪೂರೈಕೆ ಆಗುವ ನೀರು ಸಹ ಶುದ್ದವಾಗಿರುವುದಿಲ್ಲ. ಚರಂಡಿ ನೀರು ಹಾಗೂ ಮಳೆಯಿಂದ ಕಲುಷಿತ ನೀರು ಸೇರ್ಪಡೆಯಾಗಿ ಸಾರ್ವಜನಿಕರು ಅನಿವಾರ್ಯವಾಗಿ ರಾಡಿ ನೀರು ಬಳಸುವ ಪರಿಸ್ಥಿತಿ ಬಂದಿದೆ‌ .

ಶಾಶ್ವತ ಕುಡಿಯುವ ನೀರಿನ ಯೋಜನೆಯಡಿ ನೀರು ಶುದ್ಧೀಕರಣ ಘಟಕ ನಿರ್ಮಾಣವಾದರೂ ಸಹ ಇಲ್ಲಿನ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಶುದ್ದಿಕರಣ ಗೊಳ್ಳುತ್ತಿಲ್ಲ.

ನೀರಿನ ಮೋಟಾರ್ ಸಮಸ್ಯೆ,ವಿದ್ಯುತ್ ಸಮಸ್ಯೆ ಉಂಟಾದರೆ ಪರ್ಯಾಯವಾಗಿ ಪುರಸಭೆ ವತಿಯಿಂದ ಸುಮಾರು ಎರಡು ವರ್ಷಗಳ ಹಿಂದೆ ಐವತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಇಂಗಳಗಿ ಮಾರ್ಗದ ಎಸಿಸಿ ಪೈಪ್ ಲೈನಿಗೆ ಸಂಪರ್ಕ ಕಲ್ಪಸಿದರು ಅದನ್ನು ಕಾರ್ಯಗತಗೊಳಿಸದೇ ಪುರಸಭೆ ಸಂಪತ್ತು ಹಾಳು ಮಾಡಿ ಜನರು ಗೊಳಾಡುವಂತೆ ಮಾಡಿದ್ದಾರೆ.

ಪಟ್ಟಣದ ಎರಡು ವಾರ್ಡಗಳನ್ನು ಹೊಂದಿದೆ ಎಸಿಸಿ ಒಡೆತನದ ಕಾಲೋನಿ ಹಾಗೂ ಎರಡು ವಾರ್ಡಗಳನ್ನು ಹೊಂದಿದ ಕೇಂದ್ರ ಸರ್ಕಾರದ ಒಡೆತನದ ರೈಲ್ವೆ ಕಾಲೋನಿಗಳಲ್ಲಿ ಇಂತಹ ಯಾವುದೇ ನೀರಿನ ಸಮಸ್ಯೆ ಇರುವುದಿಲ್ಲ ಮತ್ತು ಅಲ್ಲಿ ಶುದ್ಧ ನೀರು ಸರಬರಾಜಾಗುತ್ತದೆ. ಆದರೆ ಇಲ್ಲಿ ಮಾತ್ರ ಸುಮಾರು ವರ್ಷಗಳ ನೀರಿನ ಸಮಸ್ಯೆ ಇನ್ನೂ ನಿಂತಿಲ್ಲ. ನೀರಿಗಾಗಿ ಲಕ್ಷಾಂತರ ರೂಪಾಯಿಗಳ ಖರ್ಚು ಖಾತೆಯಲ್ಲಿ ದಾಖಲಾಗುತ್ತಿದೆ.

ಇಲ್ಲಿನ ಪುರಸಭೆ ಯಲ್ಲಿ ನಕಲು ಬಿಲ್ ಗಳ ಹಾವಳಿ ಕೂಡಾ ಹೆಚ್ಚಾಗಿದ್ದು ಇದನ್ನು ಪರೀಕ್ಷೀಸಿ ಕ್ರಮಕೈಗೊಳ್ಳಿ. ಇದೇ ರೀತಿ ಪಟ್ಟಣದಲ್ಲಿ ನೀರಿನ ಹಾಹಾಕಾರ ಮುಂದುವರೆದರೆ ಬರುವ ಅಗಸ್ಟ್ 01ನೇ ದಿನಾಂಕದಂದು ಸಾರ್ವಜನಿಕರೊಂದಿಗೆ ಪುರಸಭೆ ಎದರು ಪ್ರತಿಭಟನೆ ಮಂದಾಗಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here