ಕಲಬುರಗಿ: ಬರುವ ಅಗಷ್ಟ ಕೊನೆಯ ವಾರದಲ್ಲಿ ನಡೆಯವಿರುವ ತಾಲೂಕಾ ಮಟ್ಟದ 8 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ವಿನೋದ ಪಾಟೀಲ ಸರಡಗಿ ಹಾಗೂ ಕಾರ್ಯಾಧ್ಯಕ್ಷರಾಗಿ ರಾಘವೇಂದ್ರ ಕಲ್ಯಾಣಕರ್ ಅವರನ್ನು ಆಯ್ಕೆ ಮಾಡಲಾಗಿದೆ.
ನಗರದ ಕನ್ನಡ ಭವನದಲ್ಲಿ ಕ.ಸಾ.ಪ ತಾಲೂಕಾಧ್ಯಕ್ಷ ಗುರುಬಸಪ್ಪ ಎಸ್. ಸಜ್ಜನಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮತಿ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.
ನಂತರ ಇವರನ್ನು ಸತ್ಕರಿಸಿ ಮಾತನಾಡಿದ ಸಜ್ಜನಶೆಟ್ಟಿ ಅವರು, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಸಮ್ಮೇಳನಗಳು ಪ್ರಮುಖ ಪಾತ್ರ ವಹಿಸುತ್ತವೆ. ಜಲ್ವಂತ ಸಮಸ್ಯೆ ಹಾಗೂ ಸಾಮಾಜಿಕ ತಲ್ಲಣಗಳ ಬಗ್ಗೆ ಚರ್ಚೆ, ಸಂವಾದ, ಗೋಷ್ಠಿಗಳು ಆಯೋಜಿಸಲಾಗುತ್ತದೆ ಎಂದರು.
ಸನ್ಮಾನ ಸ್ವೀಕರಿಸಿದ ವಿನೋದ ಪಾಟೀಲ ಹಾಗೂ ರಾಘವೇಂದ್ರ ಕಲ್ಯಾಣಕರ್ ಅವರು ಮಾತನಾಡಿ, ಇಂಥ ಸಾಹಿತ್ಯ ಸೇವೆಯ ಬಹು ದೊಡ್ಡ ಜವಾಬ್ದಾರಿ ವಹಿಸಿದ್ದು ತುಂಬಾ ಖುಷಿ ತಂದಿದೆ. ಎಲ್ಲರ ಜೊತೆಗೂಡಿ ಸಮ್ಮೇಳನದ ಯಶಸ್ವಿಗೆ ಶ್ರಮಿಸೋಣ. ಜಿಲ್ಲೆಯಲ್ಲಿ ಇದೊಂದು ಅಪರೂಪದ ಸಮ್ಮೇಳನ ನಡೆಸಲು ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಗೌರವ ಕಾರ್ಯದರ್ಶಿಗಳಾದ ಧರ್ಮಣ್ಣ ಧನ್ನಿ, ಶಿವರಾಜ ಅಂಡಗಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂಧಿ, ಕನ್ನಡ ಸಾಹಿತ್ಯ ಪರಿಷತ್ತು ಕಲಬುರಗಿ ತಾಲೂಕ ಕ. ಸಾ. ಪ.ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ವಿಶಾಲಕ್ಷಿ ಮಾಯಣ್ಣವರ. ವಿಶ್ವನಾಥ್ ಸಿ ಯನಗುಂಟಿ. ಸಹ ಕಾರ್ಯದರ್ಶಿ ಪ್ರಭವ ಪಟ್ಟಣಕರ. ಮಹಿಳಾ ಪ್ರತಿನಿಧಿ ಭಾಗ್ಯಶ್ರೀ ಮರಗೋಳ. ಸುನಿತಾ ಮಾಳಗಿ. ಪದಾಧಿಕಾರಿಗಳಾದ ಮಂಜುನಾಥ ಕಂತೆಗೋಳ. ಮಲ್ಲಿಕಾರ್ಜುನ ಇಬ್ರಾಹಿಂಪುರ. ವಿಜಯಕುಮಾರ ಹಾಬನೂರ. ರೇವಯ್ಯ ಸ್ವಾಮಿ. ಇತರರು ಇದ್ದರು.