ಪಟ್ಟಭದ್ರರಿಂದ ವಚನ ತಿರುಚುವ ಪ್ರಯತ್ನ: ಮೀನಾಕ್ಷಿ ಬಾಳಿ ಕಿಡಿ

0
76

ಕಲಬುರಗಿ: ೧೨ನೇ ಶತಮಾನದ ಶರಣರ ವಚನಗಳಲ್ಲಿ ಬಂಡಾಯದ ಕಿಡಿ ಹಾಗೂ ವೇದಾಗಮಗಳನ್ನು ತಿರಸ್ಕರಿಸಿದ್ದ ಆರ್ ಎಸ್ ಎಸ್ನವರಿಗೆ ಈಗ ಒಮ್ಮಿದೊಮ್ಮೆ ವಚನ ಹಾಗೂ ಅವರ ದರ್ಶನದ ಮೇಲೆ ಇಷ್ಟೊಂದು ಪ್ರೀತಿ, ಭಕ್ತಿ ಹುಟ್ಟಲು ಏನು‌ ಕಾರಣ ಎಂದು ಪ್ರಗತಿಪರ ಚಿಂತಕಿ ಮೀನಾಕ್ಷಿ ಬಾಳಿ ಕಿಡಿ ಕಾರಿದರು.

ಪ್ರಸ್ತುತ ಶರಣರ ವಚನಗಳನ್ನು ತಿರುಚಿ ಬರೆದು ಅವುಗಳನ್ನು ಸರ್ವನಾಶ ಮಾಡುವ ಹುನ್ನಾರ ನಡೆಸಿದ್ದು, ಅದು ಎಂದಿಗೂ ಕೈಗೂಡುವುದಿಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

Contact Your\'s Advertisement; 9902492681

`ವಚನ ದರ್ಶನ’ ಪುಸ್ತಕದ ಮುಖಪುಟದಲ್ಲಿ ಮುದ್ರಿಸಿರುವ ಭಾವಚಿತ್ರ, ರುದ್ರಾಕ್ಷಿಯನ್ನು ಕೂಡ ವೈದೀಕಿಕರಣಗೊಳಿಸಿದ್ದಾರೆ. ಕೆಲವು ಪ್ರತಿಗಳಲ್ಲಿ ಇದ್ದ ಅಯೋಧ್ಯ ಪ್ರಕಾಶನದ ಲೋಗೋ ಬದಲಾವಣೆ ಮಾಡಲಾಗಿದೆ. ಪ್ರಸ್ತುತ ವಚನಗಳ ಬಗ್ಗೆ ವಿಶ್ವದೆಲ್ಲೆಡೆ ವ್ಯಾಪಕ ಪ್ರಚಾರ ನಡೆಯುತ್ತಿದೆ. ಆದ್ದರಿಂದ ಭೀತಿಗೆ ಒಳಗಾಗಿರುವ ಪಟ್ಟಭದ್ರರು ವಚನವನ್ನು ತಿರುಚುವ ಪ್ರಯತ್ನ, ವಚನಗಳ ವೈಚಾರಿಕತೆಯನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.

ಚಿಂತಕ ಆರ್.ಕೆ.ಹುಡಗಿ ಮಾತನಾಡಿ, ೧೨ನೇ ಶತಮಾನದಲ್ಲಿ ವಚನಗಳನ್ನು ಸುಟ್ಟ ಶನಿ ಸಂತಾನಗಳೇ ಇಂದು ವಚನ ದರ್ಶನ ಎಂದು ಹೇಳುತ್ತಿದ್ದಾರೆ. ಅವರ ಸುಳ್ಳುಗಳ ಬಗ್ಗೆ, ವಚನಗಳ ಬಗ್ಗೆ ಚರ್ಚಿಸಲು ನಾವು ಸದಾ ಸಿದ್ಧವಾಗಿದ್ದೇವೆ. ತಿರುಚಿ ಬರೆದರೆ ಸುಮ್ಮನೆ ಕೂಡಲು ಆಗುವುದಿಲ್ಲ. ಕೆಲವು ಸ್ವಾಮೀಜಿಗಳ ಬುದ್ದಿಗೇಡಿತನ ಖಂಡನೀಯ ಎಂದರು.

ತುಮಕೂರು ಸಿದ್ದಗಂಗಾ ಮಠದ ಪೂಜ್ಯಶ್ರೀ ಲಿಂ. ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡುವುದಕ್ಕೆ ಆಗ್ರಹಿಸಲ್ಲ. ದೇವಸ್ಥಾನಗಳಲ್ಲಿ ಬ್ರಾಹ್ಮಣೇತರರನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲ. ಶರಣರ, ವಚನಗಳ ಆಶಯವನ್ನು ಎಂದಿಗೂ ಪಾಲಿಸದವರು ವಚನಗಳ ಬಗ್ಗೆ ಮಾತನಾಡುವ ನೈತಿಕತೆ ಹೊಂದಿಲ್ಲ ಎಂದು ಹೋರಾಟಗಾರ ಸುನಿಲ ಮಾನ್ಪಡೆ, ರವೀಂದ್ರ ಶಾಬಾದಿ ತಿಳಿಸಿದರು.

ಆರ್.ಜಿ.ಶೆಟಗಾರ, ಪ್ರಭುಲಿಂಗ ಮಹಾಗಾಂವಕರ್, ರವೀಂದ್ರ ಶಾಬಾದಿ, ಆರ್.ಕೆ.ಹುಡಗಿ, ರವಿ ಸಜ್ಜನ್, ಹಣಮಂತರಾಯ ಕುಸನೂರ, ಲವಿತ್ರ ವಸ್ತ್ರದ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here