ಶಹಾಬಾದ: ತಾಲೂಕಿನ ಭಂಕೂರ ಗ್ರಾಮದ ಶಾಂತಹನಗರದ ಬಸವ ಸಮಿತಿಯಲ್ಲಿ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳ ಪರ್ಯಂತ ಬಸವ ತತ್ವ ದರ್ಶನ ಪ್ರವಚನ ಕಾರ್ಯಕ್ರಮ ನಡೆಯಲಿದ್ದು, ಅಗಸ್ಟ 5ರಂದು ಸಾಯಂಕಾಲ 6:30 ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ.
ಹತ್ತರಗಾ.ಎಸ್ ಗ್ರಾಮದ ಶ್ರೀ ಗೋಣಿರುದ್ರೇಶ್ವರ ಮಠದ ಪೂಜ್ಯರಾದ ಶ್ರೀ ಗೋಣಿರುದ್ರ ಮಹಾಸ್ವಾಮಿಗಳು ಸಮ್ಮುಖ ವಹಿಸುವರು.
ಮುಖ್ಯ ಅತಿಥಿಗಳಾಗಿ ಹಳೆಶಹಾಬಾದನ ಬಸವಪರ ಚಿಂತಕರಾ ಮಹಾಂತಪ್ಪ ಬಸವಪಟ್ಟಣ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈರಣ್ಣ ಕೆಂಭಾವಿ,ಭಂಕೂರ ಗ್ರಾಮದ ಗಣ್ಯರಾದ ಕೃಷಿಕರಾದ ಶರಣಗೌಡ ಮಾಲಿಪಾಟೀಲ, ಶಹಾಬಾದ ನಗರದ ವ್ಯಾಪಾರಸ್ಥರಾದ ಶ್ರೀಶೈಲಪ್ಪ ಅವಂಟಿ ಆಗಮಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನುಬಸವ ಸಮಿತಿ ಅಧ್ಯಕ್ಷ ನೀಲಕಂಠ ಮಾದುಗೋಳಕರ್ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.