ಎಸ್‍ಸಿ ಒಳಮೀಸಲಿಗೆ ಸುಪ್ರೀಂ ಕೋರ್ಟ ಅಸ್ತು ಹರ್ಷ

0
31

ಶಹಾಬಾದ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ತೀರ ಹಿಂದುಳಿದ ಉಪವರ್ಗಗಳಿಗೆ ಒಳಮೀಸಲು ಕಲ್ಪಿಸಲು ಅಧಿಕಾರ ಆಯಾ ರಾಜ್ಯಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ಐತಿಹಾಸಿಕ ತೀರ್ಪು ನೀಡಿರುವುದಕ್ಕೆ ಮಾದಿಗ ಸಮಾಜದ ಮುಖಂಡ ಮನೋಹರ್ ಮೇತ್ರೆ ಹರ್ಷ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಒಳ ಮೀಸಲಾತಿ ವರ್ಗೀಕರಣಕ್ಕಾಗಿ ನಡೆದ ಹೋರಾಟ ಹಾಗೂ ತ್ಯಾಗ ಬಲಿದಾನಕ್ಕೆ ಸುಪ್ರೀಂ ಕೋರ್ಟ್ ತೀರ್ಪಿನಿಂದ ಜಯ ಸಿಕ್ಕಂತಾಗಿದೆ.ತಲೆತಲೆಮಾರಿನಿಂದ ತುಳಿತಕ್ಕೊಳಗಾಗಿ ಮೀಸಲಾತಿಯ ಸರ್ಕಾರದ ಸರಿಯಾದ ಪ್ರಯೋಜನ ಪಡೆಯಲಾಗದೆ ನೋವು ಅನುಭವಿಸುತ್ತಿದ್ದ ಪರಿಶಿಷ್ಟ ಜಾತಿ/ಪಂಗಡದ ಜನಾಂಗ ಒಳ ಮೀಸಲಾತಿಗಾಗಿ ನಡೆದ ಸುದೀರ್ಘ ಹೋರಾಟದಲ್ಲಿ ಹಲವರ ತ್ಯಾಗ ಬಲಿದಾನದ ಫಲವಾಗಿ ಸುಪ್ರೀಂ ಕೋರ್ಟ್ ಸಿಜೆಐ ಚಂದ್ರಚೂಡ್ ನೇತೃತ್ವದ 7 ಸದಸ್ಯರ ಪೀಠವು ಒಳ ಮೀಸಲಾತಿ ನೀಡುವ ಪ್ರಸ್ತಾವವನ್ನು ಎತ್ತಿ ಹಿಡಿದು, ಒಳ ಮೀಸಲಾತಿ ಸಂವಿಧಾನ ಬಾಹಿರ ಕ್ರಮವಲ್ಲ, ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎನ್ನುವದು ಸಂವಿಧಾನದ ಮೂಲ ಮಂತ್ರ ಎಂದು ಐತಿಹಾಸಿಕ ತೀರ್ಪು ನೀಡುವ ಮೂಲಕ ನ್ಯಾಯ ಒದಗಿಸಿದೆ ಕೂಡಲೇ ಕರ್ನಾಟಕ ಸರಕಾರ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಈ ಮೀಸಲಾತಿ ಕ್ರಮವನ್ನು ತ್ವರಿತ ಗತಿಯಲ್ಲಿ ಸಾಮಾಜಿಕ ಪರಿಕಲ್ಪನೆಯನ್ನು ಹಾಗೂ ಅಹಿಂದ ಸಮುದಾಯದ ಮುಖ್ಯಮಂತ್ರಿ ಇರುವದರಿಂದ ಕೂಡಲೇ ಜಾರಿಗೆ ತರುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here