ಕಲಬುರಗಿ: SDPI ಪಕ್ಷದ ನಾಯಕರ ಸಭೆ ಯಶಸ್ವಿ

0
132

ಕಲಬುರಗಿ: ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನಾಯಕರ ನೇತೃತ್ವದಲ್ಲಿ ರವಿವಾರ ಜಿಲ್ಲಾ ಮಟ್ಟದ ನಾಯಕರ ಸಭೆ ಜರುಗಿತು. ಸಭೆಯಲ್ಲಿ ಜಿಲ್ಲೆಯ ಪ್ರಮುಖ ವಿಷಯಗಳನ್ನು ಚರ್ಚಿಸುವ ಮೂಲಕ ನಾಯಕರಿಗೆ ತರಬೇತಿ ನೀಡಲಾಯಿತು.

ಈ ವೇಳೆಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಸೈಯದಾ ಸಾದಿಯಾ ಮಾತನಾಡಿದ ಅವರು ನಾವು ನಿಜವಾದ ರಾಜಕೀಯ ಸಬಲೀಕರಣ ಸಾಧಿಸಬೇಕಾದರೆ, ತ್ಯಾಗಕ್ಕೆ ಸಿದ್ಧರಾಗಿರಬೇಕು. ನಿಷ್ಠೆ ಮತ್ತು ವೈಯಕ್ತಿಕ ತ್ಯಾಗವಿಲ್ಲದೆ ಯಶಸ್ಸು ಸಿಗುವುದಿಲ್ಲ ಎಂದು ಹೇಳಿ ರಾಜಕೀಯ ಸಬಲೀಕರಣದ ಮಹತ್ವವನ್ನು ತಿಳಿಸಿದರು.

Contact Your\'s Advertisement; 9902492681

ಹಸಿವು ಮತ್ತು ಭಯ ಮುಕ್ತ ವ್ಯವಸ್ಥೆ ನಿರ್ಮಾಣಕ್ಕಾಗಿ ನಮ್ಮ ಹೋರಾಟವಾಗಿದೆ. ದೇಶದ ಉತ್ತಮ ಭವಿಷ್ಯ ನಿರ್ಮಿಸಲು ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಸಮರ್ಪಿಸಬೇಕೆಂದು ಪಕ್ಷದ ಜಿಲ್ಲೆ ನಾಯಕ ಮೊಹಮ್ಮದ್ ಮೋಹ್ಸಿನ್ ಕರೆ ನೀಡಿದರು.

ವಕ್ಫ್ ತಿದ್ದುಪಡಿ ಕಾಯ್ದೆ 2024 ಅನ್ನು ತಿರಸ್ಕರಿಸಲು SDPI ವಾರ್ಡ್ ಮಟ್ಟದಲ್ಲಿ ಇಮೇಲ್ ಅಭಿಯಾನ ಪ್ರಾರಂಭಿಸಿದೆ ಎಂದು ತಿಳಿಸಿದ ಜಿಲ್ಲೆ ಪ್ರಧಾನ ಕಾರ್ಯದರ್ಶಿ ಸೈಯದ್ ಅಲೀಮ್ ಇಲಾಹಿ ಸಮುದಾಯದ ಹಿತಾಸಕ್ತಿಗಳನ್ನು ರಕ್ಷಿಸುವ ಮತ್ತು ಅನ್ಯಾಯದ ವಿರುದ್ಧ ಹೋರಾಡುವುದೇ ಪಕ್ಷದ ಬದ್ಧತೆ ಅಗಿದೆ ಎಂದು ತಿಳಿಸಿದರು.

ಎಲ್ಲಾ SDPI ನಾಯಕರಿಗೆ ತಮ್ಮ ವಾರ್ಡ್ ಮತ್ತು ನೆರೆಹೊರೆಯಗಳಲ್ಲಿ ಒಟ್ಟಾಗಿ ಕೆಲಸ ಮಾಡುವಂತೆ ಪಕ್ಷದ ಕಲಬುರಗಿ ಜಿಲ್ಲಾ ಅಧ್ಯಕ್ಷ ಸೈಯದ್ ದಸ್ತಗೀರ್ ಕರೆ ನೀಡಿದರು.

ಈ ಸಭೆಯಲ್ಲಿ ನಾಯಕರಾದ ಡಾ. ರಿಜ್ವಾನ್ (SDPI SWC ಸದಸ್ಯ), ಮಕ್ಬೂಲ್ ಅಹ್ಮದ್ (ಜಿಲ್ಲಾ ಉಪಾಧ್ಯಕ್ಷ), ಇಬ್ರಾಹೀಂ ಪಟೇಲ್ (ಜಿಲ್ಲಾ ಸಂಘಟನಾ ಕಾರ್ಯದರ್ಶಿ) ಮತ್ತಿತರರು ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here