ಸತ್ಪುರುಷರ ಚರಿತ್ರೆಯಿಂದ ಮನದ ಮೈಲಿಗೆ ದೂರು

0
42

ಕಲಬುರಗಿ: ಶ್ರಾವಣ ಮಾಸದಲ್ಲಿ ಸತ್ಪುರುಷರ ಚರಿತ್ರೆ ಆಲಿಸುವುದರಿಂದ ಮನದ ಮೈಲಿಗೆ ದೂರವಾಗುತ್ತದೆ ಎಂದು ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ.ಶಿವರಾಜ ಶಾಸ್ತ್ರಿ ಹೇರೂರ್‌ ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದಲ್ಲಿ 30 ದಿನಗಳ ಸಾಂಸ್ಕೃತಿಕ ಶಿವಾನುಭವ ಉಪನ್ಯಾಸ ಮಾಲಿಕೆಯಲ್ಲಿ ಸೋಮವಾರ ಈ ವಷ೯ ಉಪನ್ಯಾಸಗಳ ಸಂಯೋಜನೆ ಎಂಬ ವಿಷಯ ಕುರಿತು ಮಾತನಾಡಿದರು.

Contact Your\'s Advertisement; 9902492681

ಅಧ್ಯಾತ್ಮೀಕ ಸಾಧನೆಗಳು, ಸಾಮಾಜಿಕ ಸಾಧನೆಗಳು, ಆತಥಿಕ ಸಾಧನೆಗಳು, ಸಾಹಿತ್ಯದ ಸಾಧನೆಗಳು, ಶೈಕ್ಷಣಿಕ ಸಾಧನೆಗಳು ಮತ್ತು ಸಾಂಶ್ಕೃತಿಕ ಸಾಧನೆಗಳು ಎಂಬ ವಿಷಯಗಳ ಉಪನ್ಯಾಸಗಳು ಜರುಗಲಿವೆ. ಪೂಜ್ಯ ಡಾ.ದಾಕ್ಷಾಯಣಿ ಆವ್ವಾ ಅವರು ಈ ಎಲ್ಲ ಕಾಯ೯ಕ್ರಮಗಳ ಸಂಯೋಜನೆಗೊಳಿಸಿದ್ದಾರೆ.

ಕಲ್ಯಾಣ ಕನಾ೯ಟಕದ ಕಲ್ಯಾಣ ಪ್ರಕ್ರಿಯೆಗೆ ಶರಣ ಸಂಸ್ಥಾನವೇ ಕಾರಣವಾಗಿದೆ. ಅನೇಕ ವಷ೯ಗಳಿಂದ ಪುರಾಣ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಕಾಯ೯ಕ್ರಮಗಳು ಸಂಸ್ಥಾನದಿಂದ ನಡೆಯುತ್ತಿವೆ. ಈ ಎಲ್ಲ ಕಾಯ೯ಕ್ರಮಗಳು ಜನರ ಮೇಲೆ ಬಹಳಷ್ಟು ಪರಿಣಾಮ ಬೀರಿವೆ. ಶರಣಬಸವೇಶ್ವರರು ದೇವರಾಗಿ ಭಕ್ತರ ಕಷ್ಟಗಳನ್ನು ದೂರ ಮಾಡುತ್ತಾ ಬಂದಿದ್ದಾರೆ. ಶ್ರಾವಣ ಮಾಸದಲ್ಲಿ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ದಶನಕ್ಕೆ ಬರುತ್ತಾರೆ ಎಂದರು.

ಗೋದುತಾಯಿ ದೊಡ್ಡಪ್ಪ ಬಿ.ಈಡ್ ಕಾಲೇಜಿನ ಪ್ರಾಚಾರ್ಯೆ ಡಾ.ಕಲ್ಪನಾ ಭೀಮಳ್ಳಿ ಹಾಗೂ ಉಪ ಪ್ರಾಚಾರ್ಯೆ ಶ್ರೀಮತಿ ಸುಂದ್ರಾಬಾಯಿ ನಾಗಶೆಟ್ಟಿ ವೇದಿಕೆ ಮೇಲಿದ್ದರು. ಮಹಾವಿದ್ಯಾಲಯದ ಎಲ್ಲ ಪ್ರಾಧ್ಯಾಪಕರು, ಸಾವಿರಾರು ಭಕ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here