ಕಲಬುರಗಿ: ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಎಸ್ ನಿಜಲಿಂಗಪ್ಪ ದಂತ ಮಹಾವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ. ಬಾಯಿ ನೈರ್ಮಲ್ಯ ದಿನಾಚರಣೆ ಅಂಗವಾಗಿಕಲ್ಬುರ್ಗಿ ಜಿಲ್ಲೆಯ ನಗರ ಆಶಾ ಕಾರ್ಯಕರ್ತರಿಗೆ ಬಾಯಿ ಅರೋಗ್ಯ ಅರಿವು ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಸಸಿಗೆ ನೀರಿರೆಯೋ ಮೂಲಕ ಜಿಲ್ಲಾ ಅರ್ ಸಿ ಹೆಚ್ ಅಧಿಕಾರಿಗಳು ಡಾ. ಶರಣಬಸಪ್ಪ ಕ್ಯಾತನಾಳ ಚಾಲನೆ ನೀಡಿ ಮಾತನಾಡುತ್ತಾ ಅವರು ಪ್ರತಿಯೊಬ್ಬರೂ ಆರೋಗ್ಯವಾಗಿ ಇರಬೇಕಾದರೆ ನಮ್ಮ ವೈಯಕ್ತಿಕ ಸ್ವಚ್ಛತೆ ಜೊತೆಗೆ ಬಾಯಿ ರಕ್ಷಣೆ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ದಿನ ನಿತ್ಯ ಕೆಲಸದ ಜೊತೆಗೆ ನಮ್ಮ ಆಶಾ ಕಾರ್ಯಕರ್ತರು ಸ್ವಯಂ ರಕ್ಷಣೆ, ದಂತ ರಕ್ಷಣೆ , ಬಾಯಿ ರೋಗ ಬಾಯಿ ಕ್ಯಾನ್ಸರ್ , ಬರದಂತ್ತೆ ಸ್ವಚ್ಚತೆ ಕಾಪಾಡಿಕೊಂಡರೆ ಬಹಳ ಒಳ್ಳೇದು. ಶಿಬಿರದ ಉಪಯೋಗವನ್ನು ಸದ್ಧಬಳಕ್ಕೆ ಮಾಡಿಕೊಳ್ಳಬೇಕೆಂದು ಹೇಳಿದರು.
ವೇದಿಕೆ ಮೇಲೆ ಡಾ ಅರವಿಂದ್ ಮೊಲ್ದಿ ಪ್ರಾಂಶುಪಾಲರು ಅಧ್ಯಕ್ಷತೆ ವಹಿಸಿದರು, ಮುಖ್ಯ ಅತಿಥಿಗಳಾಗಿ ಡಾ. ಸಂಧ್ಯಾ ಕಾನೇಕರ್,ಡಾ ಸ್ವಾರೂಪ ಬೆಳಗಲಿ , ಜಿಲ್ಲಾ ಆಶಾ ಸಂಯೋಜಕರು ಬಸಮ್ಮ ಭಾಗವಹಿಸಿದರು.
ಪೇರಿಯದೊಂಟಿಕ್ಸ್ ಡಿಪಾರ್ಟ್ಮೆಂಟ್ ಹೆಚ್ ಓ ಡಿ ಗಳಾದ ಡಾ ಜಯಶ್ರೀ ಮುದ್ದಾ, ಡಾ ವೀಣಾ ಪಾಟೀಲ್, ಡಾ ಬಿಂದು ಪಾಟೀಲ್, ಡಾ ಲಕ್ಷ್ಮಿ, ಹಾಗೂ ದಂತ ಮಹಾವಿದ್ಯಾಲಯದ ಪ್ರಚಾರ್ಯಕರು ಇದ್ದರು.
60-70 ಆಶಾ ಕಾರ್ಯಕರ್ತೆಯರ ಬಾಯಿ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಿದರು.