ಜೈ ಕನ್ನಡಿಗರ ರಕ್ಷಣಾ ವೇದಿಕೆಯಿಂದ ಪಾಲಿಕೆ ಮೇಯರ್‍ಗೆ ಮನವಿ

0
17

ಕಲಬುರಗಿ: ನಗರದ ಸರ್ವೆ ನಂ:75 ಮತ್ತು 76 ರ. ಕೃಷ್ಣಾ ಎಸ್.ಎಂ ಆಶ್ರಯ ಕಾಲೋನಿಯ 200 ಮನೆಯ ನಿವಾಸಿಗಳಿಗೆ ಅವರ ಹೆಸರಿಗೆ ಮಂಜೂರಾಗಿರುವ ಸುಮಾರು 13 ವರ್ಷಗಳಿಂದ ಹಕ್ಕು ಪತ್ರ ವಿತರಣೆ ಮಾಡದೇ ಅದೇ ನಂಬರಿನ ಮನೆಗಳ ನಂಬರನ್ನು ಶ್ರೀಮಂತರಿಗೆ ವಿತರಣೆ ಮಾಡಿರುವುದನ್ನು ರದ್ದುಗೊಳಿಸಿ ಇದಕ್ಕೆ ನಿಜವಾದ ಅಲ್ಲಿರುವಂತಹ ಫಲಾನುಭವಿಗಳಿಗೆ ಮಂಜೂರು ಮಾಡಲು ಒತ್ತಾಯಿಸಿ ಜೈ ಕನ್ನಡಿಗರ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಸಚೀನ್ ಎಸ್. ಫರತಾಬಾದ ನೇತೃತ್ವದಲ್ಲಿ ಮೇಯರ್ ಯಲ್ಲಪ್ಪ ನಾಯ್ಕೋಡಿ ಅವರಿಗೆ ಮನವಿ ಸಲ್ಲಿಸಿದರು.

13 ಸರಿಯಾದ ರಸ್ತೆಗಳು, ಮತ್ತು ಬೀದಿ ದೀಪಗಳು ಹಾಗೂ ಕುಡಿಯುವ ನೀರಿನ ಸಮಸ್ಯೆ ಹೀಗೆ ಹತ್ತು ಹಲವಾರು ಸಮಸ್ಯೆಗಳಿಂದ ಸುಮಾರು 13 ವರ್ಷಗಳಿಂದ ಇಲ್ಲಿಯೇ ವಾಸವಾಗಿರುತ್ತಾರೆ. ಆದರೆ ಸದರಿ ತಮ್ಮ ಮಹಾನಗರ ಪಾಲಿಕೆ ಕಲಬುರಗಿಯವರು ಈ ನಿರ್ಗತಿಕರಿಗೆ ಇನ್ನುವರೆಗೆ ಮನೆಯ ಹಕ್ಕು ಪತ್ರಗಳನ್ನು ನೀಡದೇ. ಅವರನ್ನು ಕತ್ತಲಲ್ಲಿಟ್ಟು ಈಗ ಹಣದ ದುರಾಸೆಯಿಂದ ಇವರಿಗೆ ಹೆಸರಿಗೆ ಹಕ್ಕು ಪತ್ರಗಳನ್ನು ನೀಡದೇ ಇದಕ್ಕೆ ಸೂತ್ರ ಸಂಬಂಧವಿಲ್ಲದ ಶ್ರೀಮಂತರಿಗೆ ಇದೇ ಮನೆಗಳ ಹಕ್ಕು ಪತ್ರಗಳನ್ನು ನೀಡಿ. ಅವರಿಗೆ ದ್ರೋಹ ಬಗೆದು ಮತ್ತಷ್ಟು ಬಡತನದ ಕೂಪದಲ್ಲಿ ಉದ್ದೇಶಪೂರ್ವಕವಾಗಿ ನೂಕಿರುವುದು ನಾಗರೀಕ ಸಮಾಜ ತೆಲೆತಗ್ಗಿಸುವಂತಹ ವಿಷಯವಾಗಿದೆ ಎಂದು ಆರೋಪಿಸಿದ್ದಾರೆ.

Contact Your\'s Advertisement; 9902492681

ನಿರ್ಗತಿಕರಿಗೆ ನಿರ್ಮಾಣ ಮಾಡಿರುವ ಆಶ್ರಯ ಮನೆಗಳನ್ನು ನಿಜವಾದ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಬೇಕು ಮತ್ತು ಈ ಹಿಂದೆ ಶ್ರೀಮಂತರಿಗೆ ನೀಡಿದ ಆಶ್ರಯ ಹಕ್ಕು ಪತ್ರಗಳನ್ನು ರದ್ದುಗೊಳಿಸಿ, ಸದರಿ ನಿಜವಾದ ಫಲಾನುಭವಳಿಗೆ ಹಕ್ಕು ಪತ್ರ ವಿತರಣೆ ಮಾಡಿ. ಮೂಲಭೂತ ಸಕೌರ್ಯಗಳಾದ ಒಳ್ಳೆಯ ಗುಣಮಟ್ಟದ ರಸ್ತೆಗಳು ಹಾಗೂ ಬೀದಿ ದೀಪಗಳು ಮತ್ತು ಕುಡಿಯುವ ನೀರು, ಮತ್ತು ಆಸ್ಪತ್ರೆ ಹೀಗೆ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ಆಶ್ರಯ ಫಲಾನುಭವಿಗಳ ಜಂಟಿ ಜಿಲ್ಲಾಧಿಕಾರಿ ಕಛೇರಿಯ ಎದುರುಗಡೆ ಪ್ರತಿಭಟನೆ ಮಾಡಲಾಗುವುದೆಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸುರೇಶ ಹನಗುಡಿ, ಅಂಬು ಮಸ್ಕಿ, ಅಕ್ಷಯ, ನವೀನ, ಸಾಯಿಕುಮಾರ ಸಿಂಧೆ, ಪ್ರವೀಣ ಸಿಂಧೆ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here