ಗಾಣಿಗ ಸಮಾಜದ ಯುವ ಘಟಕದ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ: ಪೂರ್ವಭಾವಿ ಸಭೆ

0
150

ಜೇವರ್ಗಿ: ತಾಲೂಕಿನ ಗಾಣಿಗ ಸಮಾಜ ಯುವ ಘಟಕದ ವತಿಯಿಂದ ತಾಲೂಕ ಮಟ್ಟದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದ ಪೂರ್ವಭಾವಿ ಸಭೆ ಅ. 6ರಂದು ರವಿವಾರ ಸಜ್ಜನ್ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಅಧ್ಯಕ್ಷರಾದ ಸುರೇಶ ಪಾಟೀಲ್ ನೇದಲಗಿ ತಿಳಿಸಿದ್ದಾರೆ.

ಕಾರ್ಯಕ್ರಮದ ರೂಪರೇಶ ಹಾಗೂ ಅದ್ದೂರಿ ಸಮಾರಂಭದ ಕುರಿತು ಚರ್ಚಿಸಿ ಉನ್ನತ ಮಟ್ಟದ ಕಾರ್ಯಕ್ರಮ ಆಯೋಜನೆ ಮಾಡುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಸಮಾಜ ಬಂಧುಗಳು ಆಗಮಿಸಿ ತಮ್ಮ ಸಲಹೆ ಸೂಚನೆ ತಿಳಿಸುವಂತೆ ಅವರು ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here