ಕಲಬುರಗಿ: ಜಿಲ್ಲಾ ಪಂಚಾಯಿತ್ ಸಭೆಯಲ್ಲಿ ಕರ್ನಾಟಕ ಅಲ್ಪಸಂಖ್ಯಾತ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆ ವಿರೋಧಿಸಿ ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ವೇದಿಕೆಯ ಮುಖಂಡ ಸಾಬಣ್ಣ ಎಸ್. ಬರಾಠಿ ಮಾತನಾಡಿ ಆಧಿಕಾರಿ ಮಹೇಬೂಬ್ ಪಾಶಾ ಕರಟಗಿ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಯಾವುದೇ ರೀತಿಯ ಬ್ರಷ್ಟಾಚಾರ ಮಾಡಿಲ್ಲ ಬದಲಿಗೆ ಅಭಿವೃದ್ಧಿ ಕೆಲಸವನ್ನು ಮಾಡಿ ದಕ್ಷತೆ ಮೆರೆದಿದ್ದಾರೆ, ಇಂತಹ ಅಧಿಕಾರಿ ವಿರುದ್ಧ ಆಧಾರ ರಹಿತ ಆರೋಪ ಮಾಡುವ ಮೂಲಕ ದ್ವೇಷ ನಡೆಸುತಿದ್ದಾರೆಂದು ಆರೋಪಿಸಿದರು.
ಈ ಹಿಂದೆ ಜಿಲ್ಲೆಯಲ್ಲಿ ಆರು ವಸತಿ ನಿಲಯಗಳು ಇದ್ದು, ಕರಟಗಿ ಅವರು 45 ವಸತಿ ನಿಲಯ ಹಾಗೂ 12 ಮೂರಾಜಿ ದೇಸಾಯಿ ಹಾಗೂ ನವೋದಯ ಶಾಲೆ ಹಾಗೂ ಮೌಲನಾ ಆಜಾದ್ ಶಾಲೆಗಳು ಮಂಜುರು ಮಾಡಿ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದು ಮಾಡಿದ್ದಾರೆ.
ಮೆಹಬೂಬ್ ಪಾಶಾ ಅಭಿವೃದ್ಧಿಯ ದೃಷ್ಟಿಕೋನ ಹೊಂದಿರುವ ಅಧಿಕಾರಿ, ಜಿಲ್ಲಾ ಪಂಚಾಯಿತಿ ಸಭೆಯಲ್ಲಿ, ಕೈ ಬಿಡಲು ತೀರ್ಮಾನಿಸಿರುವುದು ನೋವಿನ ಸಂಗತಿ, ಕೂಡಲೇ ಕರಟಗಿ ಅವರ ವಿರುದ್ಧ ಮಾಡಿರುವ ದೂರುಗಳನ್ನು ಪರಿಶೀಲಿಸಿ ಕಾನೂನು ರೀತಿಯ ಕ್ರಮ ಕೈಗೊಳಬೇಕು ಹೊರೆತು ಕೈ ಬಿಡಬಾರದೆಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವೇಂಟೇಶ ನವಲಬೋ, ಮಾರುತಿ ಗಂಗಬೋ ಸೇರಿದಂತೆ ಮುಂತಾದವರು ಇದ್ದರು.