ಶಹಾಬಾದ: ಬೀದಿನಾಯಿ- ಸಾಕು ನಾಯಿಗಳ ಹಾವಳಿಯನ್ನು ತಡೆಗಟ್ಟಬೇಕು ಮತ್ತು ನಾಯಿ ಕಡಿತಕ್ಕೆ ಒಳಗಾದವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಬುಧವಾರ ನಗರದ ಎಐಡಿವೈಓ ಸ್ಥಳೀಯ ಸಮಿತಿ ವತಿಯಿಂದ ನಗರಸಭೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಎಐಡಿವೈಓ ಶಹಾಬಾದ ಕಾರ್ಯದರ್ಶಿ ರಮೇಶ ದೇವಕರ್ ಮಾತನಾಡಿ, ನಗರದಲ್ಲಿ ಸಾಕು ನಾಯಿಯ ದಾಳಿಗೆ 8 ವರ್ಷದ ಬಾಲಕಿಯ ಕಣ್ಣಿನ ಭಾಗಕ್ಕೆ ಗಂಬೀರ ಗಾಯವಾಗಿದೆ.ಅವಳನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಅಲ್ಲದೇ ಮತ್ತೆ 5 ಜನರಿಗೆ ಬೀದಿ ನಾಯಿಗಳ ಕಚ್ಚಿ ಗಾಯಗೊಳಿಸಿವೆ. ಅನೇಕ ಬಾರಿ ಬೀದಿ ನಾಯಿಗಳ ಹಾವಳಿ ತಪ್ಪಿಸಬೇಕೆಂದು ಮನವಿ ಮಾಡಿದರೂ ನಗರಸಭೆ ಕ್ರಮಕೈಗೊಂಡಿಲ್ಲ.ಅಲ್ಲದೇ ಬೀದಿ ನಾಯಿಗಳು ರಸ್ತೆಯಲ್ಲಿ ಹಿಂಡು ಹಿಂಡಾಗಿ ಓಡಾಡುತ್ತಿವೆ.ಜನರ ಮೇಲೆ ಎರಗುತ್ತಿವೆ.ಇದರಿಂದ ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ.
ರಾಮಮೋಹಲ್ಲಾ ಬಡಾವಣೆಯ ದೀಪಾಲಿ ತಂದೆ ನಾಗರಾಜ ಎಂಬುವರಿಗೆ ಕಣ್ಣಿಗೆ ನಾಯಿ ಕಚ್ಚಿ ಗಂಭೀರ ಗಾಯಗೊಂಡ ಕಲಬುರಗಿಯ ಆಸ್ಪತ್ರೆಗೆ ದಾಖಲಾಗಿದಾರೆ. ಭಂಕಟ್ಟ ಚಾಳದ ಕುರಾನಿನ ತಂದೆ ಮೋದಿನ್ ಬಾಷಾ, ಚಕ್ಕಿ ವಡ್ಡರಗಲ್ಲಿಯ ಮಲ್ಲಿಕಾರ್ಜುನ ತಂದೆ ಹಣಮಂತ, ಎಂಬ ಮಕ್ಕಳಿಗೆ ಮತ್ತು ಬಾಬೂಮಿಯಾ ವೆಕ್ತಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಕೂಡಲೇ ನಾಯಿಗಳ ವಿರುದ್ಧ ಕ್ರಮಕೈಗೊಳ್ಳಬೇಕು.ಕಡಿತಕ್ಕೆ ಒಳಗದವರಿಗೆ ಸೂಕ್ತ ಪರಿಹಾರ ನೀಡಬೇಕು ಆಗ್ರಹಿಸಿದರು.
ನಂತರ ನಗರಸಭೆಯ ವ್ಯವಸ್ಥಾಪಕ ಶರಣಗೌಡ ಪಾಟೀಲ ಮನವಿ ಸ್ವೀಕರಿಸಿ, ಕೂಡಲೇ ಈ ಬಗ್ಗೆ ಪೌರಾಯುಕ್ತರ ಗಮನಕ್ಕೆ ತಂದು ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟಲಾಗುವುದೆಂದು ತಿಳಿಸಿದರು.
ಈ ದಾಳಿಗೊಳಗಾದ ಮಕ್ಕಳು ಮತ್ತು ಪೆÇೀಷಕರಾದ ಶೇಖಿನಾ, ಮಾನವ, ಆಶಮಿನ್ ಬೇಗಂ, ತಿಮ್ಮಯ ಮಾನೆ, ಶ್ರೀನಿವಾಸ ಮಾನೆ, ದೇವರಾಜ ಮಿರಲಕರ್,ಕಿರಣ. ಈ.ಮಾನೆ ಇದ್ದರು.