ಶಹಾಬಾದನಲ್ಲಿ ಬೀದಿ-ಸಾಕು ನಾಯಿಗಳ ಹಾವಳಿಗೆ ತುತ್ತಾದ ಜನತೆ

0
91

ನಗರಸಭೆಯ ಅಧಿಕಾರಿಗಳ ನಿರ್ಲಕ್ಷ್ಯ : ಬೀದಿನಾಯಿಗಳಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರು ಹರಸಾಹಸ

ಶಹಾಬಾದ: ನಗರದ ನಾನಾ ಕಡೆ ಬೀದಿ ನಾಯಿ ಹಾಗೂ ಸಾಕು ನಾಯಿಗಳ ಹಾವಳಿ ಹೆಚ್ಚಾಗಿದ್ದು,ಜನಸಾಮಾನ್ಯರು ಒಬ್ಬಂಟಿಯಾಗಿ ಓಡಾಡುವುದು ಕಷ್ಟಕರವಾಗಿದೆ.ಇದಕ್ಕೆ ಉದಾಹರಣೆ ಎಂಬಂತೆ ಶಹಾಬಾದನ ವಿವಿಧ ವಾರ್ಡಗಳಲ್ಲಿ ಕಳೆ ಮೂರು ದಿನಗಳಲ್ಲಿ ಹತ್ತಾರು ಜನರ ಮೇಲೆ ನಾಯಿಗಳ ಗುಂಪು ಕೈ ಹಾಗೂ ಕಾಲುಗಳಿಗೆ ಕಚ್ಚಿ ಗಂಭೀರ ಗಾಯಗೊಳಿಸದಂತಹ ಘಟನೆ ನಡೆದಿದೆ.

ನಗರದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಎಲ್ಲೆಂದರಲ್ಲಿ ಓಡಾಡುತ್ತಿರುವ ಬೀದಿನಾಯಿಗಳ ಕಾಟದಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರು ಹರಸಾಹಸ ಪಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರಸಭೆ ಅಧಿಕಾರಿಗಳು ಮಾತ್ರ ಏನೂ ಗೊತ್ತಿಲ್ಲದವರಂತೆ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

Contact Your\'s Advertisement; 9902492681

ನಗರದ ಪ್ರಮುಖ ರಸ್ತೆಗಳಲ್ಲಿ ಬೆಳಿಗ್ಗೆ ಶಾಲೆಗಳು ತೆರೆಯುವ ಹಾಗೂ ಸಂಜೆ ಬಿಡುವ ವೇಳೆಯಲ್ಲಿ ಶಾಲಾ ಮಕ್ಕಳು ಆತಂಕದಿಂದ ಓಡಾಡುವಂತಾಗಿದೆ. ನಗರಸಭೆ ಆರೋಗ್ಯ ನಿರೀಕ್ಷಕರು ಕೇವಲ ನಗರದ ಸ್ವಚ್ಛತೆ ಜತೆಗೆ ನಗರದಲ್ಲಿ ನಿತ್ಯ ಎಗ್ಗಿಲ್ಲದೇ ಓಡಾಡುತ್ತಿರುವ ಬೀಡಾಡಿ ಹಸುಗಳು ಹಾಗೂ ಬೀದಿ ನಾಯಿಗಳ ಹಾವಳಿ ತಡೆಯುವಲ್ಲಿ ವಿಫಲರಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ.

ಹಿಡಿಶಾಪ: ಬೀದಿ ನಾಯಿಗಳ ಹಾವಳಿ ತಪ್ಪಿಸುವಂತೆ ನಗರಸಭೆಗೆ ಸ್ಥಳೀಯರು ಅನೇಕ ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ಸಾರ್ವಜನಿಕರು ನಗರಸಭೆಯ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದಾರೆ. ಪಟ್ಟಣದ ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆ, ಶಾಸ್ತ್ರಿ ವೃತ್ತ, ನೆಹರು ವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ಅನೇಕ ವೃತ್ತಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ.ಬೀದಿ ನಾಯಿಗಳ ಹಾವಳಿ ತಪ್ಪಿಸಲು ಸಂತಾನ ತಡೆ ಚಿಕಿತ್ಸೆ ಮಾಡಬಹುದು. ಆದರೆ, ಈ ಕಾರ್ಯಕ್ಕೆ ನಗರಸಭೆ ಮುಂದಾಗುತ್ತಿಲ್ಲ. ಆದ್ದರಿಂದ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಬೀದಿ ನಾಯಿಗಳ ಉಪಟಳಕ್ಕೆ ಜನ ಕಂಗಾಲಾಗಿದ್ದಾರೆ. ಶಾಲೆಗೆ ಬರುವ ಚಿಕ್ಕ ಮಕ್ಕಳ ಮೇಲೆ ಎರಗಿದರೇ ಹೇಗೆ ಎಂಬ ಆತಂಕ ಪೋಷಕರಲ್ಲಿ ಮನೆ ಮಾಡಿದೆ.ಕೂಡಲೇ ಬೀದಿ ನಾಯಿಗಳನ್ನು ನಿಯಂತ್ರಣ ಮಾಡಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

ನಗರದಲ್ಲಿ ಐದಾರು ಜನರಿಗೆ ಬೀದಿ ಹಾಗೂ ಸಾಕು ನಾಯಿಗಳ ಹಾವಳಿಯಿಂದ ಬಾಲಕಿಯೊಬ್ಬಳು ಗಂಭೀರ ಗಾಯಗೊಂಡಿದ್ದಾಳೆ. ಅಲ್ಲದೇ ಕಣ್ಣಿನ ಭಾಗದಲ್ಲಿ ಕಚ್ಚಿದ್ದರಿಂದ ಮಾಂಸವು ಹೊರಬಂದಿದೆ.ಅಲ್ಲದೇ ಇನ್ನು ಕೆಲವರಿಗೆ ಘಾಸಿಗೊಳಿಸಿವೆ. ಇಷ್ಟಾದರೂ ನಗರಸಭೆಯ ಪೌರಾಯುಕ್ತರು ಗಂಭೀರವಾಗಿ ತೆಗೆದುಕೊಳ್ಳದೇ ಉಡಾಫೆ ಮಾತನಾಡುತ್ತಾರೆ.ಕೂಡಲೇ ಬೀದಿ ನಾಯಿ ಹಾಗೂ ಸಾಕು ನಾಯಿ ಕಚ್ಚಿದ್ದ ಮಾಲೀಕರ ಮೇಲೆ ಕ್ರಮ ಕೈಗೊಳ್ಳದಿದ್ದರೇ ಹೋರಾಟ ಕೈಗೊಳ್ಳಲಾಗುವುದು- ನಿಂಗಣ್ಣ ಹುಳಗೋಳಕರ ಅಧ್ಯಕ್ಷ ಬಿಜೆಪಿ ಮಂಡಲ ಶಹಾಬಾದ.

ಗಲ್ಲಿ ಗಲ್ಲಿಗಳಲ್ಲಿ ತಿರುಗಾಡುತ್ತಿರುವ ಬೀದಿ ನಾಯಿಗಳ ಹಿಂಡು ವಾಹನ ಸವಾರರ ಮೇಲೆ ದಾಳಿ ಮಾಡುತ್ತಿವೆ. ಒಂದೇ ದಿನದಲ್ಲಿ ಐದಾರು ಜನರಿಗೆ ಕಚ್ಚಿವೆ. ಕೆಲ ನಾಯಿಗಳು ಬೈಕ್, ಕಾರುಗಳ ಹಿಂದೆ ಓಡಿ ಬರುತ್ತಿರುವ ಪರಿಣಾಮ ವಾಹನ ಸವಾರರು ಆತಂಕ ಪಡಬೇಕಾಗಿದೆ. ರಸ್ತೆಯಲ್ಲಿ ಚಿಕ್ಕ ಮಕ್ಕಳು, ವಯೋವೃದ್ಧರು ಸಂಚಾರ ಮಾಡಲು ಹಿಂದೇಟು ಹಾಕುವಂತಾಗಿದೆ. ರಾತ್ರಿ ವೇಳೆ ನಿದ್ದೆಗೆಡಿಸುತ್ತಿರುವ ಬಿಡಾಡಿ ನಾಯಿಗಳು ಉಪಟಳ ಹೆಚ್ಚಾಗಿದೆ.ಕೂಡಲೇ ಬೀದಿ ನಾಯಿಗಳ ವಿರುದ್ಧ ಕ್ರಮಕೈಗೊಳ್ಳಿ-ಡಾ.ರಶೀದ್ ಮರ್ಚಂಟ್ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಶಹಾಬಾದ ಹಾಗೂ ಖಾಡಾ ಅಧ್ಯಕ್ಷರು ಕಲಬುರಗಿ.

ರಾಮಮೊಹಲ್ಲಾದ 8 ವರ್ಷದ ಬಾಲಕಿ ದೀಪಾಲಿ ನಾಗರಾಜ ಮನೆಯ ಮುಂದೆ ನಿಂತ ಸಂದರ್ಭದಲ್ಲಿ ಬಬಲು ಮೋಹಿತೆ ಎಂಬುವವರ ಸಾಕು ನಾಯಿ ಬಾಲಕಿಯ ಮೇಲೆ ಎರಗಿ ಕಣ್ಣಿನ ಭಾಗದಲ್ಲಿ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ. ಗಾಯಗೊಂಡಿದನ್ನು ನೋಡಿ ತ್ಷಣವೇ ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಅಲ್ಲದೇ ಭಂಕಟದ ಚಾಳಾ ಪ್ರದೇಶದಲ್ಲಿ ಕುರಾನ್ ಮೋದಿನ್ ಭಾಷಾ, ಚಕ್ಕಿ ವಡ್ಡರ್ ಗಲ್ಲಿಯ ಮಲ್ಲಿಕಾರ್ಜುನ ಹಣಮಂತ ಬಾಲಕರಿಗೆ, ಮಿಲತ್ ನಗರದಲ್ಲಿ ಬಾಲಕನಿಗೆ, ಪೊಲೀಸ್ ವಸತಿ ಗೃಹ ,ದೊಡ್ಡ ಬಜಾರ್‍ನಲ್ಲಿ ಬಾಲಕರು ಕಡಿತಕ್ಕೆ ಒಳಗಾಗಿದ್ದಾರೆ. ಅಲ್ಲದೇ ಬಾಬುಮೀಯಾ ಎಂಬ ವ್ಯಕ್ತಿಯೂ ನಾಯಿಗಳ ಕಡಿತಕ್ಕೆ ಒಳಗಾಗಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here