ಹಸಿದ ಮಕ್ಕಳಿಗೆ ಹಾಲುಣಿಸಿ: ಚಂದ್ರಕಾಂತ ತಳವಾರ.

0
83

ಕಲಬುರಗಿ: ಹಸಿದ ಮಕ್ಕಳ ಹೊಟ್ಟೆಗೆ ಹಾಲುಣಿಸಿ ಅಪೌಷ್ಟಿಕದಿಂದ ಬಳಲುತ್ತಿರುವ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕೆಂದು ಕರ್ನಾಟಕ ರಾಜ್ಯ ಎನ್‌ಪಿಎಸ್ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ಚಂದ್ರಕಾಂತ ತಳವಾರ ಹೇಳಿದರು.

ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘದ ವತಿಯಿಂದ ಆಯೋಜಿಸಿದ ನಗರದ ಸಂತೋಷ ಕಾಲನಿಯ ಕೆ ಎಚ ಬಿ ಗ್ರೀನ್ ಪಾರ್ಕ್ ಬಡಾವಣೆಯ ಬಿ1 ಬ್ಲಾಕ್ ಆವರಣದಲ್ಲಿ ಬಸವ ಪಂಚಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಮಕ್ಕಳು, ವಯೋವೃದ್ಧರು ಅಪೌಷ್ಟಿಕತೆಯಿಂದ ನರಳಾಡುತ್ತಿದ್ದಾರೆ ನಿತ್ಯ ನಿರಂತರವಾಗಿ ಹಾಲು ಹಣ್ಣು ಕೊಡುವ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸಿ ರೋಗ ಮುಕ್ತ ಸಮಾಜ ನಿರ್ಮಿಸಬೇಕೆಂದು ಮಾರ್ಮಿಕವಾಗಿ ನುಡಿದರು.

Contact Your\'s Advertisement; 9902492681

ಸಂಘದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ ಮಾತನಾಡುತ್ತ ಹಬ್ಬಗಳು ಸರ್ವ ಜನರ ಮನಸ್ಸನ್ನು ಒಂದುಗೂಡಿಸಿ ಗಟ್ಟಿಗೊಳಿಸುತ್ತವೆ ಇಲ್ಲಿ ಹಿಂದೂ, ಇಸ್ಲಾಂ, ಕ್ರೈಸ್ತ ಎಲ್ಲಾ ಜನಾಂಗದವರು ಸೇರಿ ಈ ಹಬ್ಬವನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಷಯ. ಎಲ್ಲಾ ಧರ್ಮದ ತತ್ವವು ಒಂದೇ ನಾವೆಲ್ಲರೂ ಒಂದು ರಾಷ್ಟ್ರ ಅಭಿವೃದ್ಧಿಗೆ ಮುಂದು, ಕಾರ್ಯಕ್ರಮದ ಮೌಡ್ಯತೆಯನ್ನು ಮೀರಿ ವೈಜ್ಞಾನಿಕವಾಗಿ ಹಬ್ಬ ಆಚರಿಸುವುದೇ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಘದ ಸಹ ಕಾರ್ಯದರ್ಶಿಯಾದ ಮಲ್ಕಾರಿ ಪೂಜಾರಿ, ಬ್ಲಾಕ್ ನ ಅಧ್ಯಕ್ಷರಾದ ಶಿವಪ್ಪ ಕಟ್ಟಿಮನಿ, ಮಹಾನಂದಾ ಪಾಟೀಲ, ಶೃತಿ ದೂಪದ, ಚಾಯಿಸ್ತಾ ಹುಸೇನ, ಲೋಕೇಶ್ ರೆಡ್ಡಿ, ಹರಿಕೃಷ್ಣ ಬಿರಾದಾರ, ಸಂದೇಶ ಕಟ್ಟಿಮನಿ, ನಿಲೋಫರ, ರೆಹನಾ, ಅಖೀಲ, ರಾಧಿಕಾ ಮಂಜುನಾಥ, ಮಮತಾ, ಅಶ್ವಿನಿ ಹೂಗಾರ, ಗುರುಬಾಯಿ ಹೂಗಾರ, ಲಲಿತಾ ಬಿರಾದಾರ, ಚನ್ನವೀರ ಅಟ್ಟೂರ, ಹೃತಿಕ, ಶ್ರೇಯಸ್, ಅನಿಕೇತ, ವೇದಾಂತ ವೃಂದಾ, ಖುಷಿ, ರಚಿತಾ ಸೇರಿದಂತೆ ಅನೇಕ ಜನ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಬಸವ ಪಂಚಮಿ ಆಚರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here