ಶಹಾಬಾದ: ನಗರದ ವಿವಿಧ ವಾರ್ಡಗಳಲ್ಲಿ ಬೀದಿ ನಾಯಿಗಳ ದಾಳಿಗೆ ಭೋವಿ ಸಮಾಜದ ಬಾಲಕ ಮತ್ತು ಬಾಲಕಿಗೆ ಗಂಬೀರ ಗಾಯಗಳಾಗಿವೆ.ಕೂಡಲೇ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭೋವಿ ಸಮಾಜದ ವತಿಯಿಂದ ನಗರಸಭೆಯ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕಳೆದ ಮೂರು ದಿನಗಳಲ್ಲಿ ಬೀದಿ ನಾಯಿಗಳ ದಾಳಿಯಿಂದ ಜನರು ಭಯಬೀತರಾಗಿದ್ದಾರೆ.ಮನೆಯಿಂದ ಮಕ್ಕಳು ಶಾಲೆಗೆ ಹೋದವರು ಮನೆಗೆ ಬರುವವರೆಗೂ ಪೋಷಕರು ಆತಂಕದಲ್ಲಿದ್ದಾರೆ.
ನಗರದ ವಿವಿಧ ವಾಡಗಳಲ್ಲಿ ನಾಯಿಗಳು ಮಕ್ಕಳಿಗೆ ಅಟ್ಟಾಡಿಸಿ ಕಚ್ಚಿ ಗಾಯಗೊಳಿಸಿವೆ.ಇದರಿಂದ ಬಾಲಕಿ ದೀಪಾಲಿ ನಾಗರಾಜ ,ಮಲ್ಲಿಕಾರ್ಜುನ ಬಾಲಕನಿಗೆ ಗಂಭೀರ ಗಾಯಗಳಾಗಿವೆ.ಅಲ್ಲದೇ ದೀಪಾಲಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಆದರೆ ಸರಿಯಾದ ಚಿಕಿತ್ಸತೆ ಕಂಡು ಬರುತ್ತಿಲ್ಲ.ಆದ್ದರಿದ ಸರಿಯಾದ ಚಿಕಿತ್ಸೆ ನೀಡಲು ಕ್ರಮಕೈಗೊಳ್ಳಬೇಕು.ಅಲ್ಲದೇ ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ಮಾಡಬೇಕು.ಸಾರ್ವಜನಿಕರಿಗೆ ಭಯಮುಕ್ತ ವಾವಾವರಣ ನಿರ್ಮಿಸಿ ಕೊಡಬೇಕೆಂದು ಮನವಿ ಮಾಡಿದರು.
ನಗರಸಭೆಯ ಎಇಇ ಶರಣು ಪೂಜಾರ್ ಮನವಿ ಪತ್ರ ಸ್ವೀಕರಿಸಿದರು.ನಗರಸಭೆಯ ವ್ಯವಸ್ಥಾಪಕ ಶರಣಗೌಡ ಪಾಟೀಲ,ಭೋವಿ ಸಮಾದ ತಾಲೂಕಾಧ್ಯಕ್ಷ ಕಳೋಳ್ಳಿ ಕುಸಾಳೆ, ನಗರಾಧ್ಯಕ್ಷ ರಾಜು ಮೇಸ್ತ್ರಿ, ಪ್ರಧಾನ ಕಾರ್ಯದರ್ಶಿ ಭಗವಾನ ದಂಡಗುಲಕರ್,ರಮೇಶ ಪವಾರ, ಕನಕಪ್ಪ ದಂಡಗುಲಕರ್, ಸಿದ್ರಾಮ ಕುಸಾಳೆ, ಸಂಜಯ್ ವಿಠಕರ್, ಸಿದ್ದು ಚೌಧರಿ ಸೇರಿದಂತೆ ಅನೇಕರು ಇದ್ದರು.