ನಾಯಿ ಕಡಿತಕ್ಕೆ ಒಳಗಾದ ಬಾಲಕಿ ಕುಟುಂಬಕ್ಕೆ ಪರಿಹಾರ ಚೆಕ್ ವಿತರಣೆ

0
19

ಶಹಾಬಾದ: ನಗರದಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು, ಕೂಡಲೇ ನಾಯಿಗಳ ನಿಯಂತ್ರಣ ಮಾಡಬೇಕೆಂದು ಆಗ್ರಹಿಸಿ ಎಸ್‍ಡಿಪಿಐ ಸಂಘಟನೆಯ ವತಿಯಿಂದ ನೂರಾರು ಜನರು ನಗರಸಭೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ನಗರದಲ್ಲಿ ಬೀದಿ ನಾಯಿಗಳ ದಾಳಿಗೆ ಬಾಲಕರು ಸೇರಿದಂತೆ ಅನೇಕರು ತುತ್ತಾಗಿದ್ದಾರೆ. ಮನೆಯ ಹೊರಗಡೆ ಆಟವಾಡುವ ಮಕ್ಕಳ ಮೇಲೆ ಎರಗಿ ಗಂಬೀರ ಗಾಯಗೊಳಿಸಿವೆ.ಈ ಬಗ್ಗೆ ಹಲವಾರು ಬಾರಿ ತಿಳಿಸಿದರೂ ನಗರಸಭೆಯ ಅಧಿಕಾರಿಗಳು ನಿರ್ಲಕ್ಷ್ಯ ಭಾವನೆ ತೋರಿದ್ದಾರೆ.ಇಂದು ಇಷ್ಟೆಲ್ಲಾ ರಾದ್ದಾಂತ ನಗರಸಭೆಯ ಅಧಿಕಾರಿಗಳ ನಿರ್ಲಕ್ಷ್ಯತನವೇ ಕಾರಣ. ಕಚೇರಿಗೆ ಮನಸ್ಸಿಗೆ ಬರುವ ಅಧಿಕಾರಿಗಳು ನಗರದ ವೀಕ್ಷಣೆ ಮಾಡದೇ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಹೋಗುತ್ತಾರೆ.ಹೊರತು ನಗರದಲ್ಲಿ ಚರಂಡಿಗಳು ತುಂಬಿಕೊಂಡಿವೆ.ಎಲ್ಲೆಂದರಲ್ಲಿ ಕಸದ ರಾಶಿಗಳು ರಸ್ತೆಯ ಬದಿಯಲ್ಲಿ ಕಂಡು ಬರುತ್ತಿವೆ.ನಾಯಿಗಳು ಹಿಂಡು ಹಿಂಡಾಗಿ ಎಲ್ಲೆಡೆ ಓಡಾಡುತ್ತಿವೆ.ಈ ಬಗ್ಗೆ ಗಮನಿಸುವರು ಯಾರು ಎಂದು ಪ್ರಶ್ನೆ ಮಾಡಿದರು.

Contact Your\'s Advertisement; 9902492681

ದೂರು ನೀಡಿದರೇ ಮಾತ್ರ ಚರಂಡಿ, ಕಸದ ರಾಶಿ ಸ್ವಚ್ಚಗೊಳಿಸುವಿರಿ.ಆದರೆ ದೂರು ನೀಡದಿದ್ದರೇ ನಾಯಿಗಳು ಕಚ್ಚಿ ಹತ್ತಾರು ಜನರು ಸತ್ತರೂ ಪರವಾಗಿಲ್ಲ.ನಮಗೆ ದೂರು ಬಂದಿಲ್ಲ ಎಂದು ಕುಳಿತು ಬೀಡುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೂಡಲೇ ಬೀದಿ ನಾಯಿಗಳ ಉಪಟಳ ನಿಯಂತ್ರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ ಎಂದು ಆಗ್ರಹಿಸಿದರು.

ಮನವಿ ಸ್ವೀರಿಸಿ ಮಾತನಾಡಿದ ತಹಸೀಲ್ದಾರ ಜಗದೀಶ ಚೌರ್, ಈಗಾಗಲೇ ಬೀದಿ ನಾಯಿಗಳ ನಿಯಂತ್ರಣಕ್ಕೆ ನಗರಸಭೆ ಮುಂದಾಗಿದೆ.ಅಲ್ಲದೇ ಈಗಾಗಲೇ ಗಂಭೀರ ಗಾಯಕ್ಕೊಳಗಾದ ಬಾಲಕಿಯ ಆರೋಗ್ಯ ವಿಚಾರಿಸಿ, ಕುಟುಂಬದವರಿಗೆ ಪರಿಹಾರ ಚೆಕ್ ನೀಡಲಾಗಿದೆ. ಬೀದಿ ನಾಯಿಗಳ ಹಾವಳಿ ತಪ್ಪಿಸಲು ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here