ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ನಾತಕೋತ್ತರ ಪದವಿ ಅತಿಥಿ ಉಪನ್ಯಾಸಕರ ಅನಿರ್ದಿಷ್ಟ ಸತ್ಯಾಗ್ರಹ ಇಂದು ಮೂರನೆಯ ದಿನಕ್ಕೆ ಕಾಲಿಟ್ಟಿದ್ದು ಇಂದು ಇದಕ್ಕೆ ಬೆಂಬಲಿಸಿದ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಸತ್ಯಾಗ್ರಹದಲ್ಲಿ ಭಾಗವಹಿಸಿದರು.
ಯುಜಿಸಿ ನಿಯಮಾವಳಿಯಂತೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ಅವರಿಗೆ ಯುಜಿಸಿ ನಿಯಮದಂತೆ 50000/- ರೂ ವೇತನ ನೀಡಬೇಕು ಆದರೆ ಇಲ್ಲಿಯವರೆಗೆ ನಿಯಮವನ್ನು ಉಲ್ಲಂಘಿಸಿ ಕೇವಲ 36000/- ರೂ ಸಂಬಳ ನೀಡಿರುವದು ಅತಿಥಿ ಉಪನ್ಯಾಸಕರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಆದ್ದರಿಂದ ಕೂಡಲೆ ಅನ್ಯಾಯವನ್ನು ಸರಿಪಡಿಸಿ ಅವರಿಗೆ ನಿಯಮದಂತೆ ಪ್ರತಿ ತಿಂಗಳು ವೇತನ ನೀಡಬೇಕು ಎಂದು ಆಗ್ರಹಿಸಿದರು.
ಈ ಸಮಸ್ಯೆಯನ್ನು ಸರ್ಕಾರ ಸಂಭಂದಪಟ್ಟ ಸಚಿವರು ಗಂಭಿರವಾಗಿ ಪರಿಗಣಿಸಿ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಅತಿ ಶೀಘ್ರದಲ್ಲಿ ಬಗೆಹರಿಸಬೇಕು. ವಿಳಂಬ ನೀತಿ ಅನುಸರಿಸುತ್ತ ಹೋದರೆ ಉಪನ್ಯಾಸಕರ ಜೋತೆ ಬೀದಿಗೆ ಇಳಿದು ಉಗ್ರವಾಗಿ ಹೋರಾಟ ಮಾಡಲಾಗುವುದು ಎಂದು ಹೋರಾಟಕ್ಕೆ ಆಗಮಿಸಿದ ಗುಲ್ಬರ್ಗಾ ವಿಶ್ವವಿದ್ಯಾಲಯ ಉಪಕುಲಪತಿ ಪೆÇ್ರ ದಯಾನಂದ ಅಗಸರ ಅವರ ಗಮನಕ್ಕೆ ತರಲಾಯಿತು.
ಈ ಸಂದರ್ಭದಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯ ಸ್ನಾತಕೋತ್ತರ ಪದವಿ ವಿಭಾಗದ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ ಅರುಣಕುಮಾರ ಕುರನೆ, ಪ್ರಧಾನ ಕಾರ್ಯದರ್ಶಿ ಡಾ ಮಂಜುನಾಥ ನಡಗೇರಿ ಉಪಸ್ಥಿತರಿದ್ದರು.