ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಅದ್ಧೂರಿ ಜಯಂತಿ ಆಚರಣೆ : ಸಿದ್ದು ಪೂಜಾರಿ

0
35

ಕಲಬುರಗಿ:ಆಳಂದ ಪಟ್ಟಣದಲ್ಲಿ ಕ್ರಾಂತೀವೀರ ಸಂಗೋಳ್ಳಿ ರಾಯಣ್ಣನವರ 228ನೇ ಜಯಂತಿ ಆಚರಣೆಯ ಕುರಿತು ಕರ್ನಾಟಕ ಪ್ರದೇಶ ಕುರುಬರ ಸಂಘ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು ಅದ್ದೂರಿಯಾಗಿ ಜಯಂತಿ ಆಚರಣೆಗೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು.

ಪಟ್ಟಣದಲ್ಲಿ ಈ ಕುರಿತು ಕರೆದ ಸಿದ್ದತಾ ಸಭೆಯ ಅಧ್ಯಕ್ಷ ತೆ ವಹಿಸಿದ್ದ ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕು ಅಧ್ಯಕ್ಷ ಸಿದ್ದು ಪೂಜಾರಿ ಅವರು ಅ.18ರಂದು ಜಯಂತಿ ಆಚರಣೆಯ ನಿರ್ಧಾರವನ್ನು ಪ್ರಸ್ತಾಪಿಸಿದ್ದರು.

Contact Your\'s Advertisement; 9902492681

ಅಂದು ಪಟ್ಟಣದ ಗುರುಭವನದಲ್ಲಿ ಜಯಂತಿ ಆಚರಣೆಯ ವೇದಿಕೆಯ ಕಾರ್ಯಕ್ರಮ ಶಾಸಕರು ಮತ್ತು ಗಣ್ಯರು ಹಾಗೂ ಉಪನ್ಯಾಸಕರನ್ನು ಆಮಂತ್ರಿಸಲು ನಿರ್ಧರಿಸಲಾಯಿತು. ಅಲ್ಲದೆ, ವೇದಿಕೆ ಕಾರ್ಯಕ್ರಮದ ಬಳಿಕ ಪ್ರಮುಖ ರಸ್ತೆಗಳಲ್ಲಿ ರಾಯಣ್ಣನವರ ಮೂರ್ತಿ ಭವ್ಯ ಮೆರವಣಿಗೆಯು ವಾದ್ಯ ವೈಭವಗಳೊಂದಿಗೆ ಕೈಗೊಳ್ಳು ವುದು ಹಾಗೂ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಿಂದ ಸಮಾಜ ಬಾಂಧವರು ಹಾಗೂ ಸಾರ್ವಜನಿಕರನ್ನು ಹೆಚ್ಚಿನ ರೀತಿಯಲ್ಲಿ ಸೇರುವಂತೆ ಆಮಂತ್ರಿಸಲು ಮುಖಂಡರು ತೀರ್ಮಾನಿಸಿ ಜವಾಬ್ದಾರಿ ಹಂಚಿಕೊಂಡರು.

ಈ ಸಭೆಯಲ್ಲಿ ಸಂಘದ ಯುವ ಘಟಕದ ತಾಲೂಕು ಅಧ್ಯಕ್ಷ ಬೀರಣ್ಣಾ ಪೂಜಾರಿ, ಹಿರಿಯ ಮುಖಂಡ ಈರಣ್ಣಾ ಝಳಕಿ ಧಂಗಾಪೂರ, ತುಕಾರಾಮ ವಗ್ಗೆ, ತಾಪಂ ಮಾಜಿ ಸದಸ್ಯ ಶಿವುಪುತ್ರಪ್ಪ ಕೊಟ್ಟರಗಿ ಇನ್ನಿತರರು ಮಾತ ನಾಡಿದರು.

ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಶಿವರಾಯ ಪೂಜಾರಿ, ದೊಡ್ಡಪ್ಪ ಹೆಬಳಿ, ಮಲ್ಲಿಕಾರ್ಜುನ ದೇವಂತಗಿ, ಸುರೇಶ ಪೂಜಾರಿ, ನಾಗರಾಜ ಘೋಡಕೆ, ಪ್ರಭಾಕರ್ ಮಂಟಗಿ, ಭೀಮಾ ನಾಗಲೇಗಾಂವ, ಕಲ್ಯಾಣಿ ದೇವಂತಗಿ, ಶಾಂತು ಮಾದನಹಿಪ್ಪರಗಾ, ಧೂಂಡಿಬಾ ಪೂಜಾರಿ, ಶಾಂತು ಚಿತಲಿ, ಹಣಮಂತ ಗೌಡೆ, ಬಾಲಾಜಿ ಘೋಡಕೆ, ಯಲ್ಲಾಲಿಂಗ ಶಿರೂರ, ಪಾರ್ವತಿ ಮಾದನ ಹಿಪ್ಪರಗಾ, ಅನಿಲ ಖ.ನೈಕೋಡಿ ಕರ್ನಾಟಕ ಪ್ರದೇಶ ಕುರುಬರ ಸಂಘ ಆಳಂದ ತಾಲೂಕಿನ ಸಮಾಜಿಕ ಜಾಲತಾಣ ಸಂಚಾಲಕರು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದು ಜಯಂತಿ ಯಶಸ್ವಿಗೆ ಸಲಹೆ ಸೂಚನೆಗಳು ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here