ಸಿರಿ ಸಂಪತ್ತು ಶಾಶ್ವತವಲ್ಲ, ಪರೋಪಕಾರಿ ಕೆಲಸ ಮಾಡಿ – ಕಡಕೋಳ ಶ್ರೀ

0
78

ಶಹಾಪುರ :ಅಪಹಪಿತನದಿಂದ ಗಳಿಸಿದ ಸಿರಿ ಸಂಪತ್ತು ಶಾಶ್ವತವಲ್ಲ,ಬದಲಾಗಿ ಮನುಷ್ಯ ಬದುಕಿನಲ್ಲಿ ಪರೋಪಕಾರಿ ಕೆಲಸಗಳು ಮಾಡುತ್ತ,ಈ ಸಮಾಜದ ಋಣವನ್ನು ತೀರಿಸಬೇಕೆಂದು ಕಡಕೋಳ ಮಡಿವಾಳೇಶ್ವರ ಮಠದ ಡಾ.ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು,ಹೇಳಿದರು.

ತಾಲೂಕಿನ ಸಗರ ಗ್ರಾಮದ ಮಹಾತ್ಮ ಸಿದ್ದರಾಮೇಶ್ವರ ಸ್ವಾಮಿ ದೇಸಾಯಿ ಮಠದಲ್ಲಿ ಜರುಗಿದ 25ನೇ ವರ್ಷದ ಶ್ರೀ ಮಹಾತ್ಮ ಸಿದ್ದರಾಮೇಶ್ವರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ,ತುಲಾಭಾರ ಹಾಗೂ ಧರ್ಮಸಭೆಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

Contact Your\'s Advertisement; 9902492681

ಹಗಲಿರುಳು ದುಡಿಯುವ ಪ್ರತಿಯೊಂದು ದೇಹ ಮತ್ತು ಮನಸ್ಸಿಗೆ,ಮಾನಸಿಕ ನೆಮ್ಮದಿ ಮತ್ತು ಶಾಂತಿ ಸಿಗಬೇಕಾದರೆ ಇಂಥ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಆಗಾಗ ಭಾಗಿಯಾಗಬೇಕು ಎಂದು ಚಿಗರಳ್ಳಿಯ ಸಿದ್ದ ಬಸವ ಕಬೀರಾನಂದ ಮಹಾಸ್ವಾಮಿಗಳು ಹೇಳಿದರು.

ಶ್ರಾವಣ ಮಾಸದಲ್ಲಿ ಪ್ರತಿಯೊಬ್ಬರೂ ಸತ್ಕಾರ್ಯ,ಉಪಾಸನೆಗಳು,ದೇವರ ಪೂಜೆ,ಪುನಸ್ಕಾರ,ನಿರಂತರವಾಗಿ ಮಾಡುತ್ತಾ ಇದ್ದರೆ,ಬದುಕಿನಲ್ಲಿ ಯಶಸ್ಸು ದೊರಕಿ ಧರ್ಮ,ಸಂಸ್ಕಾರ ಸಂಸ್ಕೃತಿ ನಮ್ಮೊಳಗೆ ಬೆಳೆಯಲು ಸಾಧ್ಯ ಎಂದು ಶಹಾಪುರದ ಕುಂಬಾರಗೇರಿ ಹಿರೇಮಠದ ಪರಮಪೂಜ್ಯ ಸೂಗುರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಉಪದೇಶ ನೀಡುತ್ತ ಮಾತನಾಡಿದರು.

ನಂತರ 25 ನೇ ವರ್ಷದ ಮಹಾತ್ಮ ಸಿದ್ರಾಮೇಶ್ವರ ಕರ್ತೃ ಗದ್ದುಗೆಗೆ ಮಹಾರುದ್ರಭಿಷೇಕ ಕಾರ್ಯಕ್ರಮದ ಅಂಗವಾಗಿ,ಕಡಕೋಳ ಮಡಿವಾಳೇಶ್ವರ ಮಠದ ಪರಮ ಪೂಜ್ಯರಾದ ಡಾ.ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ ತುಲಾಭಾರ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.

ಒಕ್ಕಲಿಗರ ಹಿರೇಮಠದ ಪೂಜ್ಯರಾದ ಮರುಳ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು.ಈ ಸಮಾರಂಭದ ವೇದಿಕೆಯ ಮೇಲೆ ಹಲಕರ್ಟಿಯ ಶ್ರೀ ಸಿದ್ದೇಶ್ವರ ಹಿರೇಮಠದ ಪೂಜ್ಯರಾದ ರಾಜಶೇಖರ ಶಿವಾಚಾರ್ಯ ಮಹಾಸ್ವಾಮಿಗಳು,ನಾಗಠಾಣ ಹಿರೇಮಠದ ಪೂಜ್ಯ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಅಕ್ಕಮಹಾದೇವಿ ಮಠದ ಮಾತೋಶ್ರೀ ಶರಣಮ್ಮ ತಾಯಿ, ನಿಲೋಗಲ್ ಗುರಲಿಂಗಯ್ಯ ತಾತ ಗದ್ದುಗೆಯ ವೇ.ಬಸಯ್ಯ ಸ್ವಾಮಿಗಳು,ಚನ್ನೂರು ರೇವಣಸಿದ್ದೇಶ್ವರ ಮಠದ ವೇ.ಗುರುಪಾದಯ್ಯ ಸ್ವಾಮಿಗಳು, ಸಮಾಜದ ಹಿರಿಯ ಮುಖಂಡರಾದ ರಾಜಶೇಖರ್ ದೇಸಾಯಿ,ಬಂಟನೂರ ಆಮಯ್ಯಸ್ವಾಮಿ ಶಾಸ್ತ್ರಿಗಳು,ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮಠದ ಧರ್ಮಾಧಿಕಾರಿಗಳಾದ ವಿಶ್ವರಾಧ್ಯಸ್ವಾಮಿ ದೇಸಾಯಿಮಠ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಶಿವಶರಣಪ್ಪ ನಾಗಲೋಟ ಹರಗುರು ಚರಮೂರ್ತಿಗಳನ್ನ ಸ್ವಾಗತಿಸಿದರು,ಬಸವರಾಜ ಶಿನ್ನೂರ ನಿರೂಪಿಸಿ ವಂದಿಸಿದರು.ನಂತರ ಮನೋಹರ್ ಪ್ರತಿ ಹಸ್ತ, ಮನೋಹರ್ ವಿಶ್ವಕರ್ಮ,ಹಾಗೂ ರಮೇಶ್ ವಿಶ್ವಕರ್ಮ ಅವರಿಂದ ಸಂಗೀತ ಕಾರ್ಯಕ್ರಮಗಳು ಜರುಗಿದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here