ಚಿಂಚೋಳಿ: ಜಾತಿ -ಮತ ರಾಜ್ಯ ಎಂಬ ಬೇಧ ಭಾವ ಮರೆತು ಇಂದು ಭಾರತೀಯರೆಲ್ಲರು ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡುತ್ತಿರುವುದರ ಹಿಂದೆ ನಮ್ಮ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನ ಅಡಗಿದೆ ಅದನ್ನು ಮೆಲುಕು ಹಾಕುವುದು ಅನಿವಾರ್ಯವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಮಾರುತಿ ಗಂಜಗಿರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಲಿಟಲ್ ಪ್ಲಾವರ ಆಂಗ್ಲ ಮಾದ್ಯಮ ಪ್ರೌಡ ಶಾಲೆಯಲ್ಲಿ ಹಮ್ಮಿಕೊಂಡಿದ್ದ 78 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ ಮುಂದುವರೆದು ಜೈ ಹಿಂದ್ ಎನ್ನುವ ಸುಭಾಷ್ ಚಂದ್ರ ಬೋಸ್ ರವರ ಘೋಷಣೆ ವಂದೇ ಮಾತರಂ ಸತ್ಯಮೇವ ಜಯತೆ ನೀವು ನನಗೆ ರಕ್ತ ನೀಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ಮಾಡು ಇಲ್ಲವೇ ಮಡಿ ಎಂಬ ರಾಷ್ಟ್ರ ಪೀತ ಮಾಹತ್ಮ ಗಾಂಧಿಯ ಭಂಕೀಮ ಚಂದ್ರ ಚಟರ್ಜಿ ಮತ್ತು ಮುಂತಾದ ಸ್ವಾತಂತ್ರ್ಯ ಹೋರಾಟಗಾರ ಘೋಷಣೆಗಳು ಇಂದಿನ ಪ್ರಸ್ತುತ ದಿನಾಮಾನಗಳಲ್ಲಿಯು ಸಹಿತ ಯುವಕರಲ್ಲಿ ಹೋರಾಟದ ಕಿಚ್ಚನ್ನು ಬಡಿದೆಬ್ಬಿಸುತ್ತವೆ ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಸ್ಥರಾದ ವಿನಯ ವಿಲ್ಬರ್ಟ್ ಲೋಬೊ ಮುಖ್ಯಗುರುಗಳಾದ ಕುಮಾರಿ ಅರ್ಪಿತಾ. ಸಹಶಿಕ್ಷಕರಾದ ಸುಜಾತಾ. ಆಶಾಜ್ಯೋತಿ.ಪವಿತ್ರಾ.ಸುರೇಂದ್ರ.ಸಂತೋಷ ಹೋಸಮನಿ.ಸಂತೋಷ ಆನಂದಿ ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಶ್ರೀಮತಿ ಸವಿತಾ ನಿರೂಪಿಸಿ ವಂದಿಸಿದರು.