ಸುರಪುರ:ತಾಲೂಕಿನ ವಿವಿಧ ಕಡೆಗಳಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ

0
27

ಸುರಪುರ:ತಾಲೂಕಿನಾದ್ಯಂತ ವಿವಿಧ ಕಡೆಗಳಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ ದಿಂದ ಆಚರಿಸಲಾಗಿದೆ. ನಗರದ ಕಾಂಗ್ರೆಸ್ ಕಚೇರಿ ವಸಂತ ಮಹಲ್,ಮಹಾತ್ಮ ಗಾಂಧಿ ವೃತ್ತ,ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ರಾಜಾ ವೇಣುಗೋಪಾಲ ನಾಯಕ ಧ್ವಜಾರೋಹಣ ನೆರವೇರಿಸಿದರು.

ನಗರಸಭೆ ಮುಂದೆ ಶಾಸಕ ರಾಜಾ ವೇಣುಗೋಪಾಲ ನಾಯಕ,ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ಧ್ವಜಾರೋಹಣ ನೆರವೇರಿಸಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಮುಖಂಡರಾದ ರಾಜಾ ಕೃಷ್ಣಪ್ಪ ನಾಯಕ, ವಿಠ್ಠಲ್ ಯಾದವ್,ಮಾಜಿ ಜಿ.ಪಂ ಅಧ್ಯಕ್ಷ ರಾಜಶೇಖರಗೌಡ ವಜ್ಜಲ್,ರಾಜಾ ಲಕ್ಷ್ಮೀನಾರಾಯಣ ನಾಯಕ, ಪ್ರಕಾಶ ಗುತ್ತೇದಾರ,ರಾಜಾ ವಾಸುದೇವ ನಾಯಕ,ಬಬ್ಲು ದೊರೆ,ಅಬ್ದುಲ್ ಗಫೂ ನಗನೂರಿ, ದೊಡ್ಡ ದೇಸಾಯಿ ದೇವರಗೋನಾಲ,ಮಲ್ಲಣ್ಣ ಸಾಹು ಮುಧೋಳ,ಗ್ಯಾನಚಂದ್ ಜೈನ್,ರಾಜಾ ಕುಮಾರ ನಾಯಕ,ರಮೇಶ ದೊರೆ ಆಲ್ದಾಳ,ವೆಂಕಟೇಶ ಬೇಟೆಗಾರ,ಸೂಗುರೇಶ ವಾರದ,ವೆಂಕಟೇಶ ಹೊಸ್ಮನಿ,ಅಹ್ಮದ್ ಪಠಾಣ್,ಉಸ್ತಾದ ವಜಾಹತ್ ಹುಸೇನ್,ವೆಂಕಟೇಶ ರಡ್ಡಿ, ಮಾಳಪ್ಪ ಕಿರದಳ್ಳಿ,ಹಣಮಂತ್ರಾಯ ಮಕಾಶಿ,ಶಿವರಾಜ ನಾಯಕ ಸೇರಿದಂತೆ ಅನೇಕರಿದ್ದರು.

ತಹಸಿಲ್ದಾರ್ ಕಚೇರಿ:ನಗರದ ತಹಸಿಲ್ದಾರ್ ಕಚೇರಿ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಸಲಾಗಿದೆ.ತಹಸಿಲ್ದಾರ್ ಕೆ.ವಿಜಯಕುಮಾರ ಧ್ವಜಾರೋಹಣ ನೆರವೇರಿಸಿದರು.ಕಂದಾಯ ನಿರೀಕ್ಷಕರು,ಪೊಲೀಸ್ ಸಿಬ್ಬಂದಿಗಳು,ಗ್ರಾಹ ಲೆಕ್ಕಾಧಿಕಾರಿಗಳು,ಕಚೇರಿ ಸಿರಸ್ತೆದಾರರು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

ಬಿಜೆಪಿ ಕಚೇರಿ: ನಗರದ ಬಿಜೆಪಿ ಕಚೇರಿಯಲ್ಲಿ 78ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗಿದೆ.ಭಾರತ ಮಾತಾ,ಮಹಾತ್ಮ ಗಾಂಧಿ,ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಸಂಗೊಳ್ಳಿ ರಾಯಣ್ಣನವರ ಭಾಚಿತ್ರಕ್ಕೆ ಪೂಜೆ ಸಲ್ಲಿಸಿ ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ) ಧ್ವಜಾರೋಹಣ ನೆರವೇರಿಸಿದರು.ಬಿಜೆಪಿ ಮಂಡಲ ಅಧ್ಯಕ್ಷ ವೇಣುಮಾಧವ ನಾಯಕ,ಪಾರಪ್ಪ ಗುತ್ತೇದಾರ,ಈಶ್ವರ ನಾಯಕ,ವೆಂಕಟೇಶ ಚಟ್ನಳ್ಳಿ,ವಿರುಪಾಕ್ಷಿ ಕೋನಾಳ, ಹೈಯಾಳಪ್ಪ,ಶರಣು ನಾಯಕ ದಿವಳಗುಡ್ಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ರಿಕ್ರಿಯೇಷನ್ ಕ್ಲಬ್: ನಗರದ ರಿಕ್ರಿಯೇಷನ್ ಕ್ಲಬ್ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ಧ್ವಜಾರೋಹಣ ನೆರವೇರಿಸಿದರು.ಮುಖಂಡರಾದ ರಾಘವೇಂದ್ರ ಬಾಡಿಹಾಳ ಸೇರಿದಂತೆ ಅನೇಕ ಜನ ಸದಸ್ಯರು ಭಾಗವಹಿಸಿದ್ದರು.
ಬಸ್ ನಿಲ್ದಾಣ: ನಗರದ ಬಸ್ ನಿಲ್ದಾಣದಲ್ಲಿ 78ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗಿದೆ.ಬಸ್ ನಿಲ್ದಾಣದ ಸಂಚಾರಿ ನಿಯಂತ್ರಕರಾದ ತಿಮ್ಮಯ್ಯ ಧ್ವಜಾರೋಹಣ ನೆರವೇರಿಸಿದರು.

ದೇವಣ್ಣ,ಬಾಲನಾಥ,ಕನಕಪ್ಪ,ಮುಡ್ಲಪ್ಪ ಸೇರಿದಂತೆ ಅನೇಕ ಜನ ಚಾಲಕ ನಿರ್ವಾಹಕರು ಭಾಗವಹಿಸಿದ್ದರು. ನಗರದ ರಂಗಂಪೇಟೆಯ ಮೌಲಾನಾ ಆಜಾದ್ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗಿದೆ.

ಅಮ್ಮಾ ಶ್ರೇಯಸ್ ಆಂಗ್ಲ ಮಾಧ್ಯಮ ಶಾಲೆ ಪೇಠ ಅಮ್ಮಾಪುರ: ತಾಲೂಕಿನ ಪೇಠ ಅಮ್ಮಾಪುರದ ಅಮ್ಮಾ ಶ್ರೇಯಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಸಂಗೊಳ್ಳಿ ರಾಯಣ್ಣ ಜಯಂತಿ ಆಚರಿಸಲಾಗಿದೆ.ಸಂಸ್ಥೆಯ ಅಧ್ಯಕ್ಷ ಬಸವರಾಜ ಕುಂಬಾರ ಧ್ವಜಾರೋಹಣ ನೆರವೇರಿಸಿದರು.

ಮಹ್ಮದ್ ಮುಸ್ತಾಫ್ ಮಕ್ಕಾ ರುಕ್ಮಾಪುರ ಉದ್ಘಾಟಿಸಿದರು.ರೈತ ಹೋರಾಟಗಾರ ದೇವಿಂದ್ರಪ್ಪ ಪೊ.ಪಾ ಮಾಲಗತ್ತಿ,ಶಿಕ್ಷಕ ಸಾಹೇಬರಡ್ಡಿ ಇಟಗಿ,ಸಚಿನಕುಮಾರ ನಾಯಕ,ವೆಂಕಟೇಶ ಯಾದವ್,ಮಹೇಶ ಹೊಸ್ಮನಿ,ಸಾಯಿಬಣ್ಣ ಅಂಬಿಗೇರ,ನಿಂಗಣ್ಣ ಬಂದೊಳ್ಳಿ,ಮಲ್ಲಿಕಾರ್ಜುನ ನಾಯಕ ಸೇರಿ ಅನೇಕರಿದ್ದರು.

ಜನನಿ ಮಹಿಳಾ ಪದವಿ ಕಾಲೇಜ್: ನಗರದ ಶ್ರೀ ಜನನಿ ಮಹಿಳಾ ಪದವಿ ಕಾಲೇಜ್‍ನಲ್ಲಿ 78ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗಿದೆ.ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.ಅಲ್ಲದೆ ಕಾರ್ಯಕ್ರಮವನ್ನು ಸಮಾಜಶಾಸ್ತ್ರ ಉಪನ್ಯಾಸಕ ವೆಂಕಟೇಶ ಜಾಲಗಾರ ಉದ್ಘಾಟಿಸಿ ಮಾತನಾಡಿದರು.

ಪ್ರಾಂಶುಪಾಲರಾದ ತಿರುಪತಿ ಕೆಂಭಾವಿ,ಉಪನ್ಯಾಸಕರಾದ ಶೋಭಾ,ಮಹೇಶಕುಮಾರ ಗಂಜಿ,ಚಂದ್ರಶೇಖರ ನಾಯ್ಕೊಡಿ,ನಬಿಸಾಬ್ ನಾಯ್ಕೊಡಿ,ಹಣಮಂತ್ರಾಯಗೌಡ,ಜ್ಯೋತಿ,ಅಶ್ವಿನಿ,ಸಿಬ್ಬಂದಿಗಳಾದ ಶೃತಿಗೌಡ,ರೂಪಾ,ಯಲ್ಲಮ್ಮ,ಪಲ್ಲವಿ,ಕನಕಮ್ಮ,ರತ್ನಾ ಸೇರಿದಂತೆ ಅನೇಕರಿದ್ದರು.ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿದ್ಯಾರ್ಥಿನಿಯರಿಗೆ ಭಾಷಣ,ಪ್ರಬಂಧ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here