ಶಶೀಲ್ ನಮೋಶಿಯ ಅಧ್ಯಕ್ಷತೆಯಲ್ಲಿ ಬಸವೇಶ್ವರ ಆಸ್ಪತ್ರೆ ಬದಲಾವಣೆ ಕಂಡಿದೆ: ಪೂಜ್ಯ ಷ ಬ್ರ ಗಂಗಾದರಯ್ಯ ಮಹಾಸ್ವಾಮೀಜಿ

0
20

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪ್ರತಿಷ್ಟಿತ ಬಸವೇಶ್ವರ ಭೊದನಾ ಮತ್ತು ಸಾರ್ವಜನಿಕ ಆಸ್ಪತ್ರೆಯ ಅತಿಕಡಿಮೆ ಬೆಲೆಯಲ್ಲಿ ತಯಾರದ ಇತರ ಸಂಸ್ಥಗಳಿಗೆ ಮಾದರಿಯಾಗಿ ನಿರ್ಮಿಸಿದ ಉತ್ಕೃಷ್ಟ ಮಟ್ಟದ ಸುಸಜ್ಜಿತ ಆಪರೇಷನ್ ಥಿಯೇಟರ್ ಹಾಗೂ ಆಸ್ಪತ್ರೆಯ ರೋಗಿಗಳು ಹಾಗೂ ಸಾರ್ವಜನಿಕರಿಗೆ ಉಪಯೋಗವಾಗುವಂತೆ ಕೆನರಾಬ್ಯಾಂಕ್ ಎ.ಟಿ.ಎಮ್ ಕೇಂದ್ರ ಮತ್ತು ಆಸ್ಪತ್ರೆಯ ಸ್ವಚ್ಚತೆಗಾಗಿ ತರಿಸಲಾದ ಯಾಂತ್ರಿಕ ಉಪಕರಣಗಳನ್ನು ಉದ್ಘಾಟನೆ ಮಾಡಿದ ಷ ಬ್ರ ಶ್ರೀ ಗಂಗಾಧರಯ್ಯ ಸ್ವಾಮಿಜಿ ಹೇಳಿದರು.

ಶಶೀಲ್ ನಮೋಶಿಯವರು ಹಿಡಿದ ಕೆಲಸವನ್ನು ಸಾಧಿಸಿ ತೋರಿಸುವ ಛಲಗಾರರು, ಮಹಾದೇವಪ್ಪ ರಾಂಪುರೆ ಅವರ ಕನಸನ್ನು ಸಾಕಾರಗೊಳಿಸುವಲ್ಲಿ ನಮೋಶಿಯವರ ಪಾತ್ರ ಹೆಚ್ಚಿದೆ, ಇಂದು ಉದ್ಘಾಟಿಸಿದ ಶಸ್ತ್ರಚಿಕಿತ್ಸಾ ಕೇಂದ್ರದಿಮದ ಬಡ ರೋಗಿಗಳು ಕಡಿಮೆ ಬೆಲೆಯಲ್ಲಿ ದೊಡ್ಡ ಮಟ್ಟದ ಶಸ್ತ್ರಚಿಕಿತ್ಸೆ ಹೊಂದಬಹುದಾಗಿದೆ, ಸಂಸ್ಥೆಯ ಅಭಿವೃದ್ಧಿಯ ವೇಗ ಪಡೆದಿರುವು ಅಷ್ಟೇ ಅಲ್ಲದೆ ಸರಿಯಾದ ದಾರಿಯಲ್ಲಿ ಸಾಗುತ್ತಿದೆ ಎಂದು ಇದರ ಮೂಲಕ ತಿಳಿಯುತ್ತಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಇದೆ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಅತ್ತಾರ್ ಅವರ ಸಹಕಾರದಿಂದ ಆಸ್ಪತ್ರೆಯ ಸ್ವಚ್ಚತಾ ಸಿಬ್ಬಂದಿಗಳಿಗೆ ದಾನ್ಯ ವಿತರಣೆ ಮಾಡಿ ಮಾಡಲಾಯಿತು ಹಾಗೂ ಅತ್ಯುತ್ತಮ ಕಾರ್ಯನಿರ್ವಹಿಸಿದ ಪರಿಚಾರಕರಿಗೆ ಈ ಸಂದರ್ಭದಲ್ಲಿ ಸನ್ಮಾನ ಮಾಡಲಾಯಿತು.

ನಂತರ ಮಾತನಾಡಿದ ಸಂಸ್ಥೆಯ ಅದ್ಯಕ್ಷರಾದ ಶಶೀಲ್ ಜಿ ನಮೋಶಿಯವರು ಬಸವೆಶ್ವರ ಆಸ್ಪತ್ರೆ ಸಂಸ್ಥಾಪಕರ ಆಶಯದಂತೆ ಇನ್ನೂ ಎತ್ತರಕ್ಕೆ ಬೆಳೆಯಬೇಕಿತ್ತು ಈಗ ಅವರ ಆಶಯವನ್ನು ಸಾಕಾರ ಮಾಡಲು ಸಂಸ್ಥೆಯ ಎಲ್ಲಾ ಆಡಳಿತ ಮಂಡಳಿಯವರು, ಸದಸ್ಯರು, ಸಿಬ್ಬಂದಿಗಳು, ಹಾಗು ವಿದ್ಯಾರ್ಥಿಗಳು ಒಂದು ಕುಟುಂಬದಂತೆ ಎಂದು ಬಾವಿಸಿ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ಪ್ರಮಾಣ ಮಾಡಿದ್ದೇವೆ ಅದರಂತೆ ಈ ಸಂಸ್ಥೆಯನ್ನು ಈ ಭಾಗದಲ್ಲಿಯೇ ದೊಡ್ಡದಾದ ಮಾದರಿ ಸಂಸ್ಥೆಯಾಗಿ ಬೆಳೆಸುವ ಗುರಿ ಹೊಂದಿದ್ದೇವೆ ಎಂದರು.

ಕಾರ್ಯಕ್ರಮಲ್ಲಿ ಸಂಸ್ಥೆಯ ಉಪಾದ್ಯಕ್ಷ ರಾಜ ಭಿ ಭೀಮಳ್ಳಿ, ಕಾರ್ಯಧಶಿಗಳಾದ ಉದಯ ಕುಮಾರ ಚಿಂಚೋಳಿರವರು, ಜಂಟಿ ಕಾರ್ಯದರ್ಶಿ ಡಾ. ಕೈಲಾಶ್ ಪಾಟೀಲರವರು, ಆಡಳಿತ ಮಂಡಳಿ ಸದಸ್ಯರು, ವೈದ್ಯಕೀಯ ಕಾಲೇಜಿನ ಡೀನ್ ಡಾ. ಶರಣಗೌಡ ಪಾಟೀಲ್ ಹಾಗು ಮೆಡಿಕಲ್ ಸೂಪರಿಡೆಂಟ್ ಡಾ. ಶರಣ ಬಸಪ್ಪ ಅವಂತಿ ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಡಾ. ಅರುಂಧತಿ ಪಾಟೀಲ್ ನಿರೂಪಿಸಿದರೂ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here