ಕಾಳಗಿ : ತಾಲೂಕಿನ ಗೊಟೂರ್ ಗ್ರಾಮದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಜೈ ಜವಾನ ಜೈ ಕಿಸಾನ್ ಎಂಬ ಪದಕ್ಕೆ ಅನುಗುಣವಾಗಿ ಕೀರ್ತಿಗೆ ಭಾಜನಾರಾದ ಗೊಟೂರ್ ಗ್ರಾಮದ ಹಿರಿಯ ರೈತರಿಗೆ ಸನ್ಮಾನಿಸಿ ಸತ್ಕರಿಸಲಾಯಿತು.
ವಿಶ್ವನಾಥ ರೆಡ್ಡಿ ಕಾಮರೆಡ್ಡಿ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಕೃಷಿಯನ್ನೆ ಮೂಲ ಕಸುಬನ್ನಾಗಿಸಿಕೊಂಡ ಊರಿನ 12ಜನ ರೈತರನ್ನು,ಇಬ್ಬರು ಮಾಜಿ ಸೈನಿಕರನ್ನು,ನಮ್ಮೂರ ಶಾಲೆಯಲ್ಲೆ ಕಲಿತ ಹತ್ತನೇ ತರಗತಿಯಲ್ಲಿ 60% ತೆಗೆದು ಕೊಂಡ ಪ್ರತಿಭಾವಂತ 13 ಜನ ವಿಧ್ಯಾರ್ಥಿಗಳು ಪೋಲಿಸ್ ಇಲಾಖೆಗೆ ಆಯ್ಕೆಯಾದ ಇಬ್ಬರು ಹಳೆ ವಿದ್ಯಾರ್ಥಿ ಶಿಕ್ಷಕ ವೃತಿಯಿಂದ ನಿವೃತ್ತರಾದ ಹಳೆ ವಿದ್ಯಾರ್ಥಿ ಶರಣಬಸಪ್ಪ, ಪ್ರೊ. ಪಾಟೀಲ್, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಧ್ಯಾರ್ಥಿ ವಿದ್ಯಾರ್ಥಿನಿ ಯರಿಗೆ ಮತ್ತು ನೂತನ LKG UKG ಶಿಕ್ಷಕಿಯರಿಗೆ ಹಾಗೂ ಆಯಮ್ಮಳಿಗೂ ಶಾಲು ಹೂವಿನ ಹಾರ ಜೊತೆಗೆ ಒಂದು ಪುಸ್ತಕ ಕೊಡುವ ಮುಖಾಂತರ ಊರಿನ ಹಿರಿಯರಿಂದ ಸನ್ಮಾನಿಸಲಾಯಿತು.
ವಿಶೇಷವಾಗಿ ರೈತರಿಗೆ ಹಸಿರು ಟವೆಲ್ ಹೂವಿನ ಹಾರ ಬಾರುಕೋಲು ಕೊಡುವುದು ಮುಖಾಂತರ ಗೌರವ ಸಲ್ಲಿಸಲಾಯಿತು. ಶಾಲೆಯ ಶಿಕ್ಷಕ ಶಿಕ್ಷಕಿಯರು ವಿದ್ಯಾರ್ಥಿಗಳನ್ನು ತುಂಬಾ ಅಚ್ಚುಕಟ್ಟಾಗಿ ಶಿಸ್ತು ಸಂಯಮದಿಂದ ಕಾರ್ಯಕ್ರಮಗಳನ್ನು ಏರ್ಪಡಿಸಿ ಗ್ರಾಮಸ್ತರಿಂದ ಮೆಚ್ಚುಗೆ ಪಡೆದರು.
ಅದರಲ್ಲೂ ವಿಶೇಷವಾಗಿ ವಿಧ್ಯಾರ್ಥಿಗಳಿಂದ ಅಣುಕು ಸಂಸತ್ತು ತುಂಬಾನೇ ಚೆನ್ನಾಗಿ ಮಾಡಿದರು. ಈ ಸಂಧರ್ಭದಲ್ಲಿ ಊರಿನ ಹಿರಿಯರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಯುವಕರು ಉಪಸ್ಥಿತರಿದ್ದರು.