ಕಲಬುರಗಿ: ರಾಷ್ರ್ಟೀಯ ಸೇವಾ ಯೋಜನೆಯ ಸ್ನಾತಕೋತ್ತರ ಘಟಕಗಳ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ನಗರದ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಚರಿಸಲಾಯಿತು.
ಕಾರ್ಯಕ್ರಮ ಡಾ. ಶಿವಪುತ್ರ ಬೆಡಜಿರ್ಗಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿನಿಯರು ಸೇವಾ ಮನೋಭಾವನೆ, ಸಾಮಾಜಿಕ ಕಾಳಜಿ, ಪರಿಸರ ಪ್ರಜ್ಞೆವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಾ.ಶಶಿಶೇಖರ ರೆಡ್ಡಿ ಮಾತನಾಡಿನಿಷ್ಟೆ, ಸತ್ಯ, ಪ್ರಾಮಾಣಿಕತೆ, ಶ್ರದ್ಧೆ, ಸತತ ಪ್ರಯತ್ನ, ದೃಢ ನಿರ್ಧಾರ ಮುಂತಾದ ಮೌಲ್ಯಗಳನ್ನು ಆಳವಡಿಸಿಕೊಳ್ಳಬೇಕೆಂದು ತಿಳಿಸುತ್ತಾ ವ್ಯಕ್ತಿತ್ವ ವಿಕಸನ ಮಾರ್ಗೋಪಾಯಗಳನ್ನು ತಿಳಿಸಿಕೊಟ್ಟರು.
ಎನ್.ಎನ್.ಎಸ್. ಕಾರ್ಯಕ್ರಮಾಧಿಕಾರಿ ಡಾ. ಹಾಜೀ ಬೇಗಂ ಮತಾನಾಡಿ ಸ್ವಚ್ಚತೆಯ ಮಹತ್ವದ ಬಗ್ಗೆ ವಿವರಿಸಿದರು. ಸ್ವಯಂ ಸೇವಕಿಯರಾದರಾಜಶ್ರೀ ರವರು ಸ್ವಾಗತಿಸಿದರು. ಚಾಂದನಿ ಸಂಗಡಿಗರು ಪ್ರಾರ್ಥಿಸಿದರು ಭಾಗ್ಯವಂತಿರವರು ವಂದಿಸಿದರು. ವಿಜಯಲಕ್ಷ್ಮಿ ನಿರೂಪಿಸಿದರು. ಪ್ರೊ.ಮೀನಾಕ್ಷಿ ವಿಜಯಕುಮಾರ್, ಡಾ.ಶಂಭುಲಿಂಗ ವಾಣಿ ವೇದಿಕೆ ಮೇಲೆ ಉಪಸ್ಥಿತರಿದ್ದರು.