ಕಲಬುರಗಿ: ಓಂ ನಗರ ಬಡಾವಣೆ ಅಂಚಿನಲ್ಲಿರುವ ಪದ್ಮಸಾಲಿ ಸಮಾಜದ ದೇವಸ್ಥಾನದ ಆವರಣದಲ್ಲಿ ನೇಕಾರರ ನೂಲು ಹುಣ್ಣಿಮೆ ನಿಮಿತ್ತ ರಕ್ಷಾ ಬಂಧನ ಮತ್ತು ಭಾವ ಸಂಗಮ ಕಾರ್ಯಕ್ರಮ ಜರುಗಿತು.
ನೂಲು ಹುಣ್ಣಿಮೆ ಪರ್ವ ಹರ್ಷದಿಂದ ಆಚರಿಸಿ ಆರಾಧ್ಯದೈವ ಮಾರ್ಖಂಡೇಶ್ವರ ರ ಮೂರ್ತಿಗೆ, ರುದ್ರಾಭಿಷೇಕ ಮತ್ತು ಸಾಮೂಹಿಕವಾಗಿ ಪೂಜೆ ಸಲ್ಲಿಸಲಾಯಿತು.
ಸಮಾಜದ ಗೌರವಾಧ್ಯಕ್ಷ, ನಿಕಟಪೂರ್ವ ಅಧ್ಯಕ್ಷರಾದ ರಂಗನಾಥ ಬಾಬು ನೈತ್ರುತ್ವ ದಲ್ಲಿ ನೂತನ ಅಧ್ಯಕ್ಷರಾದ ನಾಗರಾಜ ಕೂಸಮಾ ರವರ ನೇತೃತ್ವದಲ್ಲಿ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಸಂಸ್ಥಾಪಕ ಸದಸ್ಯ ಹಾಗೂ ರಾಜ್ಯ ಹಟಗಾರ ಸಮಾಜದ ಗೌರವಾಧ್ಯಕ್ಷರು ಮತ್ತು ಹಿರಿಯರಾದ ಆರ್.ಸಿ.ಘಾಳೆ, ಜಿಲ್ಲಾ ಸ್ವಕುಳಸಾಲಿ ಸಮಾಜದ ಅಧ್ಯಕ್ಷ ನಾರಾಯಣರಾವ ಸಿಂಘಾಡೆ, ಸಪ್ತ ನೇಕಾರ ಸೇವಾ ಸಂಘದ ಅಧ್ಯಕ್ಷರಾದ ಶಿವಲಿಂಗಪ್ಪಾ ಅಷ್ಟಗಿ ಕಲಬುರಗಿ ಹಟಗಾರ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಚನ್ನಮಲಪ್ಪ ನಿಂಬೆಣ್ಣಿ, ಜಿಲ್ಲಾ ದೇವಾಂಗ ಸಮಾಜದ ಅಧ್ಯಕ್ಷ ಕಣ್ಣಿ ಹಣಮಂತ, ಜಿಲ್ಲಾ ರುದ್ರಸಾಲಿ ಸಮಾಜದ ಪ್ರಧಾನ ಕಾರ್ಯದರ್ಶಿ ಮ್ಯಾಳಗಿ ಚಂದ್ರಶೇಖರ್, ಸದ್ಗುರು ದಾಸಿಮಯ್ಯ ಕಾನೂನು ಸೇವಾ ಸಂಸ್ಥೆಯ ಸಂಚಾಲಕರಾದ ನ್ಯಾಯವಾದಿ ಜೇನವೆರಿ ವಿನೋದಕುಮಾರ ಪಾಲಗೊಂಡಿದ್ದರು.
ವಿಜಯಕುಮಾರ ತ್ರೀವೇದಿ ಯವರ ಸ್ವಾಗತಿಸಿ, ನಾಗರಾಜ ಕೂಸಮಾ ಮಾತನಾಡಿ ಸಮಾಜದ ಜಾಗ್ರತಿ ಮೂಡಿಸುವಲ್ಲಿ ಮತ್ತು ನೇಕಾರ ಸಂಘಟನೆ ಕಾರ್ಯಗಳು ಜರಗುತ್ತಿವೆ, ಶೈಕ್ಷಣಿಕವಾಗಿ ಮುಂದೆ ಬಂದ ಸಮಾಜ ಭಾಂದವರು ಹೆಚ್ಚಿನ ರೀತಿಯಲ್ಲಿ ಸಹಾಯ, ಸಹಕಾರ ನೀಡಿದರೆ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಸಾದ್ಯ ವಾಗುತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆರ. ಸಿ. ಘಾಳೆ ಮಾತನಾಡಿ ಶ್ರೀ ಮಾರ್ಖಂಡೇಶ್ವರರ ಭಕ್ತಿ ಸೇವೆಯನ್ನು ಎಲ್ಲಾ ನೇಕಾರರು ಅಳವಡಿಸಿಕೊಂಡು ಸೌಹಾರ್ದ ರೀತಿಯಲ್ಲಿ ಭಾಳಿ ಬದುಕು ರೂಪಿಸುವ ಕಾರ್ಯ ವಾಗಬೇಕು ಎಂದು ಕರೆ ನೀಡಿದರು.
ಸಾಮಾಜಿಕ ಮತ್ತು ರಾಜಕೀಯವಾಗಿ ನಮ್ಮ ಹಕ್ಕು ಪಡೆಯಲು ಯುವಕರು ಹೋರಾಟ ರೂಪಿಸಬೇಕು ಎಂದು ತಿಳಿಸಿದರು.
ಕೊನೆಯಲ್ಲಿ ಜಿಲ್ಲಾ ನೇಕಾರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಾಂತಕುಮಾರ ಯಳಸಂಗಿ ಮಾತನಾಡಿ ಧಾರ್ಮಿಕವಾಗಿ ಒಗ್ಗೂಡಲು ಶ್ರಾವಣ ಮಾಸದಲ್ಲಿ ಇಂತಹ ಕಾರ್ಯಕ್ರಮಗಳು ಪ್ರೇರಣೆ ನೀಡುತ್ತವೆ ಎಂದು ತಿಳಿಸಿದರು.
ಹೀಗೆಯೇ ನೇಕಾರರ ಪ್ರತಿಯೊಂದು ಕಾರ್ಯಕ್ರಮಗಳು ಹಮ್ಮಿಕೊಂಡು, ಸರಿಯಾಗಿ ಯುವಕರು ಬಳಸಿಕೊಂಡು ಅಭಿವೃದ್ಧಿ ಹೊಂದಲು ಪ್ರಯತ್ನ ಮಾಡೋಣ ವೆಂದು ತಿಳಿಸಿದರು ರಕ್ಷಾ ಭಾವ ಸಂಗಮ ಕಾರ್ಯಕ್ರಮದಲ್ಲಿ ರಾಜಗೋಪಾಲ ಭಂಡಾರಿ ಹಾಗೂ ಇತರರು ಉಪಸ್ಥಿತರಿದ್ದರು.