ಅನೇಕ ರೋಗಗಳಿಗೆ ಮಾನಸ್ಸಿಕ ಒತ್ತಡವು ಕಾರಣ

0
320

ಕಲಬುರಗಿ: ವೈದ್ಯರ ಮಾರ್ಗದರ್ಶನದಲ್ಲಿ ದೈಹಿಕ ಮತ್ತು ಮಾನಸ್ಸಿಕ ಆರೋಗ್ಯವನ್ನು ಕಾಪಾಡಿಕೊಂಡು ಸಕಾರಾತ್ಮಕ ಧೋರಣೆಯಿಂದ ವಾಸ್ತವಿಕ ಪ್ರಜ್ಞೆ ಹೆಚ್ಚಿಸಿಕೊಂಡು ನೆಮ್ಮದಿಯ ಮನಸ್ಸಿನಿಂದ ಜೀವನ ಯಶಸ್ವಿಗೊಳಿಸಬೇಕಾಗಿದೆ ಎಂದು “ಸಮಾಧಾನ ಚಿತ್ತರಾಗಿರಿ” ಎಂಬ ಪುಸ್ತಕ ಬಿಡುಗಡೆಗೊಳಿಸಿದ ಪದ್ಮಶ್ರೀ ಪುರಸ್ಕ್ರತರು ನಿವೃತ್ತ ಮನೋವೈದ್ಯ ಪ್ರಧ್ಯಾಪಕರಾದ ಸಿ.ಆರ್. ಚಂದ್ರಶೇಖರ ಉತ್ತಮ ಆರೋಗ್ಯದ ಬಗ್ಗೆ ಮಾತನಾಡಿದರು.

ರೋಗಗಳು ಬರಲು ಅನೇಕ ಕಾರಣಗಳಿವೆ ಅಪೌಷ್ಠಿಕತೆ, ಮಲೀನ ಪರಿಸರ, ವಿಷ ವಸ್ತುಗಳು, ರೋಗಾಣುಗಳು ಇತ್ಯಾದಿ ಇವುಗಳ ಜೊತೆಗೆ ಮಾನಸ್ಸಿಕ ಒತ್ತಡವು ಸೇರಿಕೊಂಡರೆ ಬೆಂಕಿಗೆ ಬಿರುಗಾಳಿ ಸೇರಿದಂತೆ ಆಗುತ್ತದೆ. ಇಂದು ಹೆಚ್ಚಿನ ಜನರನ್ನು ಕಾಡುತ್ತಿರುವ ಅನೇಕಾ ಅನೇಕ ರೋಗಗಳು ಬರಲು ಮಾನಸ್ಸಿಕ ಒತ್ತಡವೇ ಕಾರಣವೆಂದು ಹೇಳುತ್ತಾ, ಅದರಲ್ಲೂ ನಗರ ಪ್ರದೇಶಗಳಲ್ಲಿ ಕಂಡುಬರುವ ಆಮ್ಲಸ್ಥಿತಿ (ಹೈಪರ ಆಸಿಡಿಟಿ), ಜಟರದ ಹುಣ್ಣು (ಅಲ್ಸರ) ಕರುಳುರಿತ (ಆಮ್ಲಶಂಕೆ ಬೇಧಿ), ಅಧಿಕರಕ್ತದೊತ್ತಡ, ಹೃದಯಘಾತ, ಸಿಹಿಮೂತ್ರ ರೋಗ, ಮೈಗ್ರೇನ್, ಖಿನ್ನತೆ, ಆತಂಕ, ಮನೋರೋಗಗಳು, ಆತ್ಮಹತ್ಯೆ, ಮಾಧ್ಯ-ಮಾದಕ ವಸ್ತುಗಳ ದುರ್ಬಳಕೆ, ಅಪರಾದ ಪ್ರವೃತ್ತಿ ಹೆಚ್ಚುತ್ತಿರುವ ಅಪರಾದಗಳು ಇವೆಲ್ಲ ಮಾನಸ್ಸಿಕ ಒತ್ತಡದ ಕೊಡುಗೆಗಳೆ, ಇವುಗಳು ಹೆಚ್ಚಾದಾಗ ನಮಗೆ ಅರಿವಿಲ್ಲದಂತೆ ಅನೇಕ ರೀತಿಯ ವರ್ತನೆಗಳು ತೋರುತ್ತಾರೆ ಎಂದು ತಿಳಿಸಿದ್ದರು.

Contact Your\'s Advertisement; 9902492681

ವಾಸ್ತವಿಕತೆಯನ್ನು, ಸತ್ಯುವನ್ನು ಒಪ್ಪದೆ ನಿರಾಕರಿಸುವುದು, ಕಲ್ಪನಾಲೋಕದಲ್ಲಿ ವಿಹರಿಸುವುದು. ಕಷ್ಟ, ಸಮಸ್ಯೆ ದ್ವಂದ್ವವನ್ನು ಸುಪ್ತಮನಸ್ಸಿನೊಳಗೆ ತಳ್ಳಿ ಮರೆತಂತೆ ಇರುವುದು. ಆದ ತಪ್ಪು ಕಷ್ಟ-ನಷ್ಟಗಳಿಗೆ ಇತರರನ್ನು ದೂಷಿಸುವುದು ದುರಾಷ್ಟ್ರ ವಿಧಿಲಿಖಿತ ಎಂದುಕೊಳ್ಳುವುದು. ಮಾನಸ್ಸಿಕ ಒತ್ತಡವೇ ಕಾರಣ ಅಂತಹ ಸಮಯದಲ್ಲಿ ವ್ಯಕ್ತಿ ತನ್ನ ನಿಲುವು, ಧೋರಣೆಗಳಲ್ಲಿ, ಜೀವನಶೈಲಿಯಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳುತ್ತ ಹಣದಿಂದ ಔಷಧವನ್ನು ವೈದ್ಯರನ್ನು ಖರೀದಬಹುದು ಆದರೆ ಆರೋಗ್ಯವನ್ನು ಖರೀದಿಸಲು ಸಾಧ್ಯವಿಲ್ಲ ದುರಾಸೆ, ಅನಗತ್ಯ ನಿರೀಕ್ಷೆಗಳು ಕಡಿಮೆ ಮಾಡಿ, ಜ್ಞಾನ ಕೌಶಲ್ಯಗಳನ್ನು ಹೆಚ್ಚಿಸಿಕೊಂಡು ಆರೋಗ್ಯ ಪಾಲನೆಗೆ ಹಿತಮಿತ ಆಹಾರ ಸೇವಿಸುವಂತ ಮುಂಜಾಗ್ರತೆ ಕ್ರಮ, ಸಾಧನೆ, ಸತತಪ್ರಯತ್ನಗಳಿಂದ ಶೇ. 75% ಪ್ರತಿಶತ ರೋಗಗಳು ಬರದಂತೆ ಮಾಡಲು ಯವಾಗ ಸಾಧ್ಯವಿದೆ ಎಂದರೆ ಡಾ. ಸಿ.ಆರ್. ಚಂದ್ರಶೇಖರರವರು ಬರೆದು ಇಂದು ಬಿಡುಗಡೆಗೊಳಿಸಿದ ಚಿಂತೆ, ಭಯ, ಕೋಪ, ದುಃಖ, ಬಿಟ್ಟು ನೆಮ್ಮದಿಯ ಮನಸ್ಸಿನಿಂದ ಜೀವನದ ಯಶಸ್ಸು ಕಾಣಬೇಕೆಂದರೆ ಸಮಾಧಾನ ಚಿತ್ತರಾಗಿರಿ ಎಂಬ ಪುಸ್ತಕ ನೀವು ಓದಲೇಬೇಕು. ಇಂದು ನಾವು ಸಾವಿರಾರು ರೂಪಾಯಿ ದುಂದುವೆಚ್ಚ ಮಾಡುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ನಮ್ಮ ನೆಮ್ಮದಿಯ ಜೀವನಕ್ಕೆ ಮೌಲಿಕ ವಿಷಯಗಳನ್ನೊಳಗೊಂಡ ಕೇವಲ ರೂ. 100/- ಬೆಲೆಯುಳ್ಳ ಈ ಪುಸ್ತಕ ನಾವು-ನಿವೆಲ್ಲರು ಓದಲೇಬೇಕೆಂದು ವಿದ್ಯಾನಗರ ವೆಲ್‍ಫೇರ ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಂದಿನ ದಿನಗಳಲ್ಲಿ ಹೈದ್ರಾಬಾದ ಕರ್ನಾಟ ಶಿಕ್ಷಣ ಸಂಸ್ಥೆಯ ಬಸವೇಶ್ವರ ಆಸ್ಪತ್ರೆಯ ಸಹಯೋಗದೊಂದಿಗೆ ಸಾಧ್ಯವಾದಷ್ಟು ಕಡಿಮೆ ದರದಲ್ಲಿ ಬಿ.ಪಿ. ಸ್ಯೂಗರ ಮತ್ತು ಕೊಲೆಸ್ಟ್ರಾಲ ತಪಾಸಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ಸೊಸೈಟಿಯ ಉಪಾಧ್ಯಕ್ಷರಾದ ಉಮೇಶ ಶೆಟ್ಟಿ ಭರವಸೆಯ ಮಾತುಗಳನ್ನಾಡಿದರು.

ಸದರಿ ಪುಸ್ತಕ ಬಿಡುಗಡೆ ಹಾಗು ಸಂವಾದ ಕಾರ್ಯಕ್ರಮದಲ್ಲಿ ಸೊಸೈಟಿಯ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷರಾದ ಉಮೇಶ ಶೆಟ್ಟಿ, ಕಾರ್ಯದರ್ಶಿ ಶಿವರಾಜ ಅಂಡಗಿ, ಎಸ್. ಎಸ್. ಹಿರೇಮಠ, ವೇ.ಮೂ. ಶಂಭುಲಿಂಗ ಶಾಸ್ತ್ರಿ, ವೇದಿಕೆ ಮೇಲೆ ಉಪಸ್ಥಿತರಿದ್ದರು.

ಸದರಿ ಸಂವಾದ ಕಾರ್ಯಕ್ರಮದಲ್ಲಿ ಡಾ.ಸಿ.ಆರ್.ಚಂದ್ರಶೇಖರ ಅವರು ಬಿ.ಪಿ. ಸ್ಯೂಗರ ಮತ್ತು ಕೊಲೆಸ್ಟ್ರಾಲ ಬರಲು ಕಾರಣಗಳೇನು ಕೇಳಿದ ಪ್ರಶ್ನೆಗಳಿಗೆ ಸ್ಪಂದಿಸಿದ ಸುಮಾರು 15 ಸಾರ್ವಜನಿಕರಿಗೆ 100/- ಬೆಲೆಯುಳ್ಳ ಪುಸ್ತಕ ಬಹುಮಾನವಾಗಿ ಕೊಟ್ಟಿದ್ದು ಒಂದು ವಿಶೇಷ ಅವರ ನಡೆ-ನುಡಿ ಸರಳತೆ ಜನರ ಆರೋಗ್ಯದ ಬಗ್ಗೆ ಇರುವ ಕಾಳಜಿಯಿಂದಲೇ ಲಕ್ಷಾಂತರ ಜನರಿಗೆ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಿದ್ದರಿಂದಲೇ ಅವರಿಗೆ ಪಾಲಕರ ಮತ್ತು ಮಕ್ಕಳ ದೇವತಾಮನುಷ್ಯ ಎಂದು ಖ್ಯಾತಿ ಎಂದು ಕರೆದಿದ್ದು, ಅರ್ಥಪೂರ್ಣವಾಗಿದೆ ಎಂದು ಶಿವರಾಜ ಅಂಡಗಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸದರಿ ಕಾರ್ಯಕ್ರಮದಲ್ಲಿ ಕಲಾವಿದರಾದ ಶಿವಕುಮಾರ ಹಿರೇಮಠ, ಸಿದ್ಧಣ್ಣ ದೇಸಾಯಿ ಕಲ್ಲೂರ, ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯರಾದ ಕಾಶಿನಾಥ ಚಿನ್ಮಳಿ, ನಾಗಭೂಷಣ ಹಿಂದೊಡ್ಡಿ, ಶಾಂತಯ್ಯ ಬೀದಿಮನಿ, ನಾಗರಾಜ ಹೆಬ್ಬಾಳ, ಸಂಗಣ್ಣ ತೆಲಗಾಣಿ, ಬಸವರಾಜ ಸಜ್ಜನ ಸೇರಿದಂತೆ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here