ಕಲಬುರಗಿ: ನಗರದ ಪತ್ರಿಕಾ ಭವನದ ಸಾಂಸ್ಕøತಿಕ ಸಭಾಂಗಣದಲ್ಲಿ ಆ.25 ರಂದು ಬೆಳಗ್ಗೆ 10.30 ಗಂಟೆಗೆ ಗುಲಬರ್ಗಾ ಹಟಗಾರ ಸಮಾಜ ಅಭಿವೃದ್ಧಿ ಸಂಘದಿಂದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ ಎಂದು ಪ್ರತಿಭಾ ಪುರಸ್ಕಾರ ಸಂಚಾಲಕ ಸೋಮಶೇಖರ ಧುತ್ತರಗಿ ತಿಳಿಸಿದ್ದಾರೆ.
ಬಸವಕಲ್ಯಾಣ ಸಸ್ತಾಪುರ ಶ್ರೀ ಸದ್ಗುರು ಶರಣ ಶಿವಲಿಂಗೇಶ್ವರ ಮಠದ ಡಾ.ಈಶ್ವರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ನೆಲೋಗಿ ಸಮಾರಂಭ ಉದ್ಘಾಟಿಸಲಿದ್ದಾರೆ. ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಪ್ರದೀಪ ಗಣೇಶ ಸಂಗಾ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.
ಬಾಗಲಕೋಟ ಜಿಲ್ಲಾ ಮುಧೋಳದ ಎಸ್.ಆರ್.ಕಂಠಿ ಪದವಿ ಮಹಾವಿದ್ಯಾಲಯ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಸುಲೋಚನಾ ಪಿ ಚಂದಾ (ಜವಳಗಿ) ಅತಿಥಿ ಉಪಸ್ಯಾಸಕರಾಗಿ ಆಗಮಿಸಲಿದ್ದಾರೆ. ಗುಲಬರ್ಗಾ ಹಟಗಾರ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ಚನಮಲ್ಲಪ್ಪ ನಿಂಬೇಣಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ನಾಗಮ್ಮ ಶಿವಶಂಕರ ಗೊಬ್ಬೂರ, ಆರ್‍ಟಿಓ ನಿವೃತ್ತ ಅಧೀಕ್ಷಕರಾಗಿದ್ದ ಶಿವಶಂಕರ ಮುನ್ನೋಳ್ಳಿ, ಪಿಕಾರ್ಡ ಬ್ಯಾಂಕ್ ನಿವೃತ್ತ ಅಧಿಕಾರಿ ರಾಚಪ್ಪ ಚಂದಾ, ಡಾ.ಬಸವರಾಜ ಚನ್ನಾ, ಸಾಫ್ಟವೇರ ಇಂಜನಿಯರ್ ವಿಜಯಕುಮಾರ ಎಂ.ಮೇತ್ರೆ ಅವರಿಗೆ ಸನ್ಮಾನಿಸಲಾಗುವುದು ಎಂದ ಅವರು, ಸಂಘದ ಗೌರವಾಧ್ಯಕ್ಷ ಶಿವಪುತ್ರ್ರಪ್ಪ ಭಾವಿ, ಸಂಘಟನಾ ಕಾರ್ಯದರ್ಶಿ ರಾವಬಹಾದ್ದರೂ ರೂಗಿ, ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಸೊನ್ನದ ಅವರು ಉಪಸ್ಥಿತರಿರಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ನೇಕಾರ ಬಾಂಧವರು ಸಮಾರಂಭಕ್ಕೆ ಆಗಮಿಸಿ ಯಶಸ್ವಿಗೊಳಿಸುವಂತೆ ಅವರು ಕೋರಿದ್ದಾರೆ.