ತುಂತುರು ಮಳೆಯಲ್ಲೂ ಆಕಸ್ಮಿಕ ಬೆಂಕಿಯಿಂದ ಹೊತ್ತಿ ಉರಿದ ದ್ವಿಚಕ್ರವಾಹನ

0
25

ಕಲಬುರಗಿ: ಜಿಟಿ ಜಿಟಿ ಮಳೆಯ ನಡುವೆಯೂ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ದ್ವಿಚಕ್ರವಾಹನವು ನೋಡು ನೋಡುತ್ತಿದ್ದಂತೆಯೇ ಹೊತ್ತಿ ಉರಿದ ಘಟನೆ ಜಿಲ್ಲೆಯ ನೂತನ ಕಮಲಾಪೂರ್ ತಾಲ್ಲೂಕಿನ ಕಲಮೂಡ್ ಗ್ರಾಮದಲ್ಲಿ ವರದಿಯಾಗಿದೆ.

ಕಲಮೂಡ್ ನವ ನಾಯಕ್ ತಾಂಡಾ ನಿವಾಸಿ ಸುಭಾಷ್ ರಾಠೋಡ್ ಅವರಿಗೆ ಸೇರಿದ ದ್ವಿಚಕ್ರವಾಹನವನ್ನು ಚಾಲನೆ ಮಾಡಲು ಕಿಕ್ ಹೊಡೆಯುವಾಗ ದಿಢೀರನೇ ಬೆಂಕಿ ಕಾಣಿಸಿಕೊಂಡಿತು. ಬೆಂಕಿ ಕ್ಷಣಾರ್ಧದಲ್ಲಿಯೇ ಇಡೀ ದ್ವಿಚಕ್ರವಾಹನಕ್ಕೆ ವ್ಯಾಪಿಸಿಕೊಂಡಿತು. ಗಾಬರಿಗೊಂಡ ಗ್ರಾಮಸ್ಥರು ನೀರು, ಮಣ್ಣು ಹಾಗೂ ಹಸಿ ಬಟ್ಟೆ ಹಾಕಿ ಬೆಂಕಿಯನ್ನು ಶಮನಗೊಳಿಸಿದರು.

Contact Your\'s Advertisement; 9902492681

ಆದಾಗ್ಯೂ, ಜಿಟಿ ಜಿಟಿ ಮಳೆಯಲ್ಲಿಯೂ ದ್ವಿಚಕ್ರವಾಹನವು ಬೆಂಕಿಯಿಂದ ಸುಟ್ಟು ಹೋಗಿರುವುದು ಗ್ರಾಮಸ್ಥರಲ್ಲಿ ಅಚ್ಚರಿಯನ್ನು ಹುಟ್ಟಿಸಿದೆ. ಈ ಕುರಿತು ಕಮಲಾಪೂರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here